ಬರೋಬ್ಬರಿ 33 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿಟ್ಟಿದ್ದ ಚಿನ್ನದಲ್ಲಿ 1 ಲಕ್ಷ ಕೆಜಿ ಚಿನ್ನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಮರಳಿ ಭಾರತಕ್ಕೆ ಸ್ಥಳಾಂತರಿಸಿದೆ. ಆರ್ಥಿಕ ಬಿಕ್ಕಟ್ಟಿನ ವೇಳೆ ಒತ್ತೆಯಿಟ್ಟಿದ್ದ ಚಿನ್ನ ಇದೀಗ ಮರಳಿ ಭಾರತ ಸೇರುತ್ತಿದೆ.
ನವದೆಹಲಿ(ಮೇ.31) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಹೊಸ ಇತಿಹಾಸ ರಚಿಸಿದೆ. ಬರೋಬ್ಬರಿ 33 ವರ್ಷಗಳ ಬಳಿಕ ವಿದೇಶಗಳಲ್ಲಿಟ್ಟಿದ್ದ ಚಿನ್ನವನ್ನು ಭಾರತಕ್ಕೆ ಸ್ಥಳಾಂತರಿಸುತ್ತಿದೆ. 1991ರ ಆರ್ಥಿಕ ಬಿಕ್ಕಟ್ಟಿಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಚಿನ್ನವನ್ನು ಒತ್ತೆ ಇಡುವ ನಿರ್ಧಾರ ಭಾರಿ ವಿರೋಧ ಹಾಗೂ ಟೀಕೆಗೆ ಗುರಿಯಾಗಿತ್ತು. ಆದರೆ ಪರಿಸ್ಥಿತಿ ಎದುರಿಸಲು ಅನಿವಾರ್ಯವಾಗಿತ್ತು. ಇದೀಗ 1 ಲಕ್ಷ ಕೆಜಿ ಚಿನ್ನವನ್ನು ಇಂಗ್ಲೆಂಡ್‌ನಿಂದ ಭಾರತಕ್ಕೆ ಸ್ಥಳಾಂತರಿಸಿದೆ. ಇಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಚಿನ್ನವನ್ನೂ ಭಾರತಕ್ಕೆ ಸ್ಥಳಾಂತರಿಸಲು ಆರ್‌ಬಿಐ ಮುಂದಾಗಿದೆ.
1991ರ ಬಳಿಕ ಇಷ್ಟು ದೊಡ್ಡ ಮೊತ್ತದಲ್ಲಿ ಆರ್‌ಬಿಐ ಚಿನ್ನ ಸ್ಥಳಾಂತರಿಸುತ್ತಿರುವುದು ಇದೇ ಮೊದಲು. ಮುಂಬೈನ ಮಿಂಟ್ ರಸ್ತೆಯಲ್ಲಿರುವ ಆರ್‌ಸಿಬಿ ಕಚೇರಿಯ ಹಾಗೂ ನಾಗ್ಪುರದಲ್ಲಿರುವ ಆರ್‌ಬಿಐ ಕಚೇರಿಗೆ ಈ ಚಿನ್ನವನ್ನು ಸ್ಥಳಾಂರಿಸಲಾಗಿದೆ. ಕೇಂದ್ರ ಹಣಕಾಸು ಸಚಿವಾಲಯ, ಆರ್‌ಬಿಐ ಸೇರಿದಂತೆ ಇತರ ಕೆಲ ಸರ್ಕಾರಿ ಎಜೆನ್ಸಿಗಳ ನೆರವಿನೊಂದಿಗೆ ಚಿನ್ನವನ್ನು ಭಾರತಕ್ಕೆ ತರಲಾಗಿದೆ. ಇದಕ್ಕಾಗಿ ಸೂಕ್ಷ್ಮ ಪ್ಲಾನ್ ರೂಪಿಸಿ ಚಿನ್ನ ಸ್ಥಳಾಂತರಿಸಾಗಿದೆ. ಭಾರಿ ಭದ್ರತೆಯೊಂದಿಗೆ ಚಿನ್ನ ಸ್ಥಳಾಂತರ ಮಾಡಲಾಗಿದೆ. ಈ ನಡೆಯಿಂದ ಆರ್‌ಬಿಐ ಸಂಪತ್ತು ವೃದ್ಧಿಸಿದೆ.
ಒಂದೇ ವರ್ಷದಲ್ಲಿ 500 ರೂ ಮುಖಬೆಲೆಯ ನೋಟುಗಳ ಬಳಕೆ ಭಾರೀ ಏರಿಕೆ!
ಸದ್ಯ ಆರ್‌ಬಿಐ 100 ಟನ್ ಅಥವಾ 1 ಲಕ್ಷ ಕೆಜಿ ಚಿನ್ನವನ್ನು ಆರ್‌ಬಿಐ ಸಂಗ್ರಹಾಲಯಕ್ಕೆ ಸ್ಥಳಾಂತರಿಸಿದೆ. 1991ರಲ್ಲಿ ಭಾರತ ವಿದೇಶಿ ವಿನಿಮಯ ಬಿಕ್ಕಟ್ಟು ಎದುರಿಸುತ್ತು. ಇದರ ಪರಿಣಾಮ ಚಿನ್ನ ಅಡವು ಇಡಲು ಮುಂದಾಗಿತ್ತು. ಈ ಪೈಕಿ 15 ವರ್ಷದ ಹಿಂದೆ ಆರ್‌ಬಿಐ ಅಂತಾರಾಷ್ಟ್ರೀಯ ಮಾನಿಟರಿ ಫಂಡ್‌ನಿಂದ 200 ಟನ್ ಚಿನ್ನವನ್ನು ಭಾರತಕ್ಕೆ ತರಲಾಗಿದೆ. 1991ರಲ್ಲಿ ಅಂದಿನ ಪ್ರಧಾನಿ ಚಂದ್ರಶೇಖರ್ ಚಿನ್ನ ಅಡವಿಟ್ಟು ವಿದೇಶಿ ವಿನಿಮಯ ಬಿಕ್ಕಟ್ಟು ಪರಿಹರಿಸಿದ್ದರು. ಹೀಗೆ ಅಡವಿಟ್ಟಿದ್ದ ಚಿನ್ನಗಳನ್ನು ಇದೀಗ ಮರಳಿ ಭಾರತಕ್ಕೆ ತರುವ ಪ್ರಕ್ರಿಯೆಗೆ ವೇಗ ಸಿಕ್ಕಿದೆ.
ಬಹುತೇಕ ದೇಶಗಳು ಯನೈಟೆಡ್ ಕಿಂಗ್‌ಡಮ್ ಬ್ಯಾಂಕ್‌ನಲ್ಲಿ ಚಿನ್ನ ಇಡುತ್ತದೆ. ಭದ್ರತೆ, ದೇಶದ ಆರ್ಥಿಕ ಸುರಕ್ಷತೆ ಸೇರಿದಂತೆ ಹಲವು ಕಾರಣಗಳಿಂದ ಪ್ರತಿ ದೇಶ ಚಿನ್ನವನ್ನು ಇಂಗ್ಲೆಂಡ್ ಬ್ಯಾಂಕ್‌ಗಳಲ್ಲಿ ಇಡುವುದು ಸಾಮಾನ್ಯ. ಹೀಗೆ ಇಟ್ಟಿರುವ ಚಿನ್ನಕ್ಕೆ ಆಯಾ ದೇಶಗಳು ಗೌರವ ಧನ ನೀಡಬೇಕು. ಹೆಚ್ಚಿನ ದೇಶಗಳಲ್ಲಿ ಚಿನ್ನವನ್ನು ಅಷ್ಟು ಸುರಕ್ಷತೆಯಿಂದ ಇಡಲು ಯಾವುದೇ ಸಂಗ್ರಹಾಲಯಗಳಿರುವುದಿಲ್ಲ. ಇದೀಗ ಭಾರತ ಎರಡು ಸಂಗ್ರಹಾಲಯ ಹೊಂದಿದೆ. ಇನ್ನು ಮುಂದೆ ಬಾಡಿಗೆ ನೀಡಿ ವಿದೇಶಗಲ್ಲಿ ಚಿನ್ನ ಇಡುವ ಪರಿಸ್ಥಿತಿ ಭಾರತಕ್ಕೆ ಇಲ್ಲ.
ವಿದೇಶದಲ್ಲಿ ಆರ್‌ಬಿಐ ಬರೋಬ್ಬರಿ 413.8 ಟನ್ ಚಿನ್ನವನ್ನು ಇಟ್ಟಿದೆ. ಅಂದರೆ ಬರೋಬ್ಬರಿ 4 ಲಕ್ಷ ಕೆಜಿ ಚಿನ್ನ ಇಡಲಾಗಿದೆ. ಕೆಲ ವರ್ಷಗಳ ಹಿಂದೆ ಆರ್‌ಬಿಐ ವಿದೇಶಗಳಿಂದ ಚಿನ್ನ ಖರೀದಿಯಲ್ಲಿ ತೊಡಗಿದೆ. ಈ ಮೂಲಕ ಆರ್‌ಬಿಐ ತನ್ನ ಸಂಪತ್ತನ್ನು ವರ್ಷದಿಂದ ವರ್ಷಕ್ಕೆ ವೃದ್ಧಿಸಿದೆ.
ಭಾರತದ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದೆ ಬರೋಬ್ಬರಿ 78 ಸಾವಿರ ಕೋಟಿ ರೂ ಅನಾಥ!
2019ರಲ್ಲಿ ಆರ್‌ಬಿಐ ಬಳಿ 618.2 ಟನ್ ಚಿನ್ನದ ಸಂಗ್ರಹವಿತ್ತು. 2020ರ ವೇಳೆಗೆ ಚಿನ್ನ 661.4 ಟನ್‌ಗೆ ಏರಿಕೆಯಾಗಿತ್ತು.2021ರ ಹೊತ್ತಿಗೆ 695.3 ಟನ್, 2022ಕ್ಕೆ 760.4 ಟನ್, 2023ಕ್ಕೆ 794.6 ಟನ್ ಹಾಗೂ 2024ರ ವೇಳೆಗೆ 822.1 ಟನ್ ಚಿನ್ನ ಸಂಗ್ರಹ ಹೊಂದಿದೆ.