ದೇಶದ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ ಹಣ 78213 ಕೋಟಿ ರು.ಗೆ ಏರಿಕೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಹಣ ಉಳಿತಾಯ ಖಾತೆಗಳಲ್ಲಿದ್ದು, ಅದಕ್ಕೆ ಯಾರೂ ಹಕ್ಕು ಮಂಡಿಸಿಲ್ಲ.
ಮುಂಬೈ (ಮೇ.31): ದೇಶದ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ ಹಣ 78213 ಕೋಟಿ ರು.ಗೆ ಏರಿಕೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಹಣ ಉಳಿತಾಯ ಖಾತೆಗಳಲ್ಲಿದ್ದು, ಅದಕ್ಕೆ ಯಾರೂ ಹಕ್ಕು ಮಂಡಿಸಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಠೇವಣಿದಾರರ ಶಿಕ್ಷಣ ಹಾಗೂ ಜಾಗೃತಿ ನಿಧಿಯ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ಇದೆ. 2023ರ ಮಾರ್ಚ್‌ನಲ್ಲಿ ವಾರಸುದಾರರಿಲ್ಲದ ಹಣದ ಮೊತ್ತ 62 225 ಕೋಟಿ ರು. ಇತ್ತು. ಅದು ಒಂದೇ ವರ್ಷದಲ್ಲಿ ಶೇ.26ರಷ್ಟು ಅಂದರೆ 16 ಸಾವಿರ ಕೋಟಿ ರು.ನಷ್ಟು ಹೆಚ್ಚಳವಾಗಿದೆ. ಈಗ 78 213 ಕೋಟಿ ರು.ಗೆ ಏರಿಕೆಯಾಗಿದೆ.
ಬರೋಬ್ಬರಿ 500 ಗ್ರಾಂ ಚಿನ್ನ ಕಳ್ಳಸಾಗಣೆ ವೇಳೆ ಶಶಿ ತರೂರ್ ಆಪ್ತನ ಸೆರೆ, ಸಂಸದ ಶಾಕ್!
10 ವರ್ಷ ಹಾಗೂ ಅದಕ್ಕಿಂತ ಹೆಚ್ಚು ಅವಧಿಯಿಂದ ಯಾರೂ ಹಕ್ಕು ಮಂಡಿಸಿಲ್ಲದ ಹಣವನ್ನು ಸಹಕಾರಿ ಬ್ಯಾಂಕುಗಳು ಸೇರಿದಂತೆ ದೇಶದ ಎಲ್ಲ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕಿನ ಠೇವಣಿದಾರರ ಶಿಕ್ಷಣ ಹಾಗೂ ಜಾಗೃತಿ ನಿಧಿಗೆ ವರ್ಗಾಯಿಸುತ್ತವೆ.
ನಿಷ್ಕ್ರಿಯ ಖಾತೆಗಳಲ್ಲಿ ಅನಾಥವಾಗಿರುವ ಈ ಹಣವನ್ನು ಬ್ಯಾಂಕ್ ಖಾತೆದಾರರಿಗೆ ತಲುಪಿಸಲು ನೆರವಾಗುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ವರ್ಷಾರಂಭದಲ್ಲಿ ಸಮಗ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಅಲ್ಲದೆ, ಇಂತಹ ಖಾತೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ, ಅವ್ಯವಹಾರವಾಗದಂತೆ ನೋಡಿಕೊಳ್ಳುವಂತೆ, ನಿಷ್ಕ್ರಿಯ ಖಾತೆಗಳ ಗ್ರಾಹಕರನ್ನು ಪತ್ತೆ ಹಚ್ಚುವಂತೆಯೂ ಬ್ಯಾಂಕುಗಳಿಗೆ ನಿರ್ದೇಶನ ನೀಡಿತ್ತು.
ತಮ್ಮ ಹೆಸರಿನಲ್ಲಿ ಯಾವುದಾದರೂ ಅನಾಥ ಹಣ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ‘UDGAM’ ಎಂಬ ಪೋರ್ಟಲ್ ಅನ್ನೂ ಆರಂಭಿಸಿತ್ತು. ಆದರೂ ವಾರಸುದಾರರಿಲ್ಲದ ಹಣ ಹೆಚ್ಚಾಗಿದೆ.
ಜಮ್ಮುವಿನಲ್ಲಿ 150 ಅಡಿ ಆಳದ ಕಮರಿಗೆ ಉರುಳಿ ಬಿದ್ದ ಬಸ್, 22 ಶಿವ ಖೋರಿ ಯಾತ್ರಿಕರು ಬಲಿ, 69 ಮಂದಿಗೆ ಗಾಯ
ಚಿನ್ನದ ಬಾಂಡಲ್ಲಿ 27000 ಕೋಟಿ ರು. ಹೂಡಿಕೆ: ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆದಾರರು ಚಿನ್ನದ ಬಾಂಡ್‌ಗಳಲ್ಲಿ ಭರ್ಜರಿ 27000 ಕೋಟಿ ರು. ಹೂಡಿಕೆ ಮಾಡಿದ್ದಾರೆ. ಇದು ಕಳೆದ ವರ್ಷಕ್ಕಿಂತ 4 ಪಟ್ಟು ಹೆಚ್ಚು. ಹೀಗೆ ಹೂಡಿಕೆ ಮಾಡಿರುವ ಹಣವನ್ನು ಚಿನ್ನಕ್ಕೆ ಪರಿವರ್ತಿಸಿದರೆ ಅದು ಅಂದಾಜು 45 ಟನ್ ಚಿನ್ನಕ್ಕೆ ಸಮ ಎಂದು ಆರ್‌ಬಿಐ ಹೇಳಿದೆ. ಹಣಕಾಸು ವರ್ಷದಲ್ಲಿ ಆರ್‌ಬಿಐ ಒಟ್ಟು 4 ಹಂತದಲ್ಲಿ ಚಿನ್ನದ ಬಾಂಡ್ ಬಿಡುಗಡೆ ಮಾಡಿತ್ತು.