ಆರ್‌ಬಿಐನಿಂದ ಗುಡ್‌ ನ್ಯೂಸ್‌: ಗ್ರಾಹಕರಿಗೆ ನಿರಾಳ!

By Web DeskFirst Published Aug 15, 2019, 10:54 AM IST
Highlights

ಆರ್‌ಬಿಐ ಗ್ರಾಹಕರಿಗೆ ಕೊಡ್ತು ಗುಡ್‌ ನ್ಯೂಸ್| ರದ್ದಾದ ವಹಿವಾಟು, ಬ್ಯಾಲೆನ್ಸ್‌ ಚೆಕ್‌ಗೆ ಎಟಿಎಂ ಶುಲ್ಕ ಇಲ್ಲ?

ನವದೆಹಲಿ[ಆ.15]: ಎಟಿಎಂಗಳಲ್ಲಿ ತಾಂತ್ರಿಕ ಕಾರಣದಿಂದ ವಿಫಲಗೊಳ್ಳುವ ವಹಿವಾಟನ್ನು ಉಚಿತ ವಹಿವಾಟಿನ ಜತೆ ಸೇರಿಸಬಾರದು ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಬುಧವಾರ ಇತರ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಅಲ್ಲದೇ ಬ್ಯಾಲೆನ್ಸ್‌ ಚೆಕ್‌, ಚೆಕ್‌ ಬುಕ್‌ ಕೋರಿಕೆ, ತೆರಿಗೆ ಪಾವತಿ, ಹಣ ವರ್ಗಾವಣೆಯನ್ನೂ ಸಹ ಉಚಿತ ಎಟಿಎಂ ವಹಿವಾಟಿನ ಲೆಕ್ಕಕ್ಕೆ ಸೇರಿಸದಂತೆ ಆರ್‌ಬಿಐ ತಿಳಿಸಿದೆ.

ಬುಧವಾರ ಆರ್‌ಬಿಐ ಸಾಲ ನೀತಿ ಪ್ರಕಟ: ಬಡ್ಡಿದರ ಕಡಿತ?

ಎಟಿಎಂಗಳಲ್ಲಿ ಹಣ ಇಲ್ಲದೇ ಇರುವಿಕೆ, ಸಾಫ್ಟ್‌ವೇರ್‌, ಹಾರ್ಡ್‌ವೇರ್‌ ಸಮಸ್ಯೆ, ತಪ್ಪಾಗಿ ಪಿನ್‌ ನಮೂದಿಸುವಿಕೆ ಮತ್ತಿತರ ಕಾರಣದಿಂದ ಎಟಿಎಂ ವಹಿವಾಟು ವಿಫಲಗೊಳ್ಳುವುದಕ್ಕೆ ಬ್ಯಾಂಕುಗಳು ಶುಲ್ಕ ವಿಧಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗೆ ತಾಂತ್ರಿಕ ಕಾರಣದಿಂದ ವಿಫಲವಾದ ಎಟಿಎಂ ವಹಿವಾಟಿಗೆ ಶುಲ್ಕ ವಿಧಿಸದಂತೆ ಸ್ಪಷ್ಟನೆ ನೀಡುತ್ತಿದ್ದೇವೆ ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಯುದ್ಧ ಗೆದ್ದ ಕೇಂದ್ರ: ಹೆಚ್ಚುವರಿ ಹಣ ಮರಳಿಸಬೇಕಿದೆ ಆರ್‌ಬಿಐ!

ಪ್ರಸ್ತುತ ನಗರಗಳಲ್ಲಿ ಸ್ವಂತ ಬ್ಯಾಂಕಿನ ಎಟಿಎಂ ಬಳಕೆಗೆ ತಿಂಗಳಿಗೆ 5 ಬಾರಿ ಹಾಗೂ ಬೇರೆ ಬ್ಯಾಂಕುಗಳ ಎಟಿಎಂಗಳಿಂದ ಮೂರು ಬಾರಿ ಉಚಿತವಾಗಿ ವಹಿವಾಟು ನಡೆಸಲು ಅವಕಾಶವಿದೆ.

click me!