*ಕೋವಿಡ್ ಹಿನ್ನೆಲೆಯಲ್ಲಿ ಈ ಹಿಂದೆ ಟ್ರೇಡಿಂಗ್ ಅವಧಿಯನ್ನು ತಗ್ಗಿಸಿದ್ದ ಆರ್ ಬಿಐ.
*ಕೊರೋನಾ ಭೀತಿ ತಗ್ಗಿದ ಹಿನ್ನೆಲೆಯಲ್ಲಿ ಟ್ರೇಡಿಂಗ್ ಅವಧಿ ಹೆಚ್ಚಿಸಲು ತೀರ್ಮಾನ.
*ಪ್ರಸ್ತುತ ಬೆಳಗ್ಗೆ 10 ಗಂಟೆಗೆ ಮಾರುಕಟ್ಟೆ ಟ್ರೇಡಿಂಗ್ ಪ್ರಾರಂಭವಾಗುತ್ತಿದೆ.
ಮುಂಬೈ (ಏ.12): ಭಾರತೀಯ ರಿಸರ್ವ್ ಬ್ಯಾಂಕಿನಿಂದ (RBI) ನಿಯಂತ್ರಿಸಲ್ಪಡೋ ಮಾರುಕಟ್ಟೆಗಳ (Markets) ಟ್ರೇಡಿಂಗ್ (Trading) ಅವಧಿ ಏಪ್ರಿಲ್ 18ರಿಂದ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 3.30ಕ್ಕೆ ಮುಗಿಯಲಿದೆ. ದೇಶದಲ್ಲಿ ಕೋವಿಡ್-19 (COVID-19) ಭೀತಿ ತಗ್ಗಿದ ಹಿನ್ನೆಲೆಯಲ್ಲಿ ಕೊರೋನ ಪೂರ್ವದಲ್ಲಿದ್ದ ಸಮಯಾವಧಿಯನ್ನೇ ಮುಂದುವರಿಸಲು ಆರ್ ಬಿಐ (RBI) ನಿರ್ಧರಿಸಿದೆ. ಪ್ರಸ್ತುತ ಮಾರುಕಟ್ಟೆ ಬೆಳಗ್ಗೆ 10 ಗಂಟೆಗೆ ತೆರೆಯಲ್ಪಡುತ್ತಿದೆ.
ಆರ್ ಬಿಐನಿಂದ ನಿಯಂತ್ರಿಸಲ್ಪಡುತ್ತಿರೋ ವಿವಿಧ ಮಾರುಕಟ್ಟೆಗಳ ಟ್ರೇಡಿಂಗ್ ಅವಧಿಯನ್ನು ಕೋವಿಡ್ ಪೆಂಡಾಮಿಕ್ ಹಿನ್ನೆಲೆಯಲ್ಲಿ ಆರ್ ಬಿಐ 2020ರ ಏಪ್ರಿಲ್ 7ರಂದು ಬದಲಾಯಿಸಿತ್ತು. ಕೊರೋನಾ ವೈರಸ್ ಹರಡೋ ಭೀತಿ ಹಾಗೂ ಮಾರುಕಟ್ಟೆ ಕಾರ್ಯನಿರ್ವಹಣೆಯಲ್ಲಿನ ಅಡ್ಡಿಗಳನ್ನು ಗಮನಿಸಿ ಈ ನಿರ್ಧಾರವನ್ನು ಆರ್ ಬಿಐ ಕೈಗೊಂಡಿತ್ತು. ಆದ್ರೆ ನಂತರ ಮಾರುಕಟ್ಟೆಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ತಗ್ಗಿದ ಹಿನ್ನೆಲೆಯಲ್ಲಿ 2020ರ ನವೆಂಬರ್ 9ರಂದು ಟ್ರೇಡಿಂಗ್ ಅವಧಿಯನ್ನು ಮತ್ತೆ ಬದಲಾಯಿಸಲಾಗಿತ್ತು. ಆದ್ರೆ ಏಪ್ರಿಲ್ 18ರಿಂದ ಮಾರುಕಟ್ಟೆಗಳ ಟ್ರೇಡಿಂಗ್ ಅವಧಿ ಬೆಳಗ್ಗೆ 9ರಿಂದ ಮಧ್ಯಾಹ್ನ 3.30ರ ತನಕ ಇರಲಿದೆ ಎಂದು ಆರ್ ಬಿಐ ಹೊರಡಿಸಿರೋ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರಿ ಷೇರು ಖರೀದಿಸಿದ್ದರೂ ಟ್ವೀಟರ್ ನಿರ್ದೇಶಕರ ಮಂಡಳಿ ಸೇರದ ಎಲಾನ್ ಮಸ್ಕ್
ಕಳೆದ ವಾರ ಆರ್ ಬಿಐ ಹಣಕಾಸು ನೀತಿ ಸಮಿತಿಯ ದ್ವಿಮಾಸಿಕ ವರದಿ ಪ್ರಕಟಿಸೋ ಸಂದರ್ಭದಲ್ಲೇ ಆರ್ ಬಿಐ ಗವರ್ನರ್ ಶಕ್ತಿಕಾಂ ದಾಸ್, ಆರ್ ಬಿಐ ನಿಯಂತ್ರಿತ ಮಾರುಕಟ್ಟೆಗಳು ಏಪ್ರಿಲ್ 18ರಿಂದ ಬೆಳಗ್ಗೆ 9ರಿಂದ ಮಧ್ಯಾಹ್ನ 3.30ರ ತನಕ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದರು.ಕಾಲ್/ನೋಟಿಸ್/ ಟರ್ಮ್ ಹಣ, ಸರ್ಕಾರಿ ಸೆಕ್ಯುರಿಟೀಸ್ಗಳ ಮಾರ್ಕೆಟ್ ರೆಪೋ, ಟ್ರೈ ಪಾರ್ಟಿ ರೆಪೋ, ಕಮರ್ಷಿಯಲ್ ಪೇಪರ್ ಹಾಗೂ ಡೆಪಾಸಿಟ್ ಸರ್ಟಿಫಿಕೇಟ್ಗಳು, ಕಾರ್ಪೋರೇಟ್ ಬಾಂಡ್ ಗಳ ರೆಪೋ, ವಿದೇಶಿ ಕರೆನ್ಸಿ, ಭಾರತೀಯ ರೂಪಾಯಿ ಟ್ರೇಡ್ಸ್ ಮುಂತಾದವನ್ನು ಆರ್ ಬಿಐ ನಿಯಂತ್ರಿಸುತ್ತದೆ.
ರಷ್ಯಾ- ಉಕ್ರೇನ್ ಯುದ್ಧ ಬಿಕ್ಕಟ್ಟು ಮತ್ತು ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಶುಕ್ರವಾರ ತನ್ನ ದ್ವೈಮಾಸಿಕ ಸಾಲ ನೀತಿ ಪ್ರಕಟಿಸಿದ್ದು, ರೆಪೋ ದರವನ್ನು ಶೇ.4 ಮತ್ತು ರಿವರ್ಸ್ ರೆಪೋ ದರವನ್ನು ಹಿಂದಿನ ಶೇ.3.35ರಲ್ಲೇ ಮುಂದುವರೆಯಲು ನಿರ್ಧರಿಸಲಾಗಿದೆ. ಹೀಗಾಗಿ ಸಾಲದ ಮೇಲಿನ ಬಡ್ಡಿದರಗಳು ಮತ್ತು ಠೇವಣಿ ಮೇಲಿನ ಬಡ್ಡಿದರಗಳು ಯಥಾಸ್ಥಿತಿಯಲ್ಲೇ ಮುಂದುವರೆಯಲಿವೆ.
2022-23ನೇ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕ ಪ್ರಗತಿ ದರ ಹಿಂದಿನ ಅಂದಾಜಿಗಿಂತ ತಗ್ಗಬಹುದು ಎಂದು ಆರ್‌ಬಿಐ ಹೇಳಿದೆ. ಈ ಹಿಂದೆ ಜಿಡಿಪಿ ಬೆಳವಣಿಗೆ ದರ ಶೇ.7.8ರಷ್ಟಿರುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು, ಅದನ್ನು ಇದೀಗ ಶೇ.7.2ಕ್ಕೆ ಇಳಿಸಲಾಗಿದೆ. ರಷ್ಯಾ- ಉಕ್ರೇನ್ ಬಿಕ್ಕಟ್ಟು ಸೇರಿ ಜಾಗತಿಕ ಬೆಳವಣಿಗೆಗಳು ಆರ್ಥಿಕತೆ ಮೇಲೆ ಅಡ್ಡ ಪರಿಣಾಮ ಬೀರಬಹುದು ಎಂದು ಆರ್‌ಬಿಐ ಹೇಳಿದೆ.
ಬಿಟ್‌ಕಾಯಿನ್ ತನಿಖೆಗೆ ಭಾರತಕ್ಕೆ ಎಫ್‌ಬಿಐ ಬಂದಿಲ್ಲ: ಸಿಬಿಐ
ಈ ನಡುವೆ ಹಣದುಬ್ಬರ ದರ ನಿರೀಕ್ಷೆಗೆಂತ ವೇಗದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆರ್ಥಿಕತೆ ಉತ್ತೇಜನಕ್ಕೆ ಮಾರುಕಟ್ಟೆಗೆ ಹಣ ಪೂರೈಕೆ ಮಾಡಲು ಕೈಗೊಳ್ಳಲಾಗುತ್ತಿದ್ದ ಕ್ರಮಗಳನ್ನು ಹಂತಹಂತವಾಗಿ ಸಡಿಲ ಮಾಡುವುದಾಗಿ ಆರ್‌ಬಿಐ ಹೇಳಿದೆ. ಈ ಮೂಲಕ ಮುಂಬರುವ ಸಾಲ ನೀತಿಗಳಲ್ಲಿ ಮತ್ತೆ ಬಡ್ಡಿದರ ಏರಿಕೆಯ ಸುಳಿವು ನೀಡಿದೆ. 2021-22ನೇ ಆರ್ಥಿಕ ಸಾಲಿನಲ್ಲಿ ಮುಂಬೈ ಅತೀಹೆಚ್ಚು ನೇರ ತೆರಿಗೆಗಳನ್ನು (Direct Taxes) ಸಂಗ್ರಹಿಸೋ ಮೂಲಕ ಮೆಟ್ರೋ (Metro) ನಗರಗಳಲ್ಲಿ (Cities) ಮೊದಲ ಸ್ಥಾನ ಗಳಿಸಿದೆ. ಮುಂಬೈನಲ್ಲಿ (Mumbai) 2021-22ನೇ ಆರ್ಥಿಕ ಸಾಲಿನಲ್ಲಿ 4.48 ಲಕ್ಷ ಕೋಟಿ ರೂ. ( 4.48 ಟ್ರಿಲಿಯನ್ ರೂ.) ತೆರಿಗೆ (Tax) ಸಂಗ್ರಹವಾಗಿದೆ. ಇನ್ನು ನೇರ ತೆರಿಗೆಗಳ ಸಂಗ್ರಹದಲ್ಲಿ ಬೆಂಗಳೂರು (Bengaluru) ದ್ವಿತೀಯ ಸ್ಥಾನದಲ್ಲಿದ್ದು, ಕಳೆದ ಸಾಲಿನಲ್ಲಿ 1.69 ಲಕ್ಷ ಕೋಟಿ ರೂ. (1.69 ಟ್ರಿಲಿಯನ್ ರೂ) ಸಂಗ್ರಹವಾಗಿದೆ.