ಬದಲಾಯ್ತು ಗ್ರಾಹಕರ ಟೇಸ್ಟ್: ಜ್ಯೂಸ್ ಮಾರುಕಟ್ಟೆಗೆ ಭಾರೀ ವೇಸ್ಟ್!

Published : Aug 06, 2019, 12:44 PM IST
ಬದಲಾಯ್ತು ಗ್ರಾಹಕರ ಟೇಸ್ಟ್: ಜ್ಯೂಸ್ ಮಾರುಕಟ್ಟೆಗೆ ಭಾರೀ ವೇಸ್ಟ್!

ಸಾರಾಂಶ

ಭಾರತದ ಜ್ಯೂಸ್ ಮಾರುಕಟ್ಟೆಗೆ ಗ್ರಾಹಕರಿಂದ ಭಾರೀ ಶಾಕ್| ಕಡಿಮೆ ಬೆಲೆಯ ತಂಪು ಪಾನೀಯಗಳತ್ತ ಆಕರ್ಷಿತನಾದ ಗ್ರಾಹಕ| ಹಾಲಿನ ಉತ್ಮನ್ನಗಳ ಪಾನೀಯಗಳಿಗೆ ಗ್ರಾಹಕನ ಬೇಡಿಕೆ|  ನೀಲ್ಸನ್ ರಿಸರ್ಚ್ ಡಾಟಾ ಸಂಶೋಧನೆ ಬಹಿರಂಗ| ಮೊದಲ ತ್ರೈಮಾಸಿಕದಲ್ಲಿ ಜ್ಯೂಸ್ ಮಾರಾಟದಲ್ಲಿ ಶೇ.3.1ರಷ್ಟು ಕುಸಿತ| 2019-20ರ ಆರ್ಥಿಕ ವರ್ಷದಲ್ಲಿ ಜ್ಯೂಸ್ ಮಾರುಕಟ್ಟೆ ಶೇ. 4.9ರಷ್ಟು ಕುಸಿತ| 

ನವದೆಹಲಿ(ಆ.06): ಕಡಿಮೆ ಬೆಲೆಯ ತಂಪು ಪಾನೀಯ ಮತ್ತು ಹಾಲಿನ ಉತ್ಪನ್ನಗಳತ್ತ ಗ್ರಾಹಕರು ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಕಾರಣದಿಂದ ಭಾರತದ ಜ್ಯೂಸ್ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಿದೆ. 

ಈ ಕುರಿತು ನೀಲ್ಸನ್ ರಿಸರ್ಚ್ ಡಾಟಾ ಸಂಶೋಧನೆ ನಡೆಸಿದ್ದು, ಶೇ.100ರಷ್ಟು ಹಣ್ಣಿನ ರಸದ ಪಾನೀಯ ಮಾರಾಟದಲ್ಲಿ ಮೊದಲ ತ್ರೈಮಾಸಿಕದಲ್ಲಿ ಶೇ.3.1ರಷ್ಟು ಕುಸಿತವಾಗಿದೆ ಏಂದು ತಿಳಿಸಿದೆ. 

2019-20ರ ಆರ್ಥಿಕ ವರ್ಷದಲ್ಲಿ ಜ್ಯೂಸ್ ಮಾರುಕಟ್ಟೆ ಶೇ. 4.9ರಷ್ಟು ಕುಸಿತ ದಾಖಲಿಸಿದ್ದು,  ಕಡಿಮೆ ಬೆಲೆಯ ತಂಪು ಪಾನೀಯ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ ಎಂದು ಸಂಶೋಧನೆ ಸ್ಪಷ್ಟಪಡಿಸಿದೆ.

ಇದೇ ವೇಳೆ ಹಾಲಿನ ಉತ್ಪನ್ನಗಳ ಮಾರಾಟದಲ್ಲಿನ ಏರಿಕೆ ಕೂಡ ಜ್ಯೂಸ್ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದ್ದು, ಬಾಟಲ್ ಮತ್ತು ಪ್ಯಾಕ್ಡ್ ಜ್ಯೂಸ್ ಮಾರಾಟದಲ್ಲಿನ ಕುಸಿತ ಆತಂಕಕ್ಕೆ ಕಾರಣವಾಗಿದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌