ವಿದೇಶಿ ಹೂಡಿಕೆದಾರರ ನೆಚ್ಚಿನ ತಾಣಗಳಲ್ಲಿ ಒಂದಾಗಿದ್ದ ಕರ್ನಾಟಕದಲ್ಲಿ 2023-24 ಸಾಲಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ.
ನವದೆಹಲಿ(ಮೇ.31): ವಿದೇಶಿ ಹೂಡಿಕೆದಾರರ ನೆಚ್ಚಿನ ತಾಣಗಳಲ್ಲಿ ಒಂದಾಗಿದ್ದ ಕರ್ನಾಟಕದಲ್ಲಿ 2023-24 ಸಾಲಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ)ಯ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. ಗಮನಾರ್ಹ ಎಂದರೆ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ತೆಲಂಗಾಣ, ಜಾರ್ಖಂಡ್‌ನಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ-ಸಂಖ್ಯೆಗಳು ತಿಳಿಸಿವೆ.
2022-23ನೇ ಸಾಲಿನಲ್ಲಿ ಕರ್ನಾಟಕಕ್ಕೆ 10.42 ಶತಕೋಟಿ ಡಾಲರ್ (86 ಸಾವಿರ ಕೋಟಿ ರು.) ವಿದೇಶಿ ಬಂಡವಾಳ ಹರಿದುಬಂದಿತ್ತು. ಆದರೆ ಅದು 2023-24ನೇ ಸಾಲಿನಲ್ಲಿ 6.57 ಶತಕೋಟಿ ಡಾಲರ್ (54 ಸಾವಿರ ಕೋಟಿ ರು.)ಗೆ ಕುಸಿದಿದೆ. ಮತ್ತೊಂದೆಡೆ, 2022-2300 14.8 ಮಹಾರಾಷ್ಟ್ರಕ್ಕೆ : (1.23 ಲಕ್ಷ ಕೋಟಿ ರು.)ಯಷ್ಟು ಬಂದಿದ್ದ ವಿದೇಶಿ ಬಂಡವಾಳ 2023-2400 15.1 ಶತಕೋಟಿ ಡಾಲರ್ (1.25 ಲಕ್ಷ ಕೋಟಿ ರು.)ಗೆ ಏರಿಕೆಯಾಗಿದೆ.
3 2022-2300 4.7 ಶತಕೋಟಿ ಡಾಲರ್(39 ಸಾವಿರ ಕೋಟಿ ರು.) ಬಂಡವಾಳ ಹರಿದು ಬಂದಿತ್ತು. 2023-24ರಲ್ಲಿ ಅದು 7.3 ಶತಕೋಟಿ ಡಾಲರ್ (60 ಸಾವಿರ ಕೋಟಿ ರು.)ಗೆ ಏರಿಕೆ ಆಗಿದೆ. ತಮಿಳುನಾಡು, ತೆಲಂಗಾಣ, ಜಾರ್ಖಂಡ್‌ಗೆ ಬಂದ ಎಫ್‌ಡಿಐನಲ್ಲೂ ಬೆಳವಣಿಗೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಆದರೆ ದೆಹಲಿ, ರಾಜಸ್ಥಾನ, ಉತ್ತರಪ್ರದೇಶ ಹಾಗೂ ಹರ್ಯಾಣದ ಎಫ್ಡಿಐನಲ್ಲಿ ಕುಸಿತವಾಗಿದೆ.
undefined
ಬಾಹ್ಯಾಕಾಶ ಕ್ಷೇತ್ರದಲ್ಲಿ ಶೇ. 100ರಷ್ಟು ವಿದೇಶಿ ನೇರ ಹೂಡಿಕೆಗೆ ಕೇಂದ್ರ ಅನುಮತಿ!
ದೇಶದ ಎಫ್‌ಡಿಐ ಶೇ.3.5 ಕಡಿತ:
ಇದೇ , 2023-24 44.42 ಶತಕೋಟಿ ಡಾಲರ್ (3.6 ಲಕ ಕೋಟಿ ರು.) ವಿದೇಶಿ ಬಂಡವಾಳ ಬಂದಿದೆ.2022-23ರಲ್ಲಿ ಬಂದಿದ್ದ 46.03 ಶತಕೋಟಿ ಡಾಲರ್ (3.83 ಲಕ್ಷ ಕೋಟಿ ರು.)ಗೆ ಹೋಲಿಸಿದರೆ ಇದು ಶೇ.3.49ರಷ್ಟು ಕಡಿಮೆಯಾಗಿದೆ. 2021-22ರಲ್ಲಿ ದೇಶಕ್ಕೆ 84.83 ಶತಕೋಟಿ ಡಾಲರ್ (7 ಲಕ ಕೋಟಿ ರು.) ಎಫ್‌ಡಿಐ ಹರಿದು ಬಂದಿತ್ತು. ಅದು ಸಾರ್ವಕಾಲಿಕ ದಾಖಲೆಯಾಗಿದೆ.
ಕರ್ನಾಟಕದಲ್ಲಿ ಹೂಡಿಕೆ ಪ್ರಮಾಣ
ವರ್ಷ ಹೂಡಿಕೆ ಪ್ರಮಾಣ
2022-23 86000 ಕೋಟಿ ರು.
2023-24 54000 ಕೋಟಿ ರು.