ಕಾಮಿಡಿ ಸರ್ಕಸ್ ಬಿಡಿ: ಮೋದಿ ನಕ್ಕರಾ ಅಕ್ಕ-ತಮ್ಮಂದಿರ ವಾಗ್ದಾಳಿ ನೋಡಿ?

By Web DeskFirst Published Oct 19, 2019, 8:20 PM IST
Highlights

ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಅಕ್ಕ-ತಮ್ಮ| ಆರ್ಥಿಕ ಹಿಂಜರಿಕೆಗೆ ಮೋದಿ ಮೇಲೆ ಹರಿಹಾಯ್ದ ಪ್ರಿಯಾಂಕಾ, ರಾಹುಲ್| ಕಾಮಿಡಿ ಸರ್ಕಸ್ ಬಿಟ್ಟು ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಳ್ಳಿ ಎಂದ ಪ್ರಿಯಾಂಕಾ| 'ಸರ್ಕಾರದ ಕೆಲಸ ಆರ್ಥಿಕ ಸ್ಥಿತಿ ಸುಧಾರಿಸುವುದೇ ಹೊರತು ಕಾಮಿಡಿ ಸರ್ಕಾಸ್ ನಡೆಸುವುದಲ್ಲ'| ಪ್ರಧಾನಿ ಮೋದಿ ಅವರಿಗೆ ಆರ್ಥಿಕತೆ ಗೊತ್ತಿಲ್ಲ ಎಂದ ರಾಹುಲ್ ಗಾಂಧಿ|

ನವದೆಹಲಿ(ಅ.19): ಅರ್ಥಶಾಸ್ತ್ರ ನೊಬೆಲ್ ಪುರಸ್ಕೃತ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಟೀಕಿಸಿದ್ದೇ ತಡ, ವಿಪಕ್ಷಗಳು ಪ್ರದಾನಿ ಮೋದಿ ವಿರುದ್ಧ ತಿರುಗಿ ಬಿದ್ದಿವೆ.

ಇಟ್ಸ್ ಸಿಂಗ್ VS ಸೀತಾರಾಮನ್: ಶತಮಾನದ ಟ್ರೆಂಡಿಂಗ್ ಟಾಕ್ ವಾರ್!

ಸರ್ಕಾರ ಕಾಮಿಡಿ ಸರ್ಕಸ್ ನಡೆಸುವುದನ್ನು ಬಿಟ್ಟು ತಕ್ಷಣವೇ ಕುಸಿಯುತ್ತಿರುವ ಆರ್ಥಿಕತೆಯನ್ನು ಸುಧಾರಿಸುವ ಕ್ರಮದ ಕುರಿತು ಯೋಚಿಸಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ಅನ್ಕೊಂಡಿದ್ದೆಲ್ಲಾ ಉಲ್ಟಾ ಆಯ್ತು: ಮೋದಿ ಪ್ಲ್ಯಾನ್ ಚೇಂಜ್ ಮಾಡ್ಬೇಕಾಯ್ತು!

ಅಭಿಜಿತ್ ಬ್ಯಾನರ್ಜಿ ಅವರನ್ನು ಟೀಕಿಸುತ್ತ ಕೇಂದ್ರ ಸರ್ಕಾರ ಕಾಮಿಡಿ ಸರ್ಕಸ್ ನಡೆಸುತ್ತಿದ್ದು, ಇದರ ಬದಲು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳುವತ್ತ ಮುಮದಡಿ ಇಡುವುದು ಒಳ್ಳೆಯದು ಎಂದು ಪ್ರಿಯಾಂಕಾ ಹರಿಹಾಯ್ದಿದ್ದಾರೆ.

ಕಹಿ ಸತ್ಯ ಕೇಳುವ ಮನೋಭಾವ ಇರಲಿ: ಸ್ವಾಮಿ ಹೇಳಿಕೆಗೆ ಮೋದಿ ತಲೆ ಕೆದರಿಕೊಳ್ಳದಿರಲಿ!

ಹಳಿ ತಪ್ಪಿರುಚ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಕೇಂದ್ರ ಸರ್ಕಾರದ ಕೆಲಸವೇ ಹೊರತು, ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಮೂಲಕ ಕಾಮಿಡಿ ಸರ್ಕಸ್ ನಡೆಸುವುದಲ್ಲ ಎಂದು ಪ್ರಿಯಾಂಕಾ ಮೋದಿ ಸರ್ಕಾರದ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಮಗೆ ಮೂರ್ಖ ಸಿದ್ಧಾಂತ ಬೇಕಿಲ್ಲ: ರಾಹುಲ್ ಗುಡುಗು ಕೇಳ್ಸಿಲ್ವಾ?

ಮೋದಿಗೆ ಎಕನಾಮಿಕ್ಸ್ ಗೊತ್ತಿಲ್ಲ ಎಂದ ರಾಹುಲ್:

ಇನ್ನು ಮೋದಿ ಸರ್ಕಾರದ ವಿರುದ್ಧ ತಮ್ಮ ಎಂದಿನ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರಿಗೆ ಆರ್ಥಿಕತೆ ಕುರಿತು ಎಳ್ಳಷ್ಟೂ ಜ್ಞಾನವಿಲ್ಲ ಎಂದು ಹರಿಹಾಯ್ದಿದ್ದಾರೆ.

ಆರ್ಥಿಕ ಹಿಂಜರಿತ ತಡೆಯಲು ಮನಮೋಹನ್‌ ಸಿಂಗ್ 5 ಸೂತ್ರ!

ಹರಿಯಾದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಆರ್ಥಿಕತೆ ಕುರಿತು ಜ್ಞಾನ ಇಲ್ಲದವರು ಅಧಿಕಾರದಲ್ಲಿರುವುದರಿಂದ ದೇಶ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಪ್ರಣಾಳಿಕೆ ಕದ್ದೊಯ್ಯಿರಿ: ಪ್ರಧಾನಿ ಮೋದಿಗೆ ರಾಹುಲ್ ಆಮಂತ್ರಣ!

ಅಪನಗದೀಕರಣದಿಂದ ಪ್ರಾರಂಭವಾದ ಆರ್ಥಿಕ ವಿನಾಶ ಇಂದಿಗೂ ಮುಂದುವರೆದಿದ್ದು, ಇದನ್ನು ಸರಿದಾರಿಗೆ ತರುವ ಬದಲು ಮೋದಿ ಸರ್ಕಾರ ವಿಪಕ್ಷಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಾ ಕಾಲ ಕಳೆಯುತ್ತಿದೆ ಎಂದು ರಾಹುಲ್ ಕಿಡಿಕಾರಿದರು.

click me!