ಮುಂಬೈನ ಕೆಥೆಡ್ರಲ್ ಮತ್ತು ಜಾನ್ ಕ್ಯಾನನ್ ಶಾಲೆಗಳಲ್ಲಿ ರತನ್ ತಮ್ಮ ಆರಂಭಿಕ ಶಿಕ್ಷಣ ಪೂರೈಸಿದರು. 1962ರಲ್ಲಿ ಅಮೆರಿಕದ ಕಾರ್ನೆಲ್ ವಿವಿಯಿಂದ ಎಂಜಿನಿಯರಿಂಗ್ ಹಾಗೂ ವಾಸ್ತು ಶಾಸ್ತ್ರದಲ್ಲಿ ರತನ್ ಬಿಎಸ್ಸಿ ಪದವಿ ಪಡೆದರು.
ಬ್ರಿಟಿಷರ ಆಡಳಿತಕ್ಕೊಳಪಟ್ಟಿದ್ದ ಅಂದಿನ ಬಾಂಬೆ ಪ್ರಾಂತ್ಯದಲ್ಲಿ ಟಾಟಾ ವಂಶಸ್ಥರಿಗೆ ಭಾರತದ ಉದ್ಯಮ ವಲಯದಲ್ಲೇ ಅತ್ಯಂತ ಶ್ರೀಮಂತ ಕುಟುಂಬ ಎಂದು ಹೆಸರಿತ್ತು. ಇಂತಹ ಟಾಟಾ ಕುಟುಂಬದಲ್ಲಿ 1937ರ ಡಿಸೆಂಬರ್ 28ರಂದು ರತನ್ ನಾವಲ್ ಟಾಟಾರ ಜನನವಾಯಿತು. ಇವರ ತಂದೆ ನಾವಲ್ ಎಚ್. ಟಾಟಾ ಅದಾಗಲೇ ಕೈಗಾರಿಕಾ ಪ್ರಪಂಚದಲ್ಲಿ ಪಳಗಿದವರಾಗಿದ್ದರು.
ಇವರ ಮೊದಲನೇ ಪತ್ನಿ ಸೂನೂ ಟಾಟಾ ರತನ್‌ಜಿಯವರ ತಾಯಿ. ಆದರೆ 1940ರ ವೇಳೆಗೆ ಸಾಂಸಾರಿಕ ಕಾರಣದಿಂದಾಗಿ ರತನ್‌ರ ತಂದೆ ತಾಯಿ ಪರಸ್ಪರ ಬೇರ್ಪಟ್ಟರು. ಆಗ ರತನ್ ಟಾಟಾರಿಗೆ 7ರ ಪ್ರಾಯ ಹಾಗೂ ಸಹೋದರ ಜಿಮ್ಮಿ ಟಾಟಾರಿಗೆ 5 ವರ್ಷವಾಗಿತ್ತು. ಇದರಿಂದಾಗಿ ಇಬ್ಬರೂ ಅಜ್ಜಿ ನವಾಜ್‌ಬಾಯಿ ಆಶ್ರಯದಲ್ಲಿ ಬೆಳೆಯಬೇಕಾಯ್ತು.
undefined
ಟಾಟಾ ಸಾಮ್ರಾಜ್ಯ ಕಟ್ಟಿದ್ದು ಜೆಮ್‌ಶೆಡ್‌ಜಿ ಟಾಟಾ: ಸೆಣಬು ಉತ್ಪನ್ನ ರಫ್ತಿನೊಂದಿಗೆ ಆರಂಭವಾದ ಗ್ರೂಪ್
ಶಿಕ್ಷಣ: ಮುಂಬೈನ ಕೆಥೆಡ್ರಲ್ ಮತ್ತು ಜಾನ್ ಕ್ಯಾನನ್ ಶಾಲೆಗಳಲ್ಲಿ ರತನ್ ತಮ್ಮ ಆರಂಭಿಕ ಶಿಕ್ಷಣ ಪೂರೈಸಿದರು. 1962ರಲ್ಲಿ ಅಮೆರಿಕದ ಕಾರ್ನೆಲ್ ವಿವಿಯಿಂದ ಎಂಜಿನಿಯರಿಂಗ್ ಹಾಗೂ ವಾಸ್ತು ಶಾಸ್ತ್ರದಲ್ಲಿ ರತನ್ ಬಿಎಸ್ಸಿ ಪದವಿ ಪಡೆದರು. ಶಿಕ್ಷಣ ಮುಗಿಸಿ ಭಾರತಕ್ಕೆ ಮರಳಿದ ರತನ್ ಮೊದಲಿಗೆ ಜೆಮ್‌ಶೆಡ್ ಪುರದಲ್ಲಿರುವ ಟಾಟಾಸ್ಟೀಲ್ ಕಂಪೆನಿಯಲ್ಲಿ ಕಾರ್ಯ ಮಾಡುವ ಮೂಲಕ ಟಾಟಾ ಉದ್ದಿಮೆಯಲಯಕ್ಕೆ ಪದಾರ್ಪಣೆಗೈದರು.
ಟಾಟಾ ಗ್ರೂಪ್‌ಗೆ ಪ್ರವೇಶ: 1971ರಲ್ಲಿ ರತನ್ ಟಾಟ ಸಮೂಹದ ಅಧೀನ ಸಂಸ್ಥೆ ನೆಲ್ಕೋ ಕಂಪೆನಿ ಸೇರಿದರು. ಬಳಿಕ ಟಾಟಾ ಎಂಪ್ರೆಸ್ ಬಟ್ಟೆ ಗಿರಣಿಯ ಹೊಣೆ ಹೊತ್ತುಕೊಂಡರು. ರತನ್ ತಮ್ಮ ಅವಧಿಯಲ್ಲಿ ಈ ಎರಡೂ ಸಂಸ್ಥೆಗಳನ್ನೂ ಲಾಭದಾಯಕವಾಗಿಸಿದ್ದರು. ಈ ನಡುವೆ 1975ರಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಿಂದ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಪ್ರೊಗ್ರಾಂನಲ್ಲಿ ಪದವಿ ಗಳಿಸಿದರು. 1981ರಲ್ಲಿ ಟಾಟಾ ಇಂಡಸ್ಟ್ರೀಸ್‌ಗೆ ಅಧ್ಯಕ್ಷರಾಗಿ ನೇಮಕರಾದರು. 1991ರಲ್ಲಿ ರತನ್ ಟಾಟಾ ಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಶ್ಮಿತಾ ನಟಿಸಿದ ಈ ಒಂದು ಸಿನಿಮಾ ಯಾವುದೆಂದು ನಿಮಗೆ ಗೊತ್ತಾ?
ರತನ್ ಎನ್.ಟಾಟಾ ಜೀವನಗಾಥೆ
ಜೆಮ್‌ಶೆಡ್‌ಜಿ ಟಾಟಾರ ಮರಿ ಮೊಮ್ಮಗ
ತಂದೆ -ನಾವಲ್ ಹೊರ್ಮುಸ್ಜಿ ಟಾಟಾ
ತಾಯಿ -ಸೂನೂ
ಸಹೋದರ -ಜಿಮ್ಮಿ ಟಾಟಾ