ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್, ಕಿರಾಣಿ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ದೀಪಾವಳಿ ಸಮಯದಲ್ಲಿ ಗಿಫ್ಟ್ ನೀಡಿದೆ. ಇನ್ಮುಂದೆ ನೀವು ಬಿಲ್ ಪಾವತಿಗೆ ಉದ್ದದ ಕ್ಯೂನಲ್ಲಿ ನಿಲ್ಬೇಕಾಗಿಲ್ಲ.
ದೀಪಾವಳಿ (Diwali) ಇನ್ನೇನು ಹತ್ತಿರ ಬರ್ತಿದೆ. ಹಬ್ಬದೂಟಕ್ಕೆ ಒಂದಿಷ್ಟು ಕಿರಾಣಿ (Grocery) ಸಾಮಾನು ಬೇಕೇಬೇಕು. ಗ್ರಾಹಕ (customer)ರ ನೆಚ್ಚಿನ ಕಿರಾಣಿ ಅಂಗಡಿ ಮುಂದೆ ದೊಡ್ಡ ಕ್ಯೂ ಇರೋದು ಕಾಮನ್. ಜಿಯೋ ಮಾರ್ಟ್ (Jio Mart), ಸೂಪರ್ ಮಾರ್ಕೆಟ್ಗಳಲ್ಲಿ ಸಾಮಾನು ಖರೀದಿ ಸುಲಭವಾದ್ರೂ ಬಿಲ್ ಮಾಡಿಸೋದು ದೊಡ್ಡ ತಲೆನೋವಿನ ಕೆಲಸ. ವಾರಾಂತ್ಯದಲ್ಲಂತೂ ಕಥೆ ಮುಗಿದಂಗೆ. ಸಾಮಾನು ಖರೀದಿಗೆ ಅರ್ಧ ಗಂಟೆ ಹಿಡಿದ್ರೆ ಬಿಲ್ ಗೆ ಎರಡು ಗಂಟೆ ಬೇಕು. ರಿಲಯಲ್ಸ್ (Reliance) ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani) ಈ ಸಮಸ್ಯೆಗೆ ಈಗ ಬ್ರೇಕ್ ನೀಡಲು ಮುಂದಾಗಿದ್ದಾರೆ. ಗ್ರಾಹಕರಿಗೆ ದೀಪಾವಳಿ ಗಿಫ್ಟ್ ನೀಡ್ತಿದ್ದಾರೆ.
ಶಾಪಿಂಗ್ ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಬಳಸಿ, ಗ್ರಾಹಕರ ಕೆಲಸ ಸುಲಭ ಮಾಡಲಾಗ್ತಿದೆ. ಕೃತಕ ಬುದ್ಧಿಮತ್ತೆಯನ್ನು ಹೊಂದಿರುವ ಜಿಯೋದ ಶಾಪಿಂಗ್ ಕಾರ್ಟ್ ಸ್ವಯಂಚಾಲಿತವಾಗಿ ಶಾಪಿಂಗ್ ಬಿಲ್ ತಯಾರಿಸಲಿದೆ. ರಿಲಯನ್ಸ್ ಜಿಯೋ ಈ ಅದ್ಭುತ ತಂತ್ರಜ್ಞಾನವನ್ನು ಇದೇ ಅಕ್ಟೋಬರ್ 15ರಿಂದ 18ರವರೆಗೆ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2024 ರಲ್ಲಿ ಪ್ರದರ್ಶಿಸಿದೆ.
ಮತ್ತೆ ಸೊಸೆ ಹೆಗಲ ಮೇಲೆ ಕೈ ಹಾಕಿದ ಮುಖೇಶ್ ಅಂಬಾನಿ, ಸಮ್ ಥಿಂಗ್ ರಾಂಗ್ ಎನ್ನುತ್ತಿದ್ದಾರೆ
ಸ್ಮಾರ್ಟ್ ಕಾರ್ಟ್ ಹೇಗೆ ಕೆಲಸ ಮಾಡುತ್ತೆ? : ಶಾಪಿಂಗ್ ಮಾಡಲು ನೀವು ಸೂಪರ್ ಮಾರ್ಕೆಟ್ ಗೆ ಹೋಗಿದ್ದೀರಿ ಅಂದಿಟ್ಕೊಳ್ಳಿ. ಎಲ್ಲ ವಸ್ತುವನ್ನು ತಳ್ಳುವ ಗಾಡಿಗೆ ಹಾಕಿಕೊಳ್ತೀರಿ. ನಂತ್ರ ಬಿಲ್ ಕೌಂಟರ್ ಗೆ ಬಂದು, ಬೇಸರದಲ್ಲಿ ನಿಲ್ತೀರಿ. ಆದ್ರೆ ಇನ್ಮುಂದೆ ನೀವು, ಜಿಯೋ ಕಾರ್ಟ್ ಬಳಕೆ ಮಾಡ್ಬಹುದು. ಇದನ್ನು ಜಿಯೋ ಸ್ಮಾರ್ಟ್ ಶಾಪಿಂಗ್ ಕಾರ್ಟ್ (Jio Smart Shopping Cart) ಎಂದು ಕರೆಯುತ್ತಾರೆ. ಈ ಶಾಪಿಂಗ್ ಕಾರ್ಟ್, ಕ್ಯಾಮರಾ ಹಾಗೂ ಸ್ಕ್ಯಾನರ್ ಹೊಂದಿದೆ. ಈ ಕಾರ್ಟ್ ಒಳಗೆ ನೀವು ವಸ್ತುಗಳನ್ನು ಹಾಕ್ತಾ ಇದ್ದಂತೆ ಅದು ಕ್ಯಾಮರಾದಲ್ಲಿ ರೆಕಾರ್ಡ್ ಆಗುತ್ತೆ. ಕ್ಯಾಮರಾ ಹಾಗೂ ಸ್ಕ್ಯಾನರ್, ನೀವು ಕಾರ್ಟ್ ನಲ್ಲಿ ಯಾವ ವಸ್ತುವನ್ನು ಹಾಕಿದ್ದೀರಿ ಹಾಗೂ ಅದ್ರ ಬೆಲೆ ಎಷ್ಟು ಎಂಬುದನ್ನು ಸ್ವಯಂಚಾಲಿತವಾಗಿ ಲೆಕ್ಕಮಾಡುತ್ತೆ. ನಂತ್ರ ಅದು ಅಂಗಡಿಯಲ್ಲಿರುವ ಕಂಪ್ಯೂಟರ್ ಗೆ ಹೋಗುತ್ತೆ. ಅದ್ರಲ್ಲಿ ಬಿಲ್ ಸಿದ್ಧವಾಗುತ್ತೆ. ಒಂದ್ವೇಳೆ ಕಾರ್ಟ್ ಗೆ ನೀವು ಸಾಮಾನು ಹಾಕಿ ತೆಗೆದ್ರೆ, ಬಿಲ್ ನಲ್ಲಿರುವ ಆ ವಸ್ತು ಸ್ವಯಂಚಾಲಿತವಾಗಿ ಡಿಲಿಟ್ ಆಗುತ್ತೆ.
ಇದಾದ್ಮೇಲೂ ನೀವು ಬಿಲ್ ಕೌಂಟರ್ ಗೆ ಹೋಗ್ಬೇಕು. ಆದ್ರೆ ಬಿಲ್ ಕೌಂಟರ್ ನಲ್ಲಿ ಎಲ್ಲ ವಸ್ತುವನ್ನು ತೆಗೆದಿಟ್ಟು, ಸ್ಕ್ಯಾನ್ ಮಾಡಿ ಮತ್ತೆ ಬಿಲ್ ಮಾಡಬೇಕಾಗಿಲ್ಲ. ನಿಮ್ಮ ಕಾರ್ಟ್ ನಲ್ಲಿರುವ ಸ್ಕ್ಯಾನ್ ಕೋಡನ್ನು ಸ್ಕ್ಯಾನ್ ಮಾಡಿದ್ರೆ ಬಿಲ್ ಬರುತ್ತದೆ. ಸದ್ಯ ಈ ಸಿಸ್ಟಂ ನಿಮಗೆ ಮೆಟ್ರೋ ಸಿಟಿ ಬೆಂಗಳೂರಿನಲ್ಲಿ ಲಭ್ಯವಿಲ್ಲ. ಹೈದ್ರಾಬಾದ್ ಹಾಗೂ ಮುಂಬೈನಲ್ಲಿ ಮಾತ್ರ ರಿಲಾಯನ್ಸ್ ಈ ಸ್ಮಾರ್ಟ್ ಕಾರ್ಟ್ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಈ ಕಾರ್ಟ್ ಇಷ್ಟವಾಗಿದೆ. ಹಾಗಾಗಿ ಶೀಘ್ರವೇ ದೇಶದ ಬೇರೆ ನಗರಗಳಿಗೆ ಈ ಕಾರ್ಟ್ ಲಗ್ಗೆಯಿಡಲಿದೆ.
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಒಂದು ವಾರದಲ್ಲಿ ಅಂತಿಮ ಸ್ಥಳ ಘೋಷಣೆ: ಸಚಿವ ಎಂ.ಬಿ. ಪಾಟೀಲ
ಸ್ಮಾರ್ಟ್ ಆಗಿದೆ ತೂಕ ಮಾಪಕ : ಬೇಳೆ, ಸಕ್ಕರೆ, ತರಕಾರಿಗಳನ್ನು ನೀವು ಖರೀದಿ ಮಾಡಿದಾಗ ಅದ್ರ ತೂಕ ನೋಡ್ಬೇಕಾಗುತ್ತದೆ. ತೂಕ ಮಾಪನದ ಮೇಲೆ ವಸ್ತುಗಳನ್ನು ಇಟ್ಟಾಗ, ನೀವು ಇಟ್ಟ ಬೇಳೆ ಯಾವುದು ಎಂಬುದನ್ನು ಸಿಬ್ಬಂದಿ ನಮೂದಿಸುತ್ತಾರೆ. ಆದ್ರೆ ಈ ಸ್ಮಾರ್ಟ್ ತೂಕ ಮಾಪಕದಲ್ಲಿ ಅದ್ರ ಅವಶ್ಯಕತೆ ಇಲ್ಲ. ನೀವು ತೂಕ ಮಾಪನದ ಮೇಲೆ ಯಾವುದೇ ಬೇಳೆಯನ್ನು ಇಡಬಹುದು. ಅದ್ರಲ್ಲಿರುವ ಕ್ಯಾಮರಾ, ನೀವು ಯಾವ ಬೇಳೆ ಇಟ್ಟಿದ್ದೀರಿ ಎಂಬುದನ್ನು ಪತ್ತೆ ಮಾಡಿ, ಅದ್ರ ಬೆಲೆಯನ್ನು ಸೂಚಿಸುತ್ತದೆ. ಒಂದ್ವೇಳೆ ನೀವು ಪ್ಯಾಕೆಟ್ ಕಿರಾಣಿ ಇಟ್ಟರೂ ಅದು ಅದನ್ನು ಗುರುತಿಸುತ್ತದೆ.