ರತನ್ ಟಾಟಾ ನಿಧನದ ಬಳಿಕ ಅವರ ಆಸ್ತಿ ಕುರಿತು ತೀವ್ರ ಕುತೂಹಲ ಮನೆ ಮಾಡಿತ್ತು. ಆಸ್ತಿ ಹಂಚಿಕೆಗೆ ರತನ್ ಟಾಟಾ ವಿಲ್ ಬರೆದಿಟ್ಟಿದ್ದರು. ಈ ವಿಲ್ ಪ್ರಕಾರ ಯಾರಿಗೆ ಎಷ್ಟೆಷ್ಟು ಕೋಟಿ ರೂ ಆಸ್ತಿ ಹಂಚಿಕೆ ಮಾಡಲಾಗಿದೆ? ಯಾರಿಗೆ ಎಷ್ಟು ಸಿಕ್ಕಿದೆ. ಎಲ್ಲಾ ಮಾಹಿತಿ ಬಹಿರಂಗವಾಗಿದೆ.
ಮುಂಬೈ(ಏ.01) ಆರ್ಥಿಕವಾಗಿ ಮಾತ್ರವಲ್ಲ ಹೃದಯ ಶ್ರೀಮಂತಿಕೆಯಲ್ಲೂ ರತನ್ ಟಾಟಾ ಮೀರಿಸುವ ವ್ಯಕ್ತಿತ್ವವಿಲ್ಲ. ತಾವೆಷ್ಟು ಆದಾಯಗಳಿಸುತ್ತಿದ್ದರೋ ಅಷ್ಟೇ ಹಲವು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದ ಏಕೈಕ ಉದ್ಯಮಿ ರತನ್ ಟಾಟಾ. ರತನ್ ಟಾಟಾ ನಿಧನ ಬಳಿಕ ಅವರು ಬಿಟ್ಟು ಹೋದ ಅಪಾರ ಆಸ್ತಿ ಹೇಗೆ ಹಂಚಿಕೆ ಮಾಡಲಾಗುತ್ತದೆ ಅನ್ನೋ ಕುತೂಹಲಕ್ಕೆ ವಿಲ್ ಉತ್ತರ ನೀಡಿತ್ತು. ಆದರೆ ಈ ವಿಲ್ ಪ್ರಕಾರ ರತನ್ ಟಾಟಾ ಬಿಟ್ಟು ಹೋದ ಬರೋಬ್ಬರಿ 3,800 ಕೋಟಿ ರೂಪಾಯಿ ಆಸ್ತಿಯನ್ನು ಹೇಗೆ ಹಂಚಿಕೆ ಮಾಡಲಾಗಿದೆ ಅನ್ನೋ ಮಾಹಿತಿ ಬಹಿರಂಗಾಗಿದೆ. ವಿಶೇಷ ಅಂದರೆ ತಮ್ಮ ಆಸ್ತಿಯ ಬಹುಪಾಲನ್ನು ಕುಟುಂಬ, ಆಪ್ತರಿಂದ ದೂರವಿಟ್ಟಿದ್ದಾರೆ.
2 ಸಂಸ್ಥೆಗೆ ಬಹುಪಾಲು
ರತನ್ ಟಾಟಾ ಅಕ್ಟೋಬರ್ 9, 2024ರಲ್ಲಿ ನಿಧನರಾಗಿದ್ದಾರೆ.ಆದರೆ ರತನ್ ಟಾಟಾ ತಮ್ಮ ಆಸ್ತಿ ಹೇಗೆ ಹಂಚಿಕೆ ಮಾಡಬೇಕು ಅನ್ನೋ ವಿಲ್ ಪತ್ರವನ್ನು ಫೆಬ್ರವರಿ 23, 2022ರಲ್ಲಿ ಬರೆದಿಟ್ಟಿದ್ದರು. ಈ ವಿಲ್‌ನಲ್ಲಿ ರತನ್ ಟಾಟಾ ಒಡೆತನದ ಬಹುಪಾಲನ್ನು ಎರಡು ಸಂಸ್ಥೆಗೆ ಹಂಚಿಕೆ ಮಾಡಿದ್ದಾರೆ. ಇನ್ನುಳಿದ ಆಸ್ತಿಯನ್ನು ಕುಟುಂಬಸ್ಥರು, ಆಪ್ತರಿಗೆ ಹಂಚಿದ್ದಾರೆ.
ರತನ್ ಟಾಟಾ ಮೊದಲ ಪ್ರೀತಿಗೆ ಅಡ್ಡಿಯಾದ ಇಂಡೋ-ಚೀನಾ ಯುದ್ಧ, ಮದುವೆ ಮುರಿದು ಬಿದ್ದಿದ್ದೇಕೆ?
3,800 ಕೋಟಿ ರೂ ಆಸ್ತಿ ಹಂಚಿಕೆ, ಯಾರಿಗೆಲ್ಲಾ ಸಿಕ್ಕಿದೆ ಪಾಲು?
ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ ಹಾಗೂ ರತನ್ ಟಾಟಾ ಎಂಡೋಮೆಂಟ್ ಟ್ರಸ್ಟ್. ಈ ಎರಡು ಸಂಸ್ಥೆಗಳು ಸಾಮಾಜಿಕ ಕಾರ್ಯಗಳು, ಟ್ರಸ್ಟ್ ಕೆಲಸದಲ್ಲಿ ತೊಡಗಿಸಿಕೊಂಡ ಸಂಸ್ಥೆಗಳು. ಎರಡು ಸಂಸ್ಥೆಗನ್ನು ರತನ್ ಟಾಟಾ ಹುಟ್ಟು ಹಾಕಿದ್ದರು. ಈ ಎರಡು ಸಂಸ್ಥೆಗೆ ರತನ್ ಟಾಟಾ ಆಸ್ತಿಯ ಬಹುಪಾಲು ಅಂದರೆ ಸರಿಸುಮಾರು 2500 ರಿಂದ 2800 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಂಚಿಕೆ ಮಾಡಲಾಗಿದೆ. ಈ ಪೈಕಿ ಟಾಟಾ ಸನ್ಸ್ ಷೇರು, ರತನ್ ಟಾಟಾ ಹೊಂದಿದ್ದ ಎಸ್ಟೇಟ್‌ಗಳು, ಹೂಡಿಕೆ ಮೊತ್ತ ಸೇರಿದಂತೆ ಹಲವು ಆಸ್ತಿಗಳು ಸೇರಿದೆ.
ಮೂವರಿಗೆ 800 ಕೋಟಿ
ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್, ಕೆಲ ಅಮೂಲ್ಯ ವಸ್ತುಗಳು ಸೇರಿದಂತೆ, ಬಂಗಲೆ, ಮನೆ ಸೇರಿದಂತೆ ಇತರ ವಸ್ತುಗಳನ್ನು ಕುಟುಂಬಸ್ಥರು, ಆಪ್ತರಿಗೆ ರತನ್ ಟಾಟಾ ಹಂಚಿಕೆ ಮಾಡಿದ್ದಾರೆ. ಸರಿಸುಮಾರು 800 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮೂವರಿಗೆ ಸಮಾನಗಿ ಹಂಚಿಕೆ ಮಾಡಿದ್ದಾರೆ. ಈ 800 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಟಾಟಾ ಕುಟುಂಬದ ಸಹೋದರಿಯರಾದ ಶಿರೀನ್ ಜೀಜೀಭೋಯ್ , ಡಿಯಾನ ಜಿಜೀಭೊಯ್ ಹಾಗೂ ಟಾಟಾ ಗ್ರೂಪ್ ಮಾಜಿ ಉದ್ಯೋಗಿ ಮೋಹಿನಿ ಎಂ ದತ್ತಾಗೆ ಹಂಚಿಕೆ ಮಾಡಿದ್ದಾರೆ.
ಇನ್ನು ಟಾಟಾ ಸಹೋದರ ಜಿಮ್ಮಿ ನವಲ್ ಟಾಟಾಗೆ ಜುಹು ಬಂಗಲೆಯನ್ನು ಹಂಚಿದ್ದಾರೆ. ಇನ್ನು ರತನ್ ಟಾಟಾ ಆತ್ಮೀಯ ಗೆಳೆಯ ಮೆಹುಲ್ ಮಿಸ್ತ್ರಿಗೆ ಆಲಿಬಾಗ್ ಆಸ್ತಿಯನ್ನು ಹಂಚಿದ್ದಾರೆ.
ರತನ್ ಟಾಟಾ ಮುದ್ದಿನ ನಾಯಿಗೆ 12 ಲಕ್ಷ ರೂಪಾಯಿ
ರತನ್ ಟಾಟಾಗೆ ನಾಯಿಗಳಂದರೆ ಪಂಚ ಪ್ರಾಣ. ತಮ್ಮ ಸಾಕು ನಾಯಿಯನ್ನು ಅಷ್ಟೇ ಮುದ್ದಾಗಿ ಸಾಕಿದ್ದಾರೆ. ಇದರ ಜೊತೆಗೆ ಬೀದಿ ನಾಯಿಯ ಆರೈಕೆಯನ್ನು ಮಾಡುತ್ತಿದ್ದರು. ತಮ್ಮ ಸಾಕು ನಾಯಿಯ ಆರೈಕೆಗೆ 12 ಲಕ್ಷ ರೂಪಾಯಿ ಮೀಸಲಿಟ್ಟಿದ್ದಾರೆ.
ಆತ್ಮೀಯ ಗೆಳೆಯ ಶಂತನು ನಾಯ್ಡುಗೆ ಏನು?
ಟಾಟಾ ಸಮೂಹದ ಕಾರ್ಯಕಾರಿ ಸಹಾಯಕ ಶಂತನು ನಾಯ್ಡು ರತನ್ ಟಾಟಾ ಆತ್ಮೀಯಾಗಿದ್ದ. ಅತ್ಯಂತ ಕಿರಿಯ ವಯಸ್ಸಿನ ಶಂತನು ರತನ್ ಟಾಟಾ ನೆಚ್ಚಿನ ಶಿಷ್ಯನಾಗಿದ್ದರು. ಶಂತನು ನಾಯ್ಡು ತೆಗೆದುಕೊಂಡಿದ್ದ ಶಿಕ್ಷನ ಸಾಲವನ್ನು ರತನ್ ಟಾಟಾ ಮನ್ನಾ ಮಾಡಿದ್ದಾರೆ.ಇನ್ನು ರತನ್ ಟಾಟಾ ನೆರಮನೆಯ ಜ್ಯಾಕ್ ಮಲೈಟ್‌ಗೆ ಬಡ್ಡಿರಹಿತ ಶಿಕ್ಷಣ ಸಾಲ ಅನುವು ಮಾಡಿಕೊಟ್ಟಿದ್ದಾರೆ.
ಟಾಟಾ ಒಡೆತನದ ಮುಂಬೈನ ಐಷಾರಾಮಿ ತಾಜ್ ಹೊಟೆಲ್‌ನಲ್ಲಿ ಟೀ ಬೆಲೆ ಎಷ್ಟು?