ಸದ್ದಿಲ್ಲದೇ ಚಿನ್ನ ಖರೀದಿಸುತ್ತಿದೆ ಆರ್‌ಬಿಐ: ಮೋದಿ ಹೇಳಿದ್ರಾ?

Published : Sep 03, 2018, 03:38 PM ISTUpdated : Sep 09, 2018, 09:13 PM IST
ಸದ್ದಿಲ್ಲದೇ ಚಿನ್ನ ಖರೀದಿಸುತ್ತಿದೆ ಆರ್‌ಬಿಐ: ಮೋದಿ ಹೇಳಿದ್ರಾ?

ಸಾರಾಂಶ

ಆರ್‌ಬಿಐ ನಿಂದ ಚಿನ್ನ ಖರೀದಿ ಪ್ರಕ್ರಿಯೆ ಜೋರು! ಒಟ್ಟು 8.4 ಮೆಟ್ರಿಕ್ ಟನ್ ಚಿನ್ನ ಖರೀದಿ! ಆರ್ ಬಿಐ ಬಳಿ ಒಟ್ಟು 566.23 ಮೆಟ್ರಿಕ್ ಟನ್ ಚಿನ್ನ!  ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಚಿನ್ನದ ಬಳಕೆ ದ್ವಿಗುಣ

ನವದೆಹಲಿ(ಸೆ.3): ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, 2017-18 ರ ಆರ್ಥಿಕ ವರ್ಷದಲ್ಲಿ ಒಟ್ಟು 8.4 ಮೆಟ್ರಿಕ್ ಟನ್ ಚಿನ್ನ ಶೇಖರಣೆ ಮಾಡಿದೆ ಎಂದು ತಿಳಿದು ಬಂದಿದೆ.

ಸದ್ಯ ಆರ್‌ಬಿಐ ನಲ್ಲಿ ಒಟ್ಟು 566.23 ಮೆಟ್ರಿಕ್ ಟನ್ ಚಿನ್ನದ ಶೇಖರಣೆ ಇದ್ದು, 10 ವರ್ಷಗಳಲ್ಲೇ ದಾಖಲೆಯ ಚಿನ್ನ ಶೇಖರಣೆ ಮಾಡಿದೆ. 2009 ರಲ್ಲಿ ಐಎಂಎಫ್ ನಿಂದ 200 ಮೆಟ್ರಿಕ್ ಟನ್ ಚಿನ್ನ ಖರೀದಿ ಮಾಡಿದ್ದೇ ಇದುವರೆಗಿನ ದಾಖಲೆಯಾಗಿತ್ತು.

ಈ ಕುರಿತು ಮಾಹಿತಿ ನೀಡಿರುವ ಆರ್‌ಬಿಐ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏಕರೂಪವಾಗಿರುವುದರಿಂದ, ವಾಣಿಜ್ಯ ಮತ್ತು ಇತರೆ ಉದ್ದೇಶಗಳಿಗಾಗಿ ಚಿನ್ನವನ್ನು ಬಳಸಿಕೊಳ್ಳುವ ಸಲುವಾಗಿ ಚಿನ್ನ ಶೇಖರಣೆ ಅಗತ್ಯ ಎಂದು ತಿಳಿಸಿದೆ.

ಪ್ರಸಕ್ತ ವರ್ಷದಲ್ಲಿ 10 ಬಿಲಿಯನ್ ಯುಎಸ್ ಡಾಲರ್ ನಷ್ಟು ಚಿನ್ನವನ್ನು ಅಮೆರಿಕಕ್ಕೆ ವರ್ಗಾಯಿಸಲಾಗಿದ್ದು, ಚಿನ್ನದ ಮುಖಾಂತರ ನಡೆಯುವ ಅಂತರಾಷ್ಟ್ರೀಯ ವ್ಯಾಪಾರದಲ್ಲೂ ವೃದ್ಧಿಯಾಗಿದೆ ಎಂದು ಆರ್‌ಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರುಪಾಯಿ ಮೌಲ್ಯ ಕುಸಿತದ ಎಫೆಕ್ಟ್‌: ಹೊಸ ವರ್ಷಕ್ಕೆ ದೇಶವಾಸಿಗಳಿಗೆ ಸಿಗಲಿದೆ ಶಾಕ್!
ಭಾರತೀಯರ ಕ್ರೇಜ್, ದುಬೈನ ಶಾರುಖ್ ಖಾನ್ ಆಫೀಸ್ ಟವರ್ ಬರೋಬ್ಬರಿ 5000 ಕೋಟಿ ರೂ ಗೆ ಮಾರಾಟ!