ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದು ಭಕ್ತರು, ಕ್ರೌಡ್ ಫಂಡಿಂಗ್‌ಗೆ ಬೆಸ್ಟ್ ಎಕ್ಸಾಂಪಲ್!

By Suvarna NewsFirst Published Jan 8, 2024, 4:52 PM IST
Highlights

ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬ ಭಾರತೀಯನ ನೆರವು, ಪ್ರಾರ್ಥನೆ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ರಾಮನ ದರ್ಶನ ಭಕ್ತರಿಗೆ ಸಿಗಲಿದೆ. ಇಷ್ಟು ದೊಡ್ಡ, ಐತಿಹಾಸಿಕ ಕೆಲಸಕ್ಕೆ ದೇಣಿ ಬಂದ ಹಣ ಎಷ್ಟು ಗೊತ್ತಾ? 
 

ಸದ್ಯ ಎಲ್ಲರ ಕೇಂದ್ರ ಬಿಂದು ರಾಮ ಮಂದಿರ. ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ಭಕ್ತರೆಲ್ಲ ಆ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಅಯೋಧ್ಯೆಯಲ್ಲಿ ಭದ್ರತೆಯಿಂದ ಹಿಡಿದು ಸಿದ್ಧತೆಯವರೆಗೆ ಎಲ್ಲ ಕೆಲಸ ವೇಗವಾಗಿ ನಡೆಯುತ್ತಿದೆ. ರಾಮ ಮಂದಿರ ನಿರ್ಮಾಣಕ್ಕೆ ದೇಶದ ಭಕ್ತರಿಂದ ಮಾತ್ರವಲ್ಲ ವಿದೇಶದಲ್ಲಿರುವ ಜನರಿಂದಲೂ ದೇಣಿಗೆ ಹರಿದು ಬಂದಿದೆ.

ರಾಮ ಮಂದಿರ (RamaMandir) ನಿರ್ಮಾಣ ಮಾಡುವ ಘೋಷಣೆ ಮಾಡಿದಾಗ ಇಷ್ಟೊಂದು ದೇಣಿಗೆ ರಾಮ ಭಕ್ತರಿಂದ ಹರಿದು ಬರುತ್ತೆ ಎನ್ನುವ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದ್ರೆ ರಾಮನ ವಿಷ್ಯದಲ್ಲಿ ಭಕ್ತರು ಹೆಚ್ಚು ಧಾರಾಳತೆ ಮೆರೆದಿದ್ದಾರೆ. ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ಸಹಾಯವನ್ನು ಪ್ರತಿಯೊಬ್ಬರೂ ಮಾಡಿದ್ದಾರೆ. ದೇಣಿಗೆ ಬಂದ ಹಣದ ಬಡ್ಡಿ (Interest) ಯಲ್ಲಿಯೇ ರಾಮ ಮಂದಿರದ ಮೊದಲ ಮಹಡಿ ನಿರ್ಮಾಣವಾಗಿದೆ ಅಂದ್ರೆ ಅದು ಖುಷಿಯ ಸಂಗತಿ. ಈವರೆಗೆ ರಾಮ ಮಂದಿರ ನಿರ್ಮಾಣಕ್ಕೆ ಹೆಚ್ಚು ಹಣ ಬಂದಿದೆ ಎಂಬ ಮಾಹಿತಿ ಇಲ್ಲಿದೆ.

ರಾಮ ಸೀತೆ ವಾಸಿಸಿದ್ದ ಕನಕ ಮಹಲ್‌ನಲ್ಲಿ ಡಾ ಬ್ರೋ! ಇನ್ನೂ ಇದೆ ದೇವರ ಕಾಲಿನ ಧೂಳಿನ ಘಮ

ರಾಮ ಮಂದಿರ ನಿರ್ಮಾಣ (Construction) ಕ್ಕೆ ದೇಣಿಗೆಯಾಗಿ ಬಂತು ಇಷ್ಟು ಹಣ : ರಾಮ ಮಂದಿರ ನಿರ್ಮಾಣ ಭಾರತದ ಬಹುದೊಡ್ಡ ಕನಸು. ಅದು ಈಗ ಈಡೇರುತ್ತಿದೆ. ಐತಿಹಾಸ ಕ್ಷಣಕ್ಕೆ ಇಡೀ ದೇಶವೇ ಸಾಕ್ಷ್ಯವಾಗಲಿದೆ. ಈ ಸಂದರ್ಭದಲ್ಲಿ ಭಾರತದ ಪ್ರತಿಯೊಬ್ಬನೂ ದೇಣಿಗೆ ನೀಡಿ, ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುವ ಕೆಲಸ ಮಾಡಿದ್ದಾನೆ. ಹಾಗಾಗಿಯೇ ರಾಮ ಮಂದಿರ ನಿರ್ಮಾಣಕ್ಕೆ ಈವರೆಗೆ 5000 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಬಂದಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ಪ್ರಕಾರ, ಇದುವರೆಗೆ 3200 ಕೋಟಿ ರೂಪಾಯಿ ದೇವಾಲಯದ ಸಮರ್ಪಣಾ ನಿಧಿ ಖಾತೆಗೆ ಬಂದಿದೆ. 

 ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಆರಂಭದಲ್ಲಿ 900 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿತ್ತು. ಆದ್ರೆ ಡಿಸೆಂಬರ್ ನಲ್ಲಿ ನೆಡೆದ ಲೆಕ್ಕಾಚಾರದ ಪ್ರಕಾರ 5 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ದೇಣಿಗೆ ಶ್ರೀರಾಮನ ದೇವಸ್ಥಾನಕ್ಕೆ ಬಂದಿದೆ. ಸುಮಾರು 18 ಕೋಟಿ ರಾಮ ಭಕ್ತರು, ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ದೇಣಿಗೆ ನೀಡಿದ್ದಾರೆ. ನ್ಯಾಷನಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಖಾತೆಗಳಿಗೆ ಹಣ ಹಾಕಿದ್ದಾರೆ. ಅಲ್ಲಿ ಸುಮಾರು 3,200 ಕೋಟಿ ರೂಪಾಯಿ ನಿಧಿ ಸಂಗ್ರಹವಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ಹೇಳಿದೆ. ಟ್ರಸ್ಟ್, ಬ್ಯಾಂಕ್ ಖಾತೆಗೆ ಬಂದ ಹಣವನ್ನು ಎಫ್ ಡಿ ಮಾಡಿತ್ತು. ಎಫ್ ಡಿ ಬಡ್ಡಿಯಲ್ಲೇ ಮಂದಿರ ನಿರ್ಮಾಣದ ಅನೇಕ ಕೆಲಸ ಮಾಡಲಾಗಿದೆ.

ಅತ್ಯಂತ ಹೆಚ್ಚು ದೇಣಿಗೆ ಬಂದಿದ್ದು ಇವರಿಂದ : ರಾಮ ಮಂದಿರ ನಿರ್ಮಾಣಕ್ಕೆ ಒಂದು ರೂಪಾಯಿ ದೇಣಿಗೆ ನೀಡಿದ್ರೂ ಅದು ಮಹತ್ವವನ್ನು ಪಡೆಯುತ್ತದೆ. ಆದ್ರೆ ಯಾರು ಹೆಚ್ಚಿಗೆ ದೇಣಿಗೆ ಪಾವತಿ ಮಾಡಿದ್ದಾರೆ ಎಂಬ ಪ್ರಶ್ನೆಗೆ ಟ್ರಸ್ಟ್ ಉತ್ತರ ನೀಡಿದೆ. ವೆಬ್ ಸೈಟ್ ಪ್ರಕಾರ, ಆಧ್ಯಾತ್ಮಿಕ ಗುರು ಮತ್ತು ಕಥೆಗಾರ ಮೊರಾರಿ ಬಾಪು ಹೆಚ್ಚು ದೇಣಿಗೆ ನೀಡಿದ್ದಾರೆ. ಅವರು 11.3 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಅವರು ಮಾತ್ರವಲ್ಲದೆ ಅವರ ಅನುಯಾಯಿಗಳಿಂದಲೂ ದೇಣಿಗೆ ಬಂದಿದೆ. ಕೆನಡಾ, ಯುಎಸ್ ಸೇರಿದಂತೆ ಬೇರೆ ದೇಶದಲ್ಲಿರುವ ಮೊರಾರಿ ಬಾಪು ಅವರ ಅನುಯಾಯಿಗಳು ಹೆಚ್ಚುವರಿ ಎಂಟು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಇನ್ನು ಗುಜರಾತ್‌ನ ವಜ್ರದ ಉದ್ಯಮಿ ಗೋವಿಂದಭಾಯ್ ಧೋಲಾಕಿಯಾ ರಾಮ ಮಂದಿರ ನಿರ್ಮಾಣಕ್ಕಾಗಿ 11 ಕೋಟಿ ರೂಪಾಯಿ ದೇಣಿಗೆ ಪಾವತಿಸಿದ್ದಾರೆ. 

ಚಿನ್ನದ ಪಾದರಕ್ಷೆ ಹೊತ್ತು ಅಯೋಧ್ಯೆಗೆ 8,000 ಕಿಮೀ ಪಾದಯಾತ್ರೆ ಕೈಗೊಂಡ 64ರ ವ್ಯಕ್ತಿ!

ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಮ ಮಂದಿರಕ್ಕೆ ಮೊದಲು ದೇಣಿಗೆ ನೀಡಿದ ಭಾರತೀಯರಾಗಿದ್ದಾರೆ. ಇನ್ನು ವಿದೇಶವನ್ನು ನೋಡೋದಾದ್ರೆ ಅಮೆರಿಕಾದ ಭಕ್ತರೊಬ್ಬರಿಂದ ಮೊದಲ ದೇಣಿಗೆ ಹಣ ಬಂದಿತ್ತು. 
 

click me!