Bank Holiday ಇಂದು ಬ್ಯಾಂಕ್ ರಜಾ ದಿನವೇ? ಈ ರಾಜ್ಯಗಳಲ್ಲಿ ಬ್ಯಾಂಕ್ ಕ್ಲೋಸ್!

Published : May 16, 2022, 01:25 AM IST
Bank Holiday ಇಂದು ಬ್ಯಾಂಕ್ ರಜಾ ದಿನವೇ?  ಈ ರಾಜ್ಯಗಳಲ್ಲಿ ಬ್ಯಾಂಕ್ ಕ್ಲೋಸ್!

ಸಾರಾಂಶ

ಮೇ.16ಕ್ಕೆ ಬ್ಯಾಂಕ್ ರಜೆ, RBI ಕ್ಯಾಲೆಂಡರ್ ಕೆಲ ರಾಜ್ಯಗಳಲ್ಲಿನ ಬ್ಯಾಂಕ್‌ಗೆ ಮಾತ್ರ ಅನ್ವಯ ಯಾವೆಲ್ಲಾ ರಾಜ್ಯದಲ್ಲಿ ಇಂದು ಬ್ಯಾಂಕ್ ರಜಾ?

ನವದೆಹಲಿ(ಮೇ.16): ಬ್ಯಾಂಕ್ ಕೆಲಸಕ್ಕಾಗಿ ಕಾಯುತ್ತಿರುವ ಗ್ರಾಹಕರಿಗೆ ಇಂದು ಮತ್ತೆ ನಿರಾಸೆಯಾಗಲಿದೆ. ಕಾರಣ ಮೇ.16ರಂದು ಬ್ಯಾಂಕ್ ರಜಾ ದಿನವಾಗಿದೆ. ಹೌದು ಭಾರತೀಯ ರಿಸರ್ವ್ ಬ್ಯಾಂಕ್ ರಜಾ ಕ್ಯಾಲೆಂಡರ್ ಪ್ರಕಾರ ಮೇ.16ಕ್ಕೆ ಬುದ್ಧ ಪೂರ್ಣಿಮಾ ಹಬ್ಬದ  ಪ್ರಯುಕ್ತ ರಜಾ ದಿನವಾಗಿದೆ. ಹಾಗಂತ ಕರ್ನಾಟಕದ ಮಂದಿ ಆತಂಕ ಪಡುವ ಅಗತ್ಯವಿಲ್ಲ. ಈ ರಜೆ ಕೆಲ ರಾಜ್ಯಗಳಲ್ಲಿ ಮಾತ್ರ ಅನ್ವಯವಾಗಲಿದೆ.

ಎರಡನೇ ಶನಿವಾರ, ಭಾನುವಾರದ ಬಳಿಕ ಸೋಮವಾರವೂ ಬ್ಯಾಂಕ್ ರಜಾದಿನವಾಗಿದೆ. RBIನ ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್  ಪ್ರಕಾರ ಕೆಲ ರಾಜ್ಯಗಳಲ್ಲಿ ಇಂದೂ ಕೂಡ ಬ್ಯಾಂಕ್ ರಜಾ ದಿನವಾಗಿದೆ. ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಉತ್ತರಖಂಡ, ತ್ರಿಪುರಾ, ಬೇಲಾಪುರ್, ಜಮ್ಮು, ಉತ್ತರ ಪ್ರದೇಶ, ಮಹಾರಾಷ್ಟ್ರ, ನವದೆಹಲಿ, ಪಶ್ಚಿಮ ಬಂಗಾಳ, ಛತ್ತೀಸಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ಹಾಗೂ ಶ್ರೀಗನಗಗಳಲ್ಲಿ ಮೇ.16ಕ್ಕೆ ಬ್ಯಾಂಕ್ ರಜಾ ದಿನವಾಗಿದೆ. ಈ ರಾಜ್ಯಗಳನ್ನು ಹೊರತು ಪಡಿಸಿ ಇನ್ನುಳಿದ ರಾಜ್ಯಗಳಲ್ಲಿ ಬ್ಯಾಂಕ್ ಎಂದಿನಂತೆ ಕಾರ್ಯನಿರ್ವಹಿಸಲಿದೆ.

Bank Holidays: ಮೇ ತಿಂಗಳಲ್ಲಿ 11 ದಿನ ಬ್ಯಾಂಕ್ ಕ್ಲೋಸ್; ಇಲ್ಲಿದೆ ನೋಡಿ RBI ರಜಾಪಟ್ಟಿ

ಮೇ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ರಜಾದಿನವಾಗಿದೆ. ಇದರಲ್ಲಿ ಈಗಾಗಲೇ 5 ರಜಾದಿನಗಳು ಆಗಿವೆ. ಮೇ.02ನೇ ತಾರೀಖಿನಂದು ಈದ್ ಉಲ್ ಫಿತರ್ ಕಾರಣ ರಜಾದಿನವಾಗಿತ್ತು. ಮೇ.03ರಂದು ಪರಶುರಾಮ ಜಯಂತಿ ಹಾಗೂ ರಂಜಾನ್ ಕಾರಣ ರಜಾದಿನವಾಗಿತ್ತು. ಮೇ 9 ರಂದು ರಬೀಂದ್ರನಾಥ್ ಠಾಗೋರ್ ಜಯಂತಿಗೆ ರಜಾ ದಿನವಾಗಿತ್ತು. ಇನ್ನುಳಿದಂತೆ ಮೇ.01ರ ಕಾರ್ಮಿಕ ದಿನ ಭಾನುವಾರವಾಗಿತ್ತು. ಹಾಗೂ ಮೇ.08ರ ಅಕ್ಷಯ ತೃತೀಯ ಹಾಗೂ ಬಸವಜಯಂತಿ ಭಾನುವಾರವಾಗಿತ್ತು. 

ಮೇ ತಿಂಗಳಲ್ಲಿ ಬ್ಯಾಂಕ್ ರಜಾ ದಿನ ಇಲ್ಲಗೆ ಮುಗಿದಿಲ್ಲ. ಇನ್ನು 3 ರಜೆಗಳು ಬಾಕಿ ಇವೆ. ಇದು ದೇಶದ ಎಲ್ಲಾ ರಾಜ್ಯಗಳಿಗೆ ಅನ್ವಯವಾಗಲಿದೆ. ಮೇ.22 ರಂದು ಭಾನುವಾರ ಬ್ಯಾಂಕ್ ರಜಾ ದಿನವಾಗಿದೆ. ಬಳಿಕ ಮೇ.28 ರಂದು ರಜಾ ದಿನವಾಗಿದೆ. ಇದು ನಾಲ್ಕನೇ ಶನಿವಾರವಾಗಿರುವ ಕಾರಣ ಬ್ಯಾಂಕ್ ರಜಾ ದಿನವಾಗಿದ್ದರೆ, 29 ರಂದು ಭಾನುವಾರ ಬ್ಯಾಂಕ್ ರಜಾ ದಿನವಾಗಿದೆ.

Bank Holiday: ಈ ವಾರ ಬ್ಯಾಂಕ್ ಗ್ರಾಹಕರಿಗೆ ಕಿರಿಕಿರಿ ತಪ್ಪಿದ್ದಲ್ಲ; ನಿರಂತರ 4 ದಿನ ಬ್ಯಾಂಕಿಗೆ ರಜೆ

 ಚಿಲ್ಲರೆ ಹಣದುಬ್ಬರ ಏರಿಕೆ
ದೇಶದಲ್ಲಿ ಇಂಧನ ಹಾಗೂ ಆಹಾರ ಸಾಮಗ್ರಿಗಳ ಬೆಲೆಯಲ್ಲಿ ಏರಿಕೆಯಾದ ಬೆನ್ನಲ್ಲೇ ಎಪ್ರಿಲ್‌ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಶೇ. 7.79ಕ್ಕೆ ಏರಿಕೆಯಾಗಿದ್ದು, ಕಳೆದ 8 ವರ್ಷಗಳಲ್ಲೇ ಸಾರ್ವಕಾಲಿಕ ಗರಿಷ್ಠÜ ಮಟ್ಟಕ್ಕೆ ತಲುಪಿದೆ.ಈ ಹಿನ್ನೆಲೆಯಲ್ಲಿ ಭಾರತದ ರಿಸವ್‌ರ್‍ ಬ್ಯಾಂಕು ಸತತ ಬೆಲೆಯೇರಿಕೆಗೆ ಕಡಿವಾಣ ಹಾಕಲು ಮುಂದಿನ ತಿಂಗಳು ನಡೆಯಲಿರುವ ನೀತಿ ವಿಮರ್ಶೆ ಸಭೆಯಲ್ಲಿ ಮತ್ತೊಮ್ಮೆ ಬಡ್ಡಿದರ ಹೆಚ್ಚಳ ಮಾಡುವ ಸಾಧ್ಯತೆಯಿದೆ.

ಉಕ್ರೇನ್‌-ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಇಡೀ ಜಗತ್ತೇ ಹಣದುಬ್ಬರದ ದುಷ್ಪರಿಣಾಮ ಎದುರಿಸುತ್ತಿದ್ದು, ಬೆಲೆಯೇರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಏಪ್ರಿಲ್‌ ತಿಂಗಳಲ್ಲಿ ಆಹಾರ ಪದಾರ್ಥಗಳ ಗ್ರಾಹಕ ದರ ಸೂಚ್ಯಂಕವು ಶೇ. 8.38ಕ್ಕೆ ಏರಿಕೆಯಾಗಿದ್ದು, ಕಳೆದ ಒಂದೇ ತಿಂಗಳಿನಲ್ಲಿ ಶೇ. 1.96 ಹೆಚ್ಚಳ ದಾಖಲಾಗಿದೆ. ಅದೇ ಇಂಧನದ ಗುಂಪಿನಲ್ಲಿ ಶೇ. 10.80, ಎಣ್ಣೆ ಹಾಗೂ ಕೊಬ್ಬು ಗುಂಪಿನಲ್ಲಿ ಶೇ. 17.28 ಚಿಲ್ಲರೆ ಹಣದುಬ್ಬರ ದಾಖಲಾಗಿದೆ. ತರಕಾರಿಗಳ ಮೇಲಿನ ಚಿಲ್ಲರೆ ಹಣದುಬ್ಬರ ಶೇ. 15.41ಕ್ಕೆ ಏರಿಕೆಯಾಗಿದ್ದು ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!