
ನವದೆಹಲಿ: ಗೃಹ ಮತ್ತು ವಾಹನ ಸಾಲ ಪಡೆದವರಿಗೆ ಬ್ಯಾಂಕ್‌ಗಳು ಮತ್ತೆ ಶಾಕ್ ನೀಡಿವೆ. ಸೆ.1ರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ಗಳು ಸಾಲದ ಮೇಲಿನ ಕನಿಷ್ಠ ಬಡ್ಡಿದರವನ್ನು ಶೇ.0.20ರಷ್ಟುಏರಿಕೆ ಮಾಡಿವೆ.
ಹೀಗಾಗಿ ಸಾಲದ ಮೇಲೆ ಬಡ್ಡಿದರ ವಿಧಿಸಲು ಮೂಲವಾಗಿ ಬಳಸುವ ಒಂದು ವರ್ಷದ ಎಂಸಿಎಲ್‌ಆರ್ ದರವನ್ನು ಶೇ.0.20ರಷ್ಟುಹೆಚ್ಚಿಸಲಾಗಿದೆ. ಹೀಗಾಗಿ ಇದುವರೆಗೆ ಶೇ.8.45ರಷ್ಟುಇದ್ದ ಗೃಹಸಾಲದ ಬಡ್ಡಿದರಗಳು ಶೇ.8.65ಕ್ಕೆ ಹೆಚ್ಚಳವಾಗಿದೆ. ಉದಾಹರಣೆಗೆ ಗ್ರಾಹಕರೊಬ್ಬರು 20 ವರ್ಷದ ಅವಧಿಗೆ 30 ಲಕ್ಷ ರು. ಗೃಹ ಸಾಲ ಪಡೆದಿದ್ದರೆ, ಅವರ ಮಾಸಿಕ ಇಎಂಐನಲ್ಲಿ 380 ರು. ಏರಿಕೆಯಾಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.