ಡಿಜಿಟಲೀಕರಣಕ್ಕೆ ಟಿಸಿಎಸ್ ಮಾಡಿದ ಯೋಜನೆ ಸಕ್ಸಸ್| ಯುವ ಸಮುದಾಯಕ್ಕೆ ಉದ್ಯೋಗದ ಬಾಗಿಲು ತೆರೆದ ಟಿಸಿಎಸ್| ಡಿಜಿಟಲೀಕರಣಕ್ಕೆ ಬೇಕಾದ ತಾಂತ್ರಿಕ ನೈಪುಣ್ಯತೆಯುಳ್ಳ ಯುವ ಸಮುದಾಯಕ್ಕೆ ಉದ್ಯೋಗಾವಕಾಶ| ಸುಮಾರು 30 ಸಾವಿರ ಯುವಕರಿಗೆ ಉದ್ಯೋಗಾವಕಾಶ ಒದಗಿಸಿದ ಟಿಸಿಎಸ್| ಉದ್ಯೋಗಾವಕಾಶದ ಜೊತೆಗೆ ಡಿಜಿಟಲೀಕರಣಕ್ಕೂ ಮುಂದಾದ ಟಿಸಿಎಸ್|
ಬೆಂಗಳೂರು(ಅ.15): ಡಿಜಿಟಲೀಕರಣ ಇಂದಿನ ಆಧುನಿಕ ಯುಗಕ್ಕೆ ಬೇಕಾಗಿರುವ ಅನಿವಾರ್ಯ ಸಾಧನ. ಡಿಜಿಟಲೀಕರಣದಿಂದಾಗುವ ಲಾಭಗಳ ಪಟ್ಟಿ ಅತ್ಯಂತ ದೊಡ್ಡದಿದೆ. ಮಾನವ ಶ್ರಮವನ್ನು ಕಡಿಮೆ ಮಾಡುವ ಡಿಜಿಟಲೀಕರಣಕ್ಕೆ ಇಂದಿನ ಬಹುತೇಕ ಕಂಪನಿಗಳು ಮಾರು ಹೋಗಿವೆ.
ಅದರಂತೆ ದೇಶದ ಪ್ರಮುಖ ಖಾಸಗಿ ಕಂಪನಿಯಾದ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್(ಟಿಸಿಎಸ್) ಕೂಡ ಡಿಜಿಟಲೀಕರಣದತ್ತ ಧೃಢ ಹೆಜ್ಜೆ ಇರಿಸಿದ್ದು, ತನ್ನ ದೈನಂದಿನ ವ್ಯವಹಾರಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ.
undefined
ಇದೇ ಕಾರಣಕ್ಕೆ ಆಧುನಿಕ ತಂತ್ರಜ್ಞಾನದ ಅರಿವಿರುವ ಯುವ ಪೀಳಿಗೆಗೆ ಉದ್ಯೋಗಾವಕಾಶದ ಬಾಗಿಲು ತೆರೆದಿರುವ ಟಿಸಿಎಸ್, ಹೆಚ್ಚು ಸಂಖ್ಯೆಯಲ್ಲಿ ಯುವ ಸಮುದಾಯಕ್ಕೆ ಉದ್ಯೋಗ ನೀಡಿದೆ.
ಸುಮಾರು 30 ಸಾವಿರ ಯುವಕರಿಗೆ ಉದ್ಯೋಗ ಒದಗಿಸಿರುವ ಟಿಸಿಎಸ್, ಈ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ತೆರೆಯುವ ಜೊತೆಗೆ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ.
ದೇಶದ ಅತ್ಯಂತ ದೊಡ್ಡ ಸಾಫ್ಟವೇರ್ ಸೇವೆ ಒದಗಿಸುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಿಸಿಎಸ್, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜೊತೆ ಜೊತೆಗೆ ಡಿಜಿಟಲೀಕರಣಕ್ಕೂ ಮುಂದಾಗಿರುವುದು ನವಪೀಳಿಗೆಯ ಸಂತಸಕ್ಕೆ ಕಾರಣವಾಗಿದೆ.