1.10 ಲಕ್ಷ ಕೋಟಿಯ ಒಡೆಯ ಆದರೂ ಸ್ಮಾರ್ಟ್‌ಫೋನ್‌ ಇಲ್ಲ, 6 ಲಕ್ಷದ ಕಾರ್‌ನಲ್ಲಿ ಓಡಾಟ!

By Santosh Naik  |  First Published Oct 19, 2024, 3:34 PM IST

ನಾಲ್ಕು ತಲೆಮಾರು ಕೂತು ಊಟ ಮಾಡಿದರೂ ಕರಗಿ ಹೋಗದಷ್ಟು ಆಸ್ತಿ. ಇಷ್ಟೆಲ್ಲಾ ಇದ್ದರೂ, ಕಂಪನಿಯ ಸಂಸ್ಥಾಪಕನ ಬಳಿಯಲ್ಲಿ ಒಂದು ಸ್ಮಾರ್ಟ್‌ಫೋನ್‌ ಕೂಡ ಇಲ್ಲ. ಐಷಾರಾಮಿ ಕಾರುಗಳ ಬದಲಾಗಿ 6 ಲಕ್ಷದ ಪುಟ್ಟ ಕಾರ್‌ನಲ್ಲಿ ಓಡಾಟ ನಡೆಸುತ್ತಿದ್ದಾರೆ.



ನವದೆಹಲಿ (ಅ.19): ಭಾರತ ಪ್ರತಿಭೆಗಳ ತವರು. ಫುಟ್‌ಪಾತ್‌ನಿಂದ ಶ್ರೀಮಂತಿಕೆಯವರೆಗೆ ಏರಿ ಉದಾಹರಣೆಯಾಗಿರುವ ಹಲವಾರು ವ್ಯಕ್ತಿಗಳಿದ್ದಾರೆ. ಬಡವರಾಗಿ ಜನಿಸಿದ್ದರೂ, ಕಷ್ಟಪಟ್ಟು ಕೆಲಸ ಮಾಡಿ, ಎಲ್ಲಾ ಅಡೆತಡೆಗಳನ್ನು ಸೋಲಿಸಿ ಅಂತಿಮವಾಗಿ ಯಶಸ್ಸನ್ನು ಹೇಗೆ ಸಾಧಿಸಬಹುದು ಅನ್ನೋದಕ್ಕೆ ಸ್ಫೂರ್ತಿಯಾದ ಅನೇಕರಿದ್ದಾರೆ. ಇಂದಿನ ಯಶಸ್ಸಿನ ಕಥೆಯ ಸರಣಿಯಲ್ಲಿ, ನಾವು ರಾಮ ಮೂರ್ತಿ ತ್ಯಾಗರಾಜನ್ ಅವರ ಜೀವನದ ಬಗ್ಗೆ ತಿಳಿಯೋಣ. ರಾಮ ಮೂರ್ತಿ ತ್ಯಾಗರಾಜನ್‌ ಅನ್ನೋರು ಯಾರು ಅನ್ನೋದು ಹಲವರ ಪ್ರಶ್ನೆ ಆಗಿರಬಹುದು. ಇವರು ಶ್ರೀರಾಮ್‌ ಗ್ರೂಪ್‌ನ ಸಂಸ್ಥಾಪಕರು. ಮಾನವೀಯತೆ, ಬದ್ಧತೆ ಹಾಗೂ ಉದ್ದೇಶ ಸರಿಯಾಗಿ ಇದ್ದರೆ, ಸಾಧಿಸಬಹುದಾದ ಶ್ರೇಷ್ಠತೆಗೆ ಇವರೇ ಜೀವಂತ ಉದಾಹರಣೆಯಾಗಿದ್ದಾರೆ.ಅವರ ಯಶಸ್ಸಿನ ಕಥೆ ಏಕೆ ಮುಖ್ಯವಾದುದು ಎಂದರೆ ಅವರು ಬಿಲಿಯನೇರ್‌ಗಳ ಜಗತ್ತಿನಲ್ಲಿ ಅಸಾಮಾನ್ಯ ವ್ಯಕ್ತಿಯಾಗಿ ಎದ್ದು ಕಾಣುತ್ತಾರೆ. 1.10 ಲಕ್ಷ ಕೋಟಿ ರೂಪಾಯಿಯ ದೊಡ್ಡ ಸಾಮ್ರಾಜ್ಯ ಕಟ್ಟಿದ್ದರೂ, ರಾಮ ಮೂರ್ತಿ ತ್ಯಾಗರಾಜನ್‌ ಇಂದಿಗೂ ತಮ್ಮ ಸರಳತೆಯಿಂದ ಗಮನಸೆಳೆಯುತ್ತಾರೆ. 

ಅವರದು ಯಾವುದೇ ಐಷಾರಾಮಿ ಮನೆಯಿಲ್ಲ. ತುಂಬಾ ಸಾಧಾರಣ ಮನೆಯಲ್ಲಿ ಅವರ ವಾಸ.ಆಡಿ, ಮರ್ಸಿಡೀಸ್‌ ಬೆಂಜ್‌, ಫೆರಾರಿ.. ಊಹೂಂ ಇದಾವುದು ಅಲ್ಲ. 6 ಲಕ್ಷ ರೂಪಾಯಿಯ ಸಣ್ಣ ಕಾರಿನಲ್ಲಿ ಇವರ ಪ್ರತಿನಿತ್ಯದ ಓಡಾಟ. ಇನ್ನು ಇವರನ್ನು ಸಂಪರ್ಕ ಮಾಡಬೇಕು ಎಂದಾದರೆ, ನೀವು ಅವರ ಕಚೇರಿಗೆ ಅಥವಾ ಮನೆಗೆ ಹೋಗಬೇಕು. ಏಕೆಂದರೆ, ಅವರು ಯಾವುದೇ ಸ್ಮಾರ್ಟ್‌ಫೋನ್‌ ಬಳಕೆ ಮಾಡೋದಿಲ್ಲ. ಸ್ಮಾರ್ಟ್‌ಫೋನ್‌ ಅಲ್ಲ, ಕನಿಷ್ಠ ಮೊಬೈಲ್‌ ಫೋನ್‌ ಕೂಡ ಅವರು ಬಳಸೋದಿಲ್ಲ ಎಂದರೆ ಅಚ್ಚರಿಯಾಗಬಹದು. ಬಟ್‌, ಅವರು ಇರೋದೇ ಹೀಗೆ.

ವೃತ್ತಿಜೀವನದ ಆರಂಭವಾಗಿದ್ದು ಹೇಗೆ?: ರಾಮಮೂರ್ತಿ ತ್ಯಾಗರಾಜನ್‌ ಅವರಿಗೆ ಈಗ 87 ವರ್ಷ. 1960ರಲ್ಲಿ ಅವರ ಉದ್ಯಮ ಪ್ರಯಾಣವನ್ನು ಆರಂಭಿಸಿದ್ದರು.ಆ ಹಂತದಲ್ಲಿ ಟ್ರಕ್ ಡ್ರೈವರ್‌ಗಳು ಮತ್ತು ಸಣ್ಣ ವ್ಯಾಪಾರ ಮಾಲೀಕರಂತಹ ಕಡಿಮೆ ಆದಾಯದ ಗುಂಪುಗಳು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಹೆಣಗಾಡುತ್ತಿರುವುದನ್ನು ಗಮನಿಸಿದರು. ಆ ಸಮಯದಲ್ಲಿ ಅವರು ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬ್ಯಾಂಕ್‌ಗಳು ಸಾಲ ನೀಡದೇ ಇರುವ ವ್ಯಕ್ತಿಗಳಿಗೆ ತಾನು ಸಾಲ ನೀಡುತ್ತೇನೆ ಎಂದುಕೊಂಡು ಅಲ್ಲಿದ್ದ ಅವಕಾಶವನ್ನು ಬಳಸಿಕೊಂಡು ದೊಡ್ಡ ಸಾಮ್ರಾಜ್ಯ ಕಟ್ಟಿದರು.

Tap to resize

Latest Videos

ಶ್ರೀರಾಮ್ ಗ್ರೂಪ್ ಪ್ರಾರಂಭ: ಸುದೀರ್ಘ ಯೋಚನೆ ಹಾಗೂ ಯೋಜನೆಯ ಬಳಿಕ, ಅವರು ಶ್ರೀರಾಮ್ ಗ್ರೂಪ್ ಅನ್ನು ಚಿಟ್-ಫಂಡ್ ಕಂಪನಿಯಾಗಿ ಪ್ರಾರಂಭಿಸಿದರು. ಆರಂಭಿಕ ದಿನಗಳಲ್ಲಿ, ವಾಣಿಜ್ಯ ವಾಹನಗಳಿಗೆ ಸಾಲ ನೀಡುವುದರ ಮೇಲೆ ಮಾತ್ರವೇ ಇವರ ಗಮನವಿತ್ತು. ಏಕೆಂದರೆ ಇದು ದೊಡ್ಡ ಸಾಲದಾತರು ಜನರ ಅಗತ್ಯಗಳನ್ನು ತಿಳಿಸದ ಜಾಗವಾಗಿತ್ತು. ಕಾಲಾನಂತರದಲ್ಲಿ, ಈ ಗ್ರಾಹಕ-ಕೇಂದ್ರಿತ ವಿಧಾನವು ಶ್ರೀರಾಮ್ ಗ್ರೂಪ್ ಅನ್ನು ಆರ್ಥಿಕ ವಲಯದಲ್ಲಿ ದೈತ್ಯರನ್ನಾಗಿ ಪರಿವರ್ತನೆ ಮಾಡಿತು.

ಭಾರತದ ಮಾಜಿ ಚೆಸ್‌ ಆಟಗಾರ, ಈಗ ದೇಶದ ಹೊಸ ಶತಕೋಟಿ ಕುಬೇರ!

ರಾಮಮೂರ್ತಿ ತ್ಯಾಗರಾಜನ್ ಇತರರಿಗಿಂತ ಏಕೆ ಭಿನ್ನ?: ದೊಡ್ಡ ಆರ್ಥಿಕ ಯಶಸ್ಸನ್ನು ಸಾಧಿಸಿದ ನಂತರವೂ, ತ್ಯಾಗರಾಜನ್ ಅವರನ್ನು ನಿಜವಾಗಿಯೂ ಪ್ರತ್ಯೇಕಿಸುವುದು ಅವರ ಸಾಧಾರಣವಾಗಿ ಬದುಕುವ ಬದ್ಧತೆ. ಶ್ರೀಮಂತಿಕೆ ಎಂದೂ ತಲೆಗೇರದಂತೆ ಅವರು ತಮ್ಮ ಜೀವನವಿಡೀ ಬದುಕಿದ್ದಾರೆ. ಮೊಬೈಲ್‌ ಫೋನ್‌ಅನ್ನು ಇಂದಿಗೂ ಬಳಸುತ್ತಿಲ್ಲ. ದುಬಾರಿ ಆಸ್ತಿಯನ್ನು ಖರೀದಿ ಮಾಡುವ ಯಾವ ಆಸಕ್ತಿಯೂ ಅವರಲ್ಲಿಲ್ಲ.
ಹಲವಾರು ಮಾಧ್ಯಮ ವರದಿಗಳ ಪ್ರಕಾರ, ರಾಮ ಮೂರ್ತಿ ತ್ಯಾಗರಾಜನ್ ಒಮ್ಮೆ $750 ಮಿಲಿಯನ್ ಕಂಪನಿಯಲ್ಲಿನ ತಮ್ಮ ಪಾಲನ್ನು ಮಾರಾಟ ಮಾಡಿದ್ದು, ಇದ ಆದಾಯವನ್ನು ಟ್ರಸ್ಟ್‌ಗೆ ದಾನ ಮಾಡಿದ್ದಾರೆ ಎನ್ನಲಾಗಿದೆ.

54 ರೂಪಾಯಿ ಷೇರಿನಿಂದ ಅಮೀರ್‌ ಖಾನ್‌ ಗಳಿಸಿದ್ದು 72 ಲಕ್ಷ!‌ ಶಾರುಖ್‌-ಸಲ್ಮಾನ್‌ ಮಾಡಿಕೊಂಡಿರೋ ಲಾಭವೆಷ್ಟು?

click me!