21 ವರ್ಷಗಳ ಕಾಲ ಟಾಟಾ ಗ್ರೂಪ್ಸ್ ಅನ್ನು ಮುನ್ನಡೆಸಿದ ರತನ್ ಟಾಟಾ ಅವರು ಕಂಪನಿಯ ಆದಾಯವನ್ನು 40 ಪಟ್ಟು ಹಾಗೂ ಲಾಭವನ್ನು 50 ಪಟ್ಟು ಹೆಚ್ಚಳ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಟಾ ಕಂಪನಿಯ ಬ್ರಾಂಡ್ ಸೃಷ್ಟಿ ಮಾಡಿದ್ದರು.
ಬೆಂಗಳೂರು(ಅ.10): ರತನ್ ಟಾಟಾ ಅವರು 1962ರಲ್ಲಿ ಟಾಟಾ ಸ್ಪೀಲ್ ಡಿವಿಜನ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅವರ ದುಡಿಮೆಯನ್ನು ಗುರುತಿಸಿ 9 ವರ್ಷಗಳ ನಂತರ ಅವರನ್ನು ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್ (ಎನ್‌ಇಎಲ್‌ಸಿಒ) ನೇಮಿಸಲಾಯಿತು. ನಿರ್ದೇಶಕರನ್ನಾಗಿ ನಂತರ 1977ರಲ್ಲಿ ಅಳಿವಿನಂಚಿನಲ್ಲಿದ್ದ ಟಾಟಾ ಗ್ರೂಪ್‌ನ ಜವಳಿ ಕಾರ್ಖಾನೆಯಾದ 'ಎಂಪ್ರೆಸ್ ಮಿಲ್' ಗೆ ಸ್ಥಳಾಂತರ ಗೊಳಿಸಲಾಯಿತು. ಕಾರ್ಖಾನೆಯನ್ನು ಮೇಲೆತ್ತಲು ಅವರು ರೂಪಿಸಿದ್ದ ಯೋಜನೆ ಟಾಟಾ ಅಧಿಕಾರಿಗಳಿಗೆ ಇಷ್ಟವಾಗದ ಕಾರಣ ಅದನ್ನು ತಿರಸ್ಕರಿಸಿ ಮಿಲ್ ಅನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿದ್ದರು. 1991ರಲ್ಲಿ ಜಹಂಗೀರ್ ರತನ್ ಜೀ ದಾದಾಭಾಯ್ (ಜೆಆರ್‌ಡಿ) ಟಾಟಾ ಅವರು ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನವನ್ನು ತೊರೆದು, ರತನ್ ಟಾಟಾ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. ಅಲ್ಲಿಂದ 2012ರ ವರೆಗೆ ಅಂದರೆ 21 ವರ್ಷಗಳ ಕಾಲ ಟಾಟಾ ಸನ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದರು.
ನ್ಯಾನೋ, ಇಂಡಿಕಾ ಕಾರು:
ಇವರ ಅಧಿಕಾರವಧಿಯಲ್ಲಿ ಪ್ರಮುಖವಾಗಿ ಟಾಟಾ ನ್ಯಾನೋ ಹಾಗೂ ಟಾಟಾ ಇಂಡಿಕಾ ಕಾರುಗಳ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಅವುಗಳನ್ನು ನಿರ್ಮಾಣ ಮಾಡುವ ಹಂತದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ರತನ್ ಟಾಟಾ ಅವರ 75ನೇ ಹುಟ್ಟುಹಬ್ಬದಂದು ಅಂದರೆ 2012 ಡಿ.28 ರಂದ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇವರ ನಂತರ ಶಾಪೂರ್ಜಿ ಪಲ್ಲೋಂಜಿ ಸಮೂಪದ ನಿರ್ದೇಶಕರಾದ ಸೈರಸ್ ಮಿಸ್ತ್ರಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. 2016ರ ಅ.24ರಂದು ಸೈರಸ್ ಮಿಸ್ತಿಯನ್ನು ಟಾಟಾ ಗ್ರೂಪ್‌ನ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಮತ್ತೆ ರತನ್ ಟಾಟಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2017 ಜ.12 ರಂದು ನಟರಾಜನ್ ಚಂದ್ರಶೇಖರನ್ ಅವರನ್ನು ಟಾಟಾ ಗ್ರೂಪ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ರತನ್ ಟಾಟಾ ಇನ್ನಿಲ್ಲ: ಮದುವೆಯಾಗದ ಟಾಟಾ ಪ್ರೀತಿಸಿದ ಹುಡುಗಿ ಯಾರು? ಗೊತ್ತಿಲ್ಲದ ಕೆಲವು ಸಂಗತಿಗಳು!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಸೃಷ್ಟಿ:
21 ವರ್ಷಗಳ ಕಾಲ ಟಾಟಾ ಗ್ರೂಪ್ಸ್ ಅನ್ನು ಮುನ್ನಡೆಸಿದ ರತನ್ ಟಾಟಾ ಅವರು ಕಂಪನಿಯ ಆದಾಯವನ್ನು 40 ಪಟ್ಟು ಹಾಗೂ ಲಾಭವನ್ನು 50 ಪಟ್ಟು ಹೆಚ್ಚಳ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಟಾ ಕಂಪನಿಯ ಬ್ರಾಂಡ್ ಸೃಷ್ಟಿ ಮಾಡಿದ್ದರು. ಚಾಟಾ ಟೀ ಕಂಪನಿ ಬ್ರಿಟನ್‌ನ ಹೆಸರಾಂತ ಟೀ ಪೌಡರ್ ಉತ್ಪಾದಕ ಕಂಪನಿಯಾದ ಟೆಟ್ಟಿ, ಟಾಟಾ ಮೋಟರ್ಸ್ ಜಾಗ್ವಾರ್. ಲ್ಯಾಂಡ್ ರೋವರ್ ಕಂಪನಿ ಗಳ ಹಾಗೂ ಟಾಟಾ ಸ್ಟೀಲ್ ಕಂಪನಿ ಕೋರಸ್ ಸ್ಟೀಲ್ ಕಂಪನಿಯನ್ನು ಖರೀದಿ ಮಾಡಿತ್ತು. ಪ್ರಮುಖವಾಗಿ ಬ್ರಾಂಡ್ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಆಗುವಂತೆ ಮಾಡಿದ್ದ ರತನ್ ಟಾಟಾ ಅವರು, ಶೇ.65 ರಷ್ಟು ಆದಾಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪಾದಿಸುತ್ತಿದ್ದರು.
ಮೊದಲ ಉದ್ಯಮದಲ್ಲಿ ಜಯಭೇರಿ
ರತನ್ ಟಾಟಾ ಅವರು ಕೈ ಹಾಕಿದ್ದ ಮೊದಲ ಉದ್ಯಮದಲ್ಲಿ ಜಯ ಭೇರಿ ಬಾರಿಸಿದ್ದರು. ಟಾಟಾ ಸಮೂಹದ ದಿ ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ ಕಂಪನಿ ಲಿಮಿಟೆಡ್ ಅಳಿವಿನಂಚಿನ ಲ್ಲಿತ್ತು. ಆಗಿನ ಟಾಟಾ ಗ್ರೂಪ್ ಅಧ್ಯಕ್ಷರಾಗಿದ್ದ ಜೆಆರ್‌ಡಿ ಟಾಟಾ ಅವರು ಕಂಪನಿಯ ಪುನಶ್ವೇತನದ ಆಸೆಯನ್ನು ಬಿಟ್ಟಿದ್ದರು. ಅಂತಹ ಸಂದರ್ಭದಲ್ಲಿ ಅಂದರೆ 1971ರಲ್ಲಿ ರತನ್ ಟಾಟಾ ಅವರು ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್ (ಎನ್‌ಇಎಲ್ ಸಿಒ) ಗೆ ನಿರ್ದೇಶಕರಾಗಿ ನೇಮಕ ಗೊಂಡರು. ಕಂಪನಿಯ ಸಾಂಪ್ರ ದಾಯಿಕ ಪದ್ಧತಿಗಳಿಗೆ ಅಂಟಿಕೊಂ ಡು ಕುಳಿತುಕೊಳ್ಳದ ಅವರು ಆಧುನಿಕ ಹಾಗೂ ಉನ್ನತ ತಂತ್ರಜ್ಞಾನ ಹೊಂದಿದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸಲು ಕೈ ಹಾಕಿದರು. ಇದರಿಂದ ಎನ್‌ಇಎಲ್ ಸಿಒ ಕ್ರಮೇಣವಾಗಿ ಚೇತರಿಕೆ ಕಂಡಿತು. ರತನ್ ಟಾಟಾ ಅವರು ಬರುವ ಮುನ್ನ ಶೇ.2ರ ಷ್ಟಿದ್ದ ಕಂಪೆನಿಯ ಮಾರುಕಟ್ಟೆ ಶೇರು ಕಂಪೆನಿಯ ಮಾರುಕಟ್ಟೆ ಶೇರು ಶೇ.30ಕ್ಕೇರಿತು. ಕಂಪನಿ ನಷ್ಟದ ಭಯದಿಂದ ಆಚೆ ಬಂದಿತ್ತು. ಬಳಿಕ 1975ರ ತುರ್ತು ಪರಿಸ್ಥಿತಿಯಿಂ ದಾಗಿ ಕಂಪೆನಿ ವಹಿವಾಟಿನಲ್ಲಿ ಆರ್ಥಿಕ ಹಿನ್ನಡೆ ಕಂಡುಬಂದಿತು. ಸಮಸ್ಯೆ ಅರ್ಥ ಮಾಡಿ ಕೊಳ್ಳದ ಕಾರ್ಮಿಕ ಒಕ್ಕೂಟ ಧರಣಿ ಯಲ್ಲಿ ನಿರತವಾಯಿತು. ಉತ್ಪಾದನೆ ಯಿತು. ಬಳಿಕ ವಿಧಿಯಿಲ್ಲದೇ ಕಂಪನಿಯ ನ್ನು ಮುಚ್ಚಬೇಕಾಯಿತು.