ಒಂದು ಕಾಲದಲ್ಲಿ ಫುಟ್‌ಪಾತ್‌ನಲ್ಲಿ ಚಿನ್ನದ ಆಭರಣಗಳನ್ನು ಮಾರಾಟ ಮಾಡುತ್ತಿದ್ದ ಪಿಎನ್ ಗಾಡ್ಗೀಳ್ ಜ್ಯೂವೆಲ್ಲರ್ಸ್ ಸದ್ಯದ ಮಾಲೀಕರದ ಸೌರಭ್ ಗಾಡ್ಗೀಳ ಭಾರತದ ಹೊಸ ಶತಕೋಟ್ಯಧಿಪತಿ ಎನಿಸಿಕೊಂಡಿದ್ದಾರೆ.
ಬೆಂಗಳೂರು (ಅ.19): ಕಂಪನಿಯು ಕಳೆದ ತಿಂಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆದ ನಂತರ ಪಿಎನ್ ಗಾಡ್ಗೀಳ್ ಜ್ಯುವೆಲರ್ಸ್‌ನ ಸೌರಭ್ ಗಾಡ್ಗಿಲ್ ಅವರು ಭಾರತದ ಬಿಲಿಯನೇರ್ಸ್ ಕ್ಲಬ್‌ಗೆ ಸೇರಿದ್ದಾರೆ. ಪುಣೆಯಲ್ಲಿ ನೆಲೆಸಿರುವ ಆರನೇ ತಲೆಮಾರಿನ ಉದ್ಯಮಿ, ಪಿಎನ್ ಗಾಡ್ಗೀಳ್ ಜ್ಯುವೆಲರ್ಸ್ ಅಥವಾ ಪಿಎನ್‌ಜಿ ಜ್ಯುವೆಲರ್ಸ್‌ನ ಹಾಲಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಐಪಿಒ ನಂತರ ಗಾಡ್ಗೀಳ್ ಅವರ ನಿವ್ವಳ ಮೌಲ್ಯವು ಸುಮಾರು $1.1 ಬಿಲಿಯನ್‌ಗೆ ಏರಿದೆ. ಪಿಎನ್ ಗಾಡ್ಗಿಲ್ ಜ್ಯುವೆಲರ್ಸ್ ಷೇರುಗಳ ಬೆಲೆ ಲಿಸ್ಟಿಂಗ್ ದಿನದಿಂದ ಶೇ.61 ರಷ್ಟು ಏರಿಕೆಯಾಗಿದೆ. 47 ವರ್ಷದ ಸೌರಭ್ ಗಾಡ್ಗೀಳ್ ರಾಷ್ಟ್ರೀಯ ಮಟ್ಟದ ಮಾಜಿ ಚೆಸ್ ಪ್ಲೇಯರ್ ಕೂಡ ಹೌದು. "ಮಾಜಿ ರಾಷ್ಟ್ರೀಯ ಮಟ್ಟದ ಚೆಸ್ ಆಟಗಾರನಾಗಿ, ಜೀವನದಲ್ಲಿ ಮೂವತ್ತು ವರ್ಷವಾದ ಬಳಿಕ ವೇಗವಾಗಿ ಮುಂದೆ ಸಾಗುತ್ತದೆ ಎಂದು ಯೋಚಿಸುವುದು ನನಗೆ ಅಭ್ಯಾಸವಾಗಿತ್ತು" ಎಂದು ಅವರು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ.
"ನನ್ನ ಈ ಅಭ್ಯಾಸವು ವಿಶೇಷವಾಗಿ 1998 ರಲ್ಲಿ ಸೂಕ್ತವಾಗಿ ಒಗ್ಗಿಕೊಳ್ಳಲು ಕಾರಣವಾಯುತು. ಅದೇ ವರ್ಷ ನಾನು PNG ಜ್ಯುವೆಲರ್ಸ್ ಕುಟುಂಬದ ವ್ಯವಹಾರದ ನಿಯಂತ್ರಣವನ್ನು ವಹಿಸಿಕೊಂಡಿದ್ದೆ' ಎಂದು ಹೇಳಿದ್ದಾರೆ. 2023-24 ರಲ್ಲಿ, ಸೌರಭ್ ಗಾಡ್ಗೀಳ್, ಅವರ ಪತ್ನಿ ರಾಧಿಕಾ ಮತ್ತು ಇತರ ಇಬ್ಬರು ಕುಟುಂಬ ಸದಸ್ಯರು ಒಟ್ಟಾಗಿ 272.4 ಮಿಲಿಯನ್ ರೂಪಾಯಿಗಳನ್ನು ($3.2 ಮಿಲಿಯನ್) ಸಂಭಾವನೆ ರೂಪದಲ್ಲಿ ತೆಗೆದುಕೊಂಡಿದ್ದಾರೆ ಎಂದು ಬ್ಲೂಮ್‌ಬರ್ಗ್ ತಿಳಿಸಿದೆ.
undefined
MBA ಸಮಯದಲ್ಲಿ RBI ಇಂಟರ್ನ್‌ಶಿಪ್: ಪುಣೆಯ ಬೃಹಾನ್ ಮಹಾರಾಷ್ಟ್ರ ಕಾಲೇಜ್ ಆಫ್ ಕಾಮರ್ಸ್‌ನಿಂದ ಬಿಕಾಂ ಪದವಿಯನ್ನು ಗಳಿಸಿದ ನಂತರ, ಗಾಡ್ಗೀಳ್ ಪುಣೆಯ ಸಿಂಬಯಾಸಿಸ್ ವಿಶ್ವವಿದ್ಯಾಲಯದಿಂದ ಎಂಬಿಎ ಪಡೆದರು. ಸಿಂಬಿಯಾಸಿಸ್‌ನಲ್ಲಿ ಎಂಬಿಎ ಮಾಡುವ ವೇಳೆ, ಗಾಡ್ಗೀಳ್ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಇಂಟರ್ನ್‌ಶಿಪ್ ಮಾಡಿದರು.
"ನಾನು ಜಾಗತಿಕ ಪರಿಸರದಲ್ಲಿ ಚಿನ್ನದ ಮಾರುಕಟ್ಟೆ ಮತ್ತು ಅದು ಎಲ್ಲಿಗೆ ಕಾರಣವಾಗಬಹುದು ಎಂಬುದನ್ನು ನಾನು ಕೂಲಂಕಷವಾಗಿ ಅಧ್ಯಯನ ಮಾಡಿದೆ. ನಾನು ಅಂತಿಮವಾಗಿ ಕಂಪನಿಗೆ ಸೇರಿದಾಗ ಅದು ನನಗೆ ಬಹಳಷ್ಟು ಸಹಾಯ ಮಾಡಿತು" ಎಂದು ಗಾಡ್ಗೀಳ್ 2018ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಮೀಲ್ ಕೂಪನ್ ಅನ್ನು ಟೂಥ್‌ಪೇಸ್ಟ್, ಡಿಟರ್ಜಂಟ್ ಖರೀದಿಸಲು ಬಳಕೆ, 24 ಉದ್ಯೋಗಿಗಳ ವಜಾ ಮಾಡಿದ ಮೆಟಾ!
ಪಿಎನ್ ಗಾಡ್ಗೀಳ್ ಜ್ಯುವೆಲರ್ಸ್ ಕುರಿತು: ಬ್ಲೂಮ್‌ಬರ್ಗ್ ಪ್ರಕಾರ ಮಹಾರಾಷ್ಟ್ರದ ಸಾಂಗ್ಲಿ ಪಟ್ಟಣದ ಫುಟ್‌ಪಾತ್‌ನಲ್ಲಿ ಚಿನ್ನದ ಆಭರಣಗಳನ್ನು ಮಾರಾಟ ಮಾಡಿದ ಗಣೇಶ್ ನಾರಾಯಣ ಗಾಡ್ಗಿಲ್ ಅವರು 1832 ರಲ್ಲಿ ಪಿಎನ್ ಗಾಡ್ಗಿಲ್ ಜ್ಯುವೆಲರ್ಸ್ ಅನ್ನು ಸ್ಥಾಪಿಸಿದರು. ಕಂಪನಿಯ ಉತ್ಪನ್ನಗಳನ್ನು ಪ್ರಾಥಮಿಕವಾಗಿ ಅದರ ಪ್ರಮುಖ ಬ್ರ್ಯಾಂಡ್, "PNG" ಮತ್ತು ವಿವಿಧ ಉಪ-ಬ್ರಾಂಡ್‌ಗಳ ಅಡಿಯಲ್ಲಿ 39 ಚಿಲ್ಲರೆ ಅಂಗಡಿಗಳು (ಜುಲೈ 31, 2024 ರಂತೆ) ಮತ್ತು ವೆಬ್‌ಸೈಟ್‌ಗಳು ಸೇರಿದಂತೆ ವಿವಿಧ ಆನ್‌ಲೈನ್ ಮಾರುಕಟ್ಟೆ ಸ್ಥಳಗಳನ್ನು ಒಳಗೊಂಡಂತೆ ಬಹು ಚಾನೆಲ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.
54 ರೂಪಾಯಿ ಷೇರಿನಿಂದ ಅಮೀರ್ ಖಾನ್ ಗಳಿಸಿದ್ದು 72 ಲಕ್ಷ! ಶಾರುಖ್-ಸಲ್ಮಾನ್ ಮಾಡಿಕೊಂಡಿರೋ ಲಾಭವೆಷ್ಟು?