ಇಳಿದ ರೆಪೋ ದರ: ಸರಿಯಾಗಿ ಲೆಕ್ಕ ಹಾಕ್ಕೊಳ್ಳಿ ನಿಮ್ಮ ಬಡ್ಡಿದರ!

By Web DeskFirst Published Aug 7, 2019, 3:33 PM IST
Highlights

ಆರ್ಥಿಕ ಪುನಶ್ಚೇತನಕ್ಕೆ ಮುಂದಾದ ಭಾರತೀಯ ರಿಸರ್ವ್ ಬ್ಯಾಂಕ್|  ಸತತ ನಾಲ್ಕನೇ ಬಾರಿಗೆ ರೆಪೊ ದರ ಇಳಿಸಿದ RBI| ಪ್ರಮುಖ ಬಡ್ಡಿದರಗಳಲ್ಲಿ ಬದಲಾವಣೆಗೆ ಮುಂದಾದ RBI| 35 ಬೇಸಿಸ್ ಪಾಯಿಂಟ್ ’ಗಳಿಂದ ಶೇ. 5.40ಗೆ ರೆಪೊ ದರ ಇಳಿಕೆ| ಆರು ಸದಸ್ಯರನ್ನೊಳಗೊಂಡ ವಿತ್ತೀಯ ನೀತಿ ಸಮಿತಿ ನಿರ್ಧಾರ| 

ಮುಂಬೈ(ಆ.07): ಆರ್ಥಿಕತೆ ಪುನಶ್ಚೇತನಕ್ಕೆ ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್, ಸತತ ನಾಲ್ಕನೇ ಬಾರಿಗೆ ರೆಪೊ ದರ ಇಳಿಸುವ ನಿರ್ಧಾರ ಕೈಗೊಂಡಿದೆ.

ರೆಪೋ ದರ ಇಳಿಸುವ ಮೂಲಕ ತನ್ನ ಪ್ರಮುಖ ಬಡ್ಡಿದರಗಳನ್ನು ಇಳಿಕೆ ಮಾಡಿರುವ RBI, ಈ ಮೂಲಕ ಜನತೆ ಹೆಚ್ಚೆಚ್ಚು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಟ್ಟಿದೆ. 

ಆರು ಸದಸ್ಯರನ್ನೊಳಗೊಂಡ ವಿತ್ತೀಯ ನೀತಿ ಸಮಿತಿ(ಎಂಪಿಸಿ), 35 ಬೇಸಿಸ್ ಪಾಯಿಂಟ್ ’ಗಳಿಂದ ಶೇ. 5.40ಗೆ ರೆಪೊ ದರ ಇಳಿಕೆ ಮಾಡಿದೆ.

Reserve Bank of India (RBI) cuts Repo Rate by 35 basis points to 5.40%. Reverse Repo rate at 5.15% pic.twitter.com/bNvRNLdh1H

— ANI (@ANI)

ಈ ಹಿಂದಿನ ಮೂರು ವಿತ್ತೀಯ ನೀತಿಗಳಲ್ಲಿ RBI ಪ್ರತಿ ಬಾರಿ 25 ಬೇಸಿಸ್ ಪಾಯಿಂಟ್’ಗಳಷ್ಟು ಇಳಿಕೆ ಮಾಡಿತ್ತು. ಕಳೆದ ಜೂನ್ ವಿತ್ತೀಯ ನೀತಿಯಲ್ಲಿ ಜಿಡಿಪಿ ಬೆಳವಣಿಗೆಯನ್ನು 2019-20ಕ್ಕೆ ಶೇ. 7ರಿಂದ ಶೇಕಡಾ 6.9ಕ್ಕೆ ಇಳಿಕೆ ಮಾಡಲಾಗಿತ್ತು.

GDP projection adjusted to 6.9% for this year from the earlier projection of 7% . https://t.co/qHRiiaZjoD

— ANI (@ANI)

ಇನ್ನು ಹಣಕಾಸು ವರ್ಷ 20ರ ದ್ವಿತೀಯ ತ್ರೈಮಾಸಿಕದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಹಣದುಬ್ಬರವನ್ನು ಶೇಕಡಾ 3.1, 3.5 ಮತ್ತು 3.7 ಎಂದು ಅಂದಾಜಿಸಲಾಗಿದೆ.

click me!