ಕೆಲವರು ಕನಸು ಈಡೇರಿಸಿಕೊಳ್ಳಲು ಏನು ಬೇಕಾದ್ರೂ ಮಾಡ್ತಾರೆ. ತಮ್ಮ ಜೀವವನ್ನೇ ಪಣಕ್ಕಿಡುವವರಿದ್ದಾರೆ. ಈ ಯುವತಿ ಒಳ್ಳೆ ನೌಕರಿ ಬಿಟ್ಟು, ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಯೇ ತನ್ನ ಕನಸನ್ನು ಈಡೇರಿಸಿಕೊಳ್ತಿದ್ದಾಳೆ. ಈ ಮೂಲಕ ಇನ್ವೆಸ್ಟ್ಮೆಂಟ್ ಗುರು ಎಂಬ ಹೆಸರು ಪಡೆದಿದ್ದಾಳೆ.
ಅತಿ ಹೆಚ್ಚು ಸಂಬಳ (Salary) ಬರಬೇಕು ಎಂಬುದು ಪ್ರತಿಯೊಬ್ಬರ ಆಸೆ. ಅದ್ರಲ್ಲೂ ಬ್ಯಾಂಕರ್ (Banker) ಜಾಬ್ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವವರಿದ್ದಾರೆ. ಹೆಚ್ಚು ಸಂಬಳ ಬರುವ ಈ ಕೆಲಸವನ್ನು ಯಾರು ಬಿಡ್ತಾರೆ ನೀವೇ ಹೇಳಿ? ಆದ್ರೆ ಜಗತ್ತಿನಲ್ಲಿ ವಿಭಿನ್ನ ಜನರಿದ್ದಾರೆ. ಅವರ ಆಸೆ – ಕನಸುಗಳು ಬೇರೆಯಾಗಿರ್ತವೆ. ಎಷ್ಟೇ ಸಂಬಳ ಬರಲಿ, ಐಷಾರಾಮಿ ಜೀವನವಿರಲಿ, ಕನಸು ಈಡೇರಿಸಿಕೊಳ್ಳಲು ಅವರು ಆ ಕೆಲಸ ಬಿಡಲು ಸಿದ್ಧವಿರ್ತಾರೆ. ಕೋಲ್ಕತ್ತಾ (Kolkata) ದ ನಿವಾಸಿ ರಾಜರ್ಷಿತಾ ಸುರ್ (Rajarshita Sur) ಕೂಡ ಇಂಥವರಲ್ಲಿ ಒಬ್ಬರು. ರಾಜರ್ಷಿತಾ ಸುರ್ ಕನಸು ಜಗತ್ತು ಸುತ್ತುವುದಾಗಿತ್ತು. ಇದೇ ಕಾರಣಕ್ಕೆ ಅವರು ಬ್ಯಾಂಕರ್ ನೌಕರಿಯನ್ನು ತೊರೆದಿದ್ದರು. ಈಗ ರಾಜರ್ಷಿತಾ ಸುರ್ ಕನಸನ್ನು ನನಸು ಮಾಡಿದ್ದು ಷೇರು ಮಾರುಕಟ್ಟೆ (Share Market).
ರಾಜರ್ಷಿತಾ ಸುರ್ ಕನಸು ಏನು ಎನ್ನುವ ವಿವರ ಇಲ್ಲಿದೆ : ರಾಜರ್ಷಿತಾ ಸುರ್ ಅವರಿಗೆ ಖಾಸಗಿ ಬ್ಯಾಂಕಿನ ಖಜಾನೆ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ಕೆಲಸದಲ್ಲಿ ಯಾವುದೇ ಹೆಚ್ಚಿನ ತಲೆಬಿಸಿ ಇರಲಿಲ್ಲ. ಆದ್ರೆ ಮನಸ್ಸು ಬಂದಾಗ ಎಲ್ಲೆಂದ್ರಲ್ಲಿಗೆ ಹೋಗಲು ರಜೆ ಸಿಗ್ತಿರಲಿಲ್ಲ. ದಿನದ ಎಂಟು ಗಂಟೆ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಬದಲು ಆರಾಮವಾಗಿ ಕೆಲಸ ಮಾಡುವ ಹಾಗೂ ಖರ್ಚಿಗೆ ಸಾಕಷ್ಟು ದುಡಿಯುವ ಕೆಲಸವಿದ್ರೆ ಚೆಂದ ಎಂದುಕೊಂಡ ರಾಜರ್ಷಿತಾ ಸುರ್, ಅದ್ರ ಹುಡುಕಾಟ ಶುರು ಮಾಡಿದ್ದರು. ಬ್ಯಾಂಕ್‌ನಲ್ಲಿ ಫಾರೆಕ್ಸ್ ಟ್ರೇಡಿಂಗ್ (Forex Trading) ನೋಡಿಕೊಳ್ಳುತ್ತಿದ್ದರಿಂದ, ರಾಜರ್ಷಿತಾ ಸುರ್, ಷೇರು ಮಾರುಕಟ್ಟೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ನಿರ್ಧರಿಸಿದ್ರು.
PETROL - DIESEL PRICE TODAY: ಯಾವೆಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ? ಇಲ್ಲಿದೆ ವಿವರ
ಷೇರು ಮಾರುಕಟ್ಟೆಯಲ್ಲಿ ಹೀಗೆ ಶುರುವಾಯ್ತು ವಹಿವಾಟು : ಮೊದಲು ರಾಜರ್ಷಿತಾ ಕೆಲಸ ಬಿಟ್ಟರು. ನಂತ್ರ ಸ್ಟಾಕ್ ಮಾರ್ಕೆಟ್ ನಲ್ಲಿ ಟ್ರೇಡಿಂಗ್ ಶುರು ಮಾಡಿದ್ರು. ಆರಂಭದಲ್ಲಿ ಅವರು ಕಾರ್ಪೊರೇಟ್ ಸಂಸ್ಥೆಯೊಂದಿಗೆ ಮೂರು ವರ್ಷಗಳ ಕಾಲ ಸ್ವಾಮ್ಯದ ಇಕ್ವಿಟಿ ವ್ಯಾಪಾರಿಯಾಗಿ ಕೆಲಸ ಮಾಡಿದರು. ಈ ಕೆಲಸದ ಜೊತೆ ತಾವೇ ಸ್ವಂತ ಟ್ರೇಡಿಂಗ್ ಕೂಡ ಮಾಡ್ತಿದ್ದರು. ನಿಧಾನವಾಗಿ ಷೇರು ಮಾರುಕಟ್ಟೆ ಹೆಜ್ಜೆಗಳು ರಾಜರ್ಷಿತಾ ಸುರ್ ಗೆ ಅರ್ಥವಾಗಲು ಶುರುವಾಯ್ತು. ಹಾಗೆ ಅಲ್ಪ ಸ್ವಲ್ಪ ಗಳಿಕೆಯನ್ನು ರಾಜರ್ಷಿತಾ ಸುರ್ ಶುರು ಮಾಡಿದ್ರು. ಅಷ್ಟೇ, ರಾಜರ್ಷಿತಾ, ಈ ಕೆಲಸವನ್ನೂ ಬಿಟ್ಟು, ದೇಶ ಸುತ್ತಲು ಶುರು ಮಾಡಿದ್ರು.
ಪ್ರಪಂಚ ಸುತ್ತಾಡಿದ ರಾಜರ್ಷಿತಾ ಸುರ್ : ಸದ್ಯ ರಾಜರ್ಷಿತಾ ಸುರ್ ಅವರನ್ನು ಇನ್ವೆಸ್ಟ್ಮೆಂಟ್ ಗುರು (Investment Guru) ಎಂದೇ ಕರೆಯಲಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಶುರು ಮಾಡಿ 8 ವರ್ಷ ಕಳೆದಿದೆ. ಇದ್ರ ಜೊತೆಯಲ್ಲೇ ರಾಜರ್ಷಿತಾ ಸುರ್, ಬ್ರಿಟನ್ (Britain), ಟರ್ಕಿ (Turkey), ಆಗ್ನೇಯ ಏಷ್ಯಾ (South East Asia) ಮತ್ತು 70 ಪ್ರತಿಶತದಷ್ಟು ಯುರೋಪ್ (Europe) ದೇಶಗಳನ್ನು ಸುತ್ತಿ ಬಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನೇಪಾಳ ಸುತ್ತಿ ಬಂದಿರುವ ರಾಜರ್ಷಿತಾ ಸುರ್, ಕೀನ್ಯಾ ಹಾಗೂ ಐಲ್ಯಾಂಡ್ ಗೆ ಹೋಗುವ ಪ್ಲಾನ್ ನಲ್ಲಿದ್ದಾರೆ. ಪ್ರತಿ ವರ್ಷ ವಿದೇಶ ಸುತ್ತಾಡಲು ಕಡಿಮೆ ಎಂದ್ರೂ 10 ಲಕ್ಷ ರೂಪಾಯಿ ಪ್ರತ್ಯೇಕವಾಗಿ ತೆಗೆದಿಡ್ತಾರೆ ರಾಜರ್ಷಿತಾ ಸುರ್. ಷೇರು ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಶೇಕಡಾ 3- 4ರಷ್ಟು ಲಾಭಗಳಿಸುವ ಪ್ಲಾನ್ ಮಾಡ್ತಾರಂತೆ ರಾಜರ್ಷಿತಾ ಸುರ್. ಗುರಿ ಪೂರ್ತಿಯಾಗ್ತಿದ್ದಂತೆ ಟ್ರೇಡಿಂಗ್ ನಿಲ್ಲಿಸುವ ರಾಜರ್ಷಿತಾ ವಾಕ್ ಗೆ ಹೋಗ್ತಾರಂತೆ.
ಅಂಬಾನಿ ಫ್ಯಾಮಿಲಿಯ ಭಾವಿ ಸೊಸೆ Radhika Merchant ಯಾರಿದು ?
ಜೂಜಾಟಕ್ಕಿಂತ ಕಡಿಮೆಯೇನಿಲ್ಲ ಷೇರು ಮಾರುಕಟ್ಟೆ : ರಾಜರ್ಷಿತಾ ಸುರ್ ಇನ್ಸ್ಟಾಗ್ರಾಮ್ ನಲ್ಲಿ ನೀವು ಅನೇಕ ಫೋಟೋಗಳನ್ನು ನೋಡಬಹುದು. ವಿದೇಶ ಸುತ್ತಿದ ಅನೇಕ ಫೋಟೋಗಳನ್ನು ಅವರು ಅಪ್ಲೋಡ್ ಮಾಡ್ತಿರುತ್ತಾರೆ. ಅದ್ರಲ್ಲಿ ಷೇರುಮಾರುಕಟ್ಟೆ ಬಗ್ಗೆಯೂ ಹೇಳಿದ್ದಾರೆ. ಷೇರು ಮಾರುಕಟ್ಟೆ ಜೂಜಾಟಕ್ಕಿಂತ ಕಡಿಮೆಯೇನಿಲ್ಲ. ಹೆಚ್ಚಿನ ಹಣ ಗಳಿಸುವ ಆಸೆಯಲ್ಲಿ ಜನರು ಎಲ್ಲ ಹಣ ಕಳೆದುಕೊಳ್ತಾರೆ. ಹೆಚ್ಚಿನ ಹಣ ಗಳಿಸುವ ಆಸೆಯಲ್ಲಿ ನಾನೂ ಎಫ್ ಆಂಡ್ ಒ (Future & Options) ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದೆ. ಈಗ ತಪ್ಪಿನ ಅರಿವಾಗಿದೆ. ನಾನೀಗ ದೀರ್ಘಾವಧಿಯ ಹೂಡಿಕೆ ಮೇಲೆ ಹೆಚ್ಚು ಹೂಡಿಕೆ ಮಾಡ್ತೇನೆ ಎನ್ನುತ್ತಾರೆ ರಾಜರ್ಷಿತಾ ಸುರ್.