* ಸ್ವಾವಲಂಬಿ ಬದುಕು ಕಟ್ಟಿಕೊಂಡ ಶೋಭಾ ಹರಿಕಾಂತ
* ಮಾಂಸಾಹಾರದ ಉಪ್ಪಿನಕಾಯಿಗೆ ವಿದೇಶದಲ್ಲಿ ಭಾರೀ ಬೇಡಿಕೆ
* ವರ್ಷಕ್ಕೆ 60 ಕೆಜಿ ರಫ್ತು
ರಾಘು ಕಾಕರಮಠ
ಅಂಕೋಲಾ(ಜೂ.07): ನೀವು ಮಾವಿನಕಾಯಿ, ನಿಂಬೆಕಾಯಿ, ಕಂಚಿಕಾಯಿ ಉಪ್ಪಿನಕಾಯಿ ಸಿಗಡಿ ಮೀನಿನ (ಶೆಟ್ಲಿ) ಉಪ್ಪಿನಕಾಯಿ ಸೇರಿದೆ. ವಿಭಿನ್ನ ರುಚಿಯ ಇದು ಇಂದು ದೇಶ ವ್ಯಾಪ್ತಿ ಮೀರಿ ವಿಶ್ವಾದ್ಯಂತ ತನ್ನ ಸ್ವಾದವನ್ನು ಹಬ್ಬಿಸಿದೆ.
ಮಾಂಸಾಹಾರವಾದ ಸಿಗಡಿ ಉಪ್ಪಿನಕಾಯಿಯ ಸ್ವಾದವು ಸಹ ಜನರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿದ್ದು, ಇದೀಗ ಇಂಗ್ಲೆಂಡ್ ವಾಸಿಗಳಿಗೂ ಇಷ್ಟದ ಖಾದ್ಯವೆನಿಸಿದೆ.
undefined
ಈ ಸಿಗಡಿ ಉಪ್ಪಿನಕಾಯಿಯನ್ನು ಇಲ್ಲಿನ ಶೋಭಾ ಹರಿಕಾಂತ ಎಂಬುವರು ಕಳೆದ 7-8 ವರ್ಷಗಳಿಂದ ಸಿದ್ಧಪಡಿಸುತ್ತಿದ್ದಾರೆ. ಅನೇಕ ಜನರು ಸಿಗಡಿ ಉಪ್ಪಿನಕಾಯಿಯ ರುಚಿ ಸವಿದು, ಆರ್ಡರ್ ನೀಡಿ ಪಾರ್ಸೆಲ್ ಒಯ್ಯುತ್ತಾರೆ. ಸಿಗಡಿ ಉಪ್ಪಿನಕಾಯಿಯನ್ನು ಆರು ತಿಂಗಳ ಕಾಲ ಫ್ರಿಜ್ ಇಲ್ಲದೇ ಇಡಬಹುದು. ಬಾಟಲ್ ಒಳಗೆ ಗಾಳಿ ಹೋಗದಂತೆ ಮುಚ್ಚಳ ಹಾಕಿರಬೇಕು.
EPF Vs NPS: ನಿವೃತ್ತಿ ನಂತರದ ಬದುಕಿಗೆ ಯಾವುದು ಬೆಸ್ಟ್? ಇಪಿಎಫ್ ಅಥವಾ ಎನ್ ಪಿಎಸ್?
ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನ ಹೈಟೆಕ್ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ, ಉಕ ಜಿಲ್ಲೆಯವರೇ ಆದ ಚೈತ್ರಾ ಕುವಾಳೇಕರ ಅಲ್ಲಿಯ ಜನರಿಗೆ ಸಿಗಡಿ ಉಪ್ಪಿನಕಾಯಿ ಪರಿಚಯಿಸಿದ್ದರು. ಅದು ಈಗ ಅಲ್ಲಿಯ ಜನರಿಗೆ ಬಹು ಇಷ್ಟವಾದ ಖಾದ್ಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಿಗಡಿ ಉಪ್ಪಿನ ಕಾಯಿಗೆ ಮನಸೋತ ಲಂಡನ್ ವಾಸಿಗಳು ಚೈತ್ರಾ ಅವರಿಂದ ತರಿಸಿಕೊಂಡು ಸವಿಯುತ್ತಿದ್ದಾರೆ.
ಶೋಭಾ ಅವರು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ್, ಸ್ನೇಹಕುಂಜ ಸಂಸ್ಥೆಯ ಮೂಲಕ ನೀಡಿದ ತರಬೇತಿ ಪಡೆದುಕೊಂಡಿದ್ದರು. ಸ್ವಉದ್ಯೋಗವನ್ನು ಮಾಡಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿರುವ ಶೋಭಾ, ಸಿಗಡಿ ಉಪ್ಪಿನಕಾಯಿಯ ಮೂಲಕ ದೇಶದ ಗಮನ ಸೆಳೆಯುವಂತಾಗಿದ್ದಾರೆ.
ವರ್ಷಕ್ಕೆ 60 ಕೆಜಿ ರಫ್ತು:
ಕಳೆದ ಎರಡು ವರ್ಷಗಳಿಂದ ಈ ಖಾದ್ಯವನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. ಕೆಜಿಯೊಂದಕ್ಕೆ .1000ದಿಂದ .1500ವರೆಗೆ ದರ ನಿಗದಿಪಡಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗಡಿಯ ದರ ಆಗಾಗ ಏರಿಳಿತ ಕಂಡುಬಂದಾಗ ದರದಲ್ಲೂ ವ್ಯತ್ಯಾಸ ಕಂಡುಬರುತ್ತದೆ. 2021ರಲ್ಲಿ 60 ಕೆಜಿ ಸಿಗಡಿ ಉಪ್ಪಿನಕಾಯಿ ರಫ್ತು ಮಾಡಲಾಗಿದ್ದು, ಪ್ರಸಕ್ತ ವರ್ಷ 2022ರ ಮೇ ತಿಂಗಳ ಕೊನೆಯವರೆಗೆ 30 ಕೆಜಿ ಖಾದ್ಯ ರಫ್ತು ಮಾಡಲಾಗಿದೆ. ವಿದೇಶದಿಂದ ಇನ್ನೂ ಹಲವು ಆರ್ಡರ್‌ಗಳು ಬರುತ್ತಿದ್ದು, ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎನ್ನುತ್ತಾರೆ ಶೋಭಾ ಹರಿಕಾಂತ.
Petrol - Diesel Price Today: ಯಾವೆಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ? ಇಲ್ಲಿದೆ ವಿವರ
ನಾನು ಬಿ.ಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುವ ಕಾಲೇಜು ದಿನಗಳಲ್ಲಿಯೇ ಸಿಗಡಿ ಉಪ್ಪಿನಕಾಯಿ ಇಷ್ಟಪಡುತ್ತಿದ್ದೆ. ಲಂಡನ್‌ನಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಾಗ ಊಟಕ್ಕೆಂದು ಇಲ್ಲಿನ ಸಿಗಡಿ ಉಪ್ಪಿನಕಾಯಿ ಒಯ್ದಿದ್ದೆ. ಇದರ ಸವಿಯನ್ನು ಪರದೇಶಿ ಜನ ಸವಿದಿದ್ದರು. ಈ ಉಪ್ಪಿನಕಾಯಿಗೆ ವಿದೇಶಿಗರು ಮನಸೋತಿದ್ದಾರೆ. ಉಪ್ಪಿನಕಾಯಿ ತರಿಸಿಕೊಡುವಂತೆ ದುಂಬಾಲು ಬೀಳುತ್ತಾರೆ ಅಂತ ಲಂಡನ್‌ನ ಹೈಟೆಕ್ ಆಸ್ಪತ್ರೆಯ ಶುಶ್ರೂಷಕಿ ಚೈತ್ರಾ ಕುವಾಳೇಕರ ತಿಳಿಸಿದ್ದಾರೆ.
ಸ್ಥಳೀಯ ಖಾದ್ಯವಿಂದು ವಿದೇಶ ಮಟ್ಟದಲ್ಲಿ ಪರಿಚಯಗೊಂಡಿರುವುದು ಖುಷಿ ತಂದಿದೆ. ಸಿಗಡಿ ಹಾಗೂ ಅದಕ್ಕೆ ಬಳಸುವ ಸಾಮಗ್ರಿಗಳ ದರವೂ ದುಬಾರಿಯಾಗಿದೆ. ಆದರೂ ಉಪ್ಪಿನಕಾಯಿಯ ತಯಾರಿಕೆಯನ್ನು ಕೈ ಬಿಟ್ಟಿಲ್ಲ ಅಂತ ಸಿಗಡಿ ಉಪ್ಪಿನಕಾಯಿ ಉತ್ಪಾದಕಿ ಶೋಭಾ ಹರಿಕಾಂತ ಹೇಳಿದ್ದಾರೆ.