Bank Strike:ಜೂ.27ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ;ನೌಕರರ ಬೇಡಿಕೆಗಳೇನು?

Published : Jun 10, 2022, 12:48 PM IST
Bank Strike:ಜೂ.27ರಂದು ಬ್ಯಾಂಕ್  ಮುಷ್ಕರಕ್ಕೆ ಕರೆ;ನೌಕರರ ಬೇಡಿಕೆಗಳೇನು?

ಸಾರಾಂಶ

*ವಾರಕ್ಕೆ 5 ದಿನ ಕೆಲಸ, ಪಿಂಚಣಿ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹ *ಮುಷ್ಕರಕ್ಕೆ ಕರೆ ನೀಡಿರುವ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್  *ದೇಶಾದ್ಯಂತ 7 ಲಕ್ಷ ಬ್ಯಾಂಕ್ ಕಾರ್ಮಿಕರು ಈ ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ

ನವದೆಹಲಿ (ಜೂ.10): ಪಿಂಚಣಿ (Pension) ಸಮಸ್ಯೆಗಳ ಇತ್ಯರ್ಥ ಹಾಗೂ ವಾರಕ್ಕೆ 5 ದಿನಗಳ ಕೆಲಸದ ಬೇಡಿಕೆ (Demand) ಈಡೇರಿಕೆಗೆ ಆಗ್ರಹಿಸಿ ಜೂ.27ರಂದು ಮುಷ್ಕರ (Strike) ನಡೆಸೋದಾಗಿ ಸಾರ್ವಜನಿಕ ವಲಯದ (Private Sector) ಬ್ಯಾಂಕ್ ಗಳ ನೌಕರರು (Banks employees) ಎಚ್ಚರಿಕೆ ನೀಡಿದ್ದಾರೆ.  ಒಂಭತ್ತು ಬ್ಯಾಂಕ್ ಸಂಘಟನೆಗಳ ಒಕ್ಕೂಟವಾದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ (UFBU) ಮುಷ್ಕರಕ್ಕೆ (Strike) ಕರೆ ನೀಡಿದೆ.

ಯುಎಫ್‌ಬಿಯು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ  (AIBOC),ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (AIBEA) ಮತ್ತು ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಸಂಸ್ಥೆ (NOBW) ಸೇರಿದಂತೆ ಒಂಭತ್ತು ಬ್ಯಾಂಕ್ ಸಂಘಟನೆಗಳನ್ನು ಒಳಗೊಂಡಿದೆ.ಮುಷ್ಕರದ  (Strike) ಬಗ್ಗೆ ಸುದ್ದಿಸಂಸ್ಥೆ ಪಿಟಿಐಗೆ (PTI)  ಮಾಹಿತಿ ನೀಡಿದ ಎಐಬಿಒಸಿ (AIBOC) ಪ್ರಧಾನ ಕಾರ್ಯದರ್ಶಿ ಸೌಮನ್ಯ ದತ್ತಾ,' ಸಂಘಟನೆಗಳ ಬೇಡಿಕೆಗಳಿಗೆ ಸರ್ಕಾರ ಹಾಗೂ ಬ್ಯಾಂಕುಗಳ ಆಡಳಿತ ಮಂಡಳಿ ಸ್ಪಂದಿಸದಿದ್ದರೆ ದೇಶಾದ್ಯಂತ 7 ಲಕ್ಷ ಕಾರ್ಮಿಕರು ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ' ಎಂದಿದ್ದಾರೆ. 

CIBIL Score:ಏನಿದು ಸಿಬಿಲ್ ಸ್ಕೋರ್? ಸಾಲ ಪಡೆಯಲು ಎಷ್ಟು ಸಿಬಿಲ್ ಸ್ಕೋರ್ ಬೇಕು? ಇಲ್ಲಿದೆ ಮಾಹಿತಿ

ನೌಕರರ ಬೇಡಿಕೆಗಳೇನು? 
ಎಲ್ಲ ಪಿಂಚಣಿದಾರರಿಗೆ (Pensioners) ಪಿಂಚಣಿ (Pension) ನವೀಕರಿಸೋದು ಹಾಗೂ ಪರಿಷ್ಕರಿಸೋದು. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ತೆಗೆದು ಹಾಕಿ, ಎಲ್ಲ ಬ್ಯಾಂಕ್ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸೋದು ನಮ್ಮ ಬೇಡಿಕೆಯಾಗಿದೆ ಎಂದು ಯುಎಫ್ ಬಿಯು ಸಭೆಯ ಬಳಿಕ ಎಐಬಿಇಎಯ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ತಿಳಿಸಿದ್ದಾರೆ. 

ಬ್ಯಾಂಕುಗಳಲ್ಲಿ ವಾರದಲ್ಲಿ 5 ದಿನಗಳ ಕೆಲಸದ ವ್ಯವಸ್ಥೆ ಅನುಷ್ಠಾನಕ್ಕೆ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ (UFBU) ದೀರ್ಘ ಸಮಯದಿಂದ ಬೇಡಿಕೆಯಿಡುತ್ತ ಬಂದಿದೆ.  ಈ ಸಂಘಟನೆಗಳ ಪ್ರಕಾರ ಬ್ಯಾಂಕುಗಳು ವಾರದಲ್ಲಿ 5 ದಿನಗಳು ಮಾತ್ರ ಕಾರ್ಯನಿರ್ವಹಿಸಬೇಕು. ಈ ರೀತಿ ವಾರದಲ್ಲಿ 5 ದಿನಗಳ ಕೆಲಸದ ನೀತಿ ಖಾಸಗಿ ವಲಯದ ಬಹುತೇಕ ದೊಡ್ಡ ಕಂಪೆನಿಗಳಲ್ಲಿ ಜಾರಿಯಲಿದೆ.

ಸತತ ಮೂರು ದಿನ ಬ್ಯಾಂಕ್ ಬಂದ್
ಒಂದು ವೇಳೆ ಬ್ಯಾಂಕ್ ನೌಕರರು ಜೂ.27ರಂದು ಮುಷ್ಕರ ನಡೆಸಿದರೆ ಸತತ 3 ದಿನಗಳ ಕಾಲ ಬ್ಯಾಂಕ್ ಮುಚ್ಚಿರಲಿದೆ. ಜೂ.25 ನಾಲ್ಕನೇ ಶನಿವಾರ ಹಾಗೂ ಜೂ.26 ಭಾನುವಾರವಾದ ಕಾರಣ ಬ್ಯಾಂಕುಗಳಿಗೆ ರಜೆಯಿರುತ್ತದೆ. ಇದರಿಂದ ಬ್ಯಾಂಕ್  ಗ್ರಾಹಕರಿಗೆ ತೊಂದರೆಯುಂಟಾಗುವ ಸಾಧ್ಯತೆಯಿದೆ. 
ಇನ್ನು ಬ್ಯಾಂಕು ನೌಕರರಿಗೆ ಎರಡನೇ ಹಾಗೂ ನಾಲ್ಕನೇ ಶನಿವಾರ ಈಗಾಗಲೇ ರಜೆಯಿದೆ. ಇನ್ನು ಉಳಿದ ಶನಿವಾರಗಳಂದು ಅರ್ಧದಿನವಷ್ಟೇ ಬ್ಯಾಂಕ್ ತೆರೆದಿರುತ್ತದೆ. ಈ ಎರಡು ಶನಿವಾರ ಕೂಡ ರಜೆ ನೀಡಬೇಕು ಎಂಬುದು ಬ್ಯಾಂಕ್ ನೌಕರರ ಬೇಡಿಕೆಯಾಗಿದೆ.

License Cancel:ಮುಧೋಳ ಸಹಕಾರಿ ಬ್ಯಾಂಕ್ ಲಿಮಿಟೆಡ್ ಪರವಾನಗಿ ರದ್ದುಗೊಳಿಸಿದ RBI;ಕಾರಣವೇನು?

ಜೂನ್ ನಲ್ಲಿ 8 ದಿನ ರಜೆ
ಭಾರತೀಯ ರಿಸರ್ವ್ ಬ್ಯಾಂಕ್ (RBI)  ಬಿಡುಗಡೆ ಮಾಡಿರುವ ರಜಾ ದಿನಗಳ ಪಟ್ಟಿ ಅನ್ವಯ ಜೂನ್ ನಲ್ಲಿ (June) 8 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. ಇದರಲ್ಲಿ ವಾರದ ರಜೆಗಳನ್ನು ಹೊರತುಪಡಿಸಿ ಕೇವಲ 2 ದಿನಗಳಷ್ಟೇ ಬ್ಯಾಂಕುಗಳು (Banks) ಮುಚ್ಚಿರುತ್ತವೆ.  ಅಂದ ಹಾಗೇ ಎಲ್ಲ ಹಬ್ಬಗಳಿಗೆ ನೀಡುವ ರಜೆಗಳು ಎಲ್ಲ ರಾಜ್ಯಗಳು ಅಥವಾ ಪ್ರದೇಶಗಳಲ್ಲಿರುವ ಬ್ಯಾಂಕುಗಳಿಗೆ ಅನ್ವಯಿಸೋದಿಲ್ಲ. ಆಯಾ ರಾಜ್ಯ ಅಥವಾ ಪ್ರದೇಶಕ್ಕೆ ಸಂಬಂಧಿಸಿದ ಹಬ್ಬ (Festival) ಹಾಗೂ ಆಚರಣೆಗಳನ್ನು (Celebratons) ಪರಿಗಣಿಸಿ ರಜೆ ನೀಡಲಾಗುತ್ತದೆ. ಸಾರ್ವಜನಿಕ (Pulic) ಹಾಗೂ ಗೆಜೆಟೆಡ್ ರಜೆಗಳು (Gazetted holidays) ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ