1 ಕಿಲೋ ಟೀ ಪುಡಿಯ ಬೆಲೆ ಭರ್ಜರಿ 75,000!

By Web DeskFirst Published Aug 14, 2019, 12:09 PM IST
Highlights

1 ಕಿಲೋ ಟೀ ಪುಡಿಯ ಬೆಲೆ ಭರ್ಜರಿ 75000| ಅಸ್ಸಾಂನ ಡಿಕಾಮ್‌ ಟೀ ಎಸ್ಟೇಟ್‌ನಲ್ಲಿ ಬೆಳೆಯಲಾಗುವ ಬಹಳ ಅಪರೂಪದ ‘ಗೋಲ್ಡನ್‌ ಬಟರ್‌ಫ್ಲೈ’ 

ಗುವಾಹಟಿ[ಆ.14]: ಅಸ್ಸಾಂನ ಡಿಕಾಮ್‌ ಟೀ ಎಸ್ಟೇಟ್‌ನಲ್ಲಿ ಬೆಳೆಯಲಾಗುವ ಬಹಳ ಅಪರೂಪದ ‘ಗೋಲ್ಡನ್‌ ಬಟರ್‌ಫ್ಲೈ’ ಹೆಸರಿನ ಟೀ ಪುಡಿ ಮಂಗಳವಾರ ನಡೆದ ಹರಾಜಿನಲ್ಲಿ ಪ್ರತಿ ಕಿಲೋಗ್ರಾಮ್‌ಗೆ ಬರೋಬ್ಬರಿ 75,000 ರು.ಗೆ ಮಾರಾಟವಾಗಿದೆ. ಗುವಾಹಟಿ ಟೀ ಹರಾಜು ಮಳಿಗೆಯಲ್ಲಿ ನಡೆದ ಹರಾಜಿನಲ್ಲಿ ಅಸ್ಸಾಂ ಟೀ ವ್ಯಾಪಾರಿಯೊಬ್ಬರನ್ನು ಈ ಟೀ ಪುಡಿ ಖರೀದಿಸಿದ್ದಾರೆ.

ಜೆ.ಥಾಮಸ್‌ ಆ್ಯಂಡ್‌ ಕಂಪನಿ ಈ ವಿಶೇಷ ಟೀ ಪುಡಿಯನ್ನು ಮಾರಾಟ ಮಾಡಿದೆ. ಜಿಟಿಎಸಿ ಇತಿಹಾಸದಲ್ಲಿಯೇ ಇದೊಂದು ದಾಖಲೆಯ ವ್ಯವಹಾರವಾಗಿದೆ ಎಂದು ಖರೀದಾರರ ಸಂಘದ ಕಾರ್ಯದರ್ಶಿ ದಿನೇಶ್‌ ಬಿಹಾನಿ ತಿಳಿಸಿದ್ದಾರೆ. ಕಳೆದ ತಿಂಗಳ ಹರಾಜಿನಲ್ಲಿ ‘ಮೈಜಾನ್‌ ಗೋಲ್ಡನ್‌ ಟಿಫ್ಸ್‌’ ಹೆಸರಿನ ಟೀ ಪುಡಿ ಪ್ರತಿ ಕಿ.ಗ್ರಾಂ 70,501 ರು.ಗೆ ಮಾರಾಟವಾಗಿತ್ತು. ಮನೋಹರಿ ಗೋಲ್ಡ್‌ ಕೂಡ ಪ್ರತಿ ಕಿ.ಗ್ರಾಂ 50,000 ರು.ಗೆ ಮಾರಾಟವಾಗಿತ್ತು. ಅಷ್ಟಕ್ಕೂ ಈ ಟೀ ಪುಡಿ ಎಲ್ಲೆಂದರಲ್ಲಿ ಸಿಗದು.

ಮನೋಹರಿ ಗೋಲ್ಡ್‌ ಟೀ ಕೆಜಿಗೆ 50000 ರು.ಗೆ ಸೇಲ್‌: ಹೊಸ ದಾಖಲೆ!

ಅಸ್ಸಾಂ ವಿಶೇಷ ಟೀ ಪುಡಿಗಳಲ್ಲಿ ಇದೂ ಒಂದಾಗಿದ್ದು. ಬಹಳ ಅಪರೂಪಕ್ಕೆ ಲಭ್ಯವಾಗುತ್ತದೆ. ಜೊತೆಗೆ ಆಹ್ಲಾದಕರವಾದ ಪರಿಮಳ ಹಾಗೂ ಉಳಿದೆಲ್ಲಾ ಟೀ ಪುಡಿಗಳಿಗಿಂತ ಭಿನ್ನ ರುಚಿಯನ್ನು ಇದು ಹೊಂದಿರುತ್ತದೆ. ಅಲ್ಲದೆ, ಬೇರೆಯದೇ ಆದ ಅನುಭವ ನೀಡುತ್ತದೆ ಎಂದು ಅಸ್ಸಾಂ ಟೀ ಟ್ರೇಡ​ರ್‍ಸ್ ಮಾಲೀಕ ಎಲ್‌.ಕೆ. ಜಲನ್‌ ಹೇಳಿದ್ದಾರೆ.

click me!