ಕೇವಲ 399 ರೂ.ಗೆ ಅಂಚೆ ಇಲಾಖೆಯ ಅಪಘಾತ ವಿಮೆ; ಸಿಗಲಿದೆ 10 ಲಕ್ಷ ರೂ. ಕವರೇಜ್!

Published : Oct 17, 2022, 05:59 PM IST
ಕೇವಲ 399 ರೂ.ಗೆ ಅಂಚೆ ಇಲಾಖೆಯ ಅಪಘಾತ ವಿಮೆ; ಸಿಗಲಿದೆ 10 ಲಕ್ಷ ರೂ. ಕವರೇಜ್!

ಸಾರಾಂಶ

ಅಂಚೆ ಇಲಾಖೆ 10ಕ್ಷ ರೂ. ಕವರೇಜ್ ಹೊಂದಿರುವ ಅಪಘಾತ ವಿಮೆಯನ್ನು ಪರಿಚಯಿಸಿದೆ. ಈ ವಿಮಾ ಯೋಜನೆಗೆ ವಾರ್ಷಿಕ ಕೇವಲ 399ರೂ. ಹಾಗೂ  299ರೂ. ಪ್ರೀಮಿಯಂ ಮೊತ್ತ ನಿಗದಿಪಡಿಸಲಾಗಿದೆ. ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತೀ ಕಡಿಮೆ ಮೊತ್ತಕ್ಕೆ ಅಪಘಾತ ವಿಮೆ ಪಡೆಯುವ ಅವಕಾಶ ಕಲ್ಪಿಸಿದೆ.    

ನವದೆಹಲಿ (ಅ.17): ಅಂಚೆ ಇಲಾಖೆ ಯಾವುದೇ ಹೊಸ ಯೋಜನೆ ಪರಿಚಯಿಸಿದ್ರೂ ಅದಕ್ಕೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗೋದು ಸಾಮಾನ್ಯ. ಅಂತೆಯೇ ಇತ್ತೀಚೆಗೆ ಅಂಚೆ ಇಲಾಖೆ ತನ್ನ ಗ್ರಾಹಕರ ಸುರಕ್ಷತೆಗಾಗಿ ಅತೀ ಕಡಿಮೆ ಹಣಕ್ಕೆ ದೊಡ್ಡ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ. ಅಂಚೆ ಇಲಾಖೆಯ ಅಂಗಸಂಸ್ಥೆ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ಅಪಘಾತ ವಿಮಾ ಪಾಲಿಸಿಯನ್ನು ಕೇವಲ  399ರೂ. ಹಾಗೂ  299ರೂ.ಗೆ ಪರಿಚಯಿಸಿದೆ. ಈ ಯೋಜನೆಗೆ ಸೇರ್ಪಡೆಗೊಂಡರೆ 10ಲಕ್ಷ ರೂ. ಅಪಘಾತ ವಿಮೆ ಪಡೆಯಲು ನೀವು ಅರ್ಹತೆ ಗಳಿಸುತ್ತೀರಿ. ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ (ಐಪಿಪಿಬಿ) ಗ್ರಾಹಕರಿಗೆ ಈ ಅಪಘಾತ ವಿಮಾ ಯೋಜನೆಯ ಪ್ರೀಮಿಯಂ ಪ್ಲ್ಯಾನ್ ವಾರ್ಷಿಕ 399ರೂ.ಗೆ ಹಾಗೂ ಮೂಲ ಯೋಜನೆ ವಾರ್ಷಿಕ 299ರೂ.ಗೆ ಲಭ್ಯವಿದೆ. ಅಂಚೆ ಇಲಾಖೆಯ ಈ ವಿಮಾ ಯೋಜನೆಯ ಫಲಾನುಭವಿಗಳು ಆಕಸ್ಮಿಕವಾಗಿ ಅಪಘಾತದಲ್ಲಿ ಸಾವನ್ನಪ್ಪಿದ್ರೆ ಅಥವಾ ಅಂಗವೈಕಲ್ಯಕ್ಕೆ ತುತ್ತಾದ್ರೆ ಅಥವಾ ಸೂಚಿಇತರ ಅವಘಡಗಳಿಗೆ ತುತ್ತಾದ್ರೆ ಅವರಿಗೆ ಆರ್ಥಿಕ ನೆರವು ಸಿಗಲಿದೆ. ಬದುಕಿನಲ್ಲಿ ಯಾವಾಗ ಏನು ಸಂಭವಿಸುತ್ತದೆ ಎಂದು ಅಂದಾಜಿಸಲು ಸಾಧ್ಯವಿಲ್ಲ. ಅಪಘಾತಗಳು ಕೂಡ ಹಾಗೆಯೇ. ಹೀಗಾಗಿ ಅಪಘಾತಗಳನ್ನು ನಮ್ಮ ಯೋಚನೆಗೆ ನಿಲುಕದೇ ಇರಬಹುದು. ಆದರೆ, ಅಪಘಾತ ವಿಮೆಗಳನ್ನು ಪ್ಲ್ಯಾನ್ ಮಾಡಬಹುದು ಅಲ್ಲವೆ? ಹೀಗಾಗಿ ನೀವು ಇನ್ನೂ ಅಪಘಾತ ವಿಮೆ ಮಾಡಿಸಿಲ್ಲವೆಂದ್ರೆ ಆದಷ್ಟು ಬೇಗ ಅಂಚೆ ಇಲಾಖೆಯ ಈ ಅಪಘಾತ ವಿಮೆ ಮಾಡಿಸುವ ಬಗ್ಗೆ ಯೋಚಿಸಿ.

ಯಾರು ಅರ್ಹರು?
ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಈ ಎರಡು ವಿಮಾ ಯೋಜನೆಗಳ ಪ್ರಯೋಜನ ಪಡೆಯಬಹುದು. ಆದರೆ, ಈ ವಿಮೆ ಮಾಡಿಸುವ ಗ್ರಾಹಕರ ವಯಸ್ಸು  18-65 ವರ್ಷಗಳ ನಡುವೆ ಇರಬೇಕು.

PM - KISAN ಯೋಜನೆ: ರೈತರ ಬ್ಯಾಂಕ್‌ ಖಾತೆಗೆ 16 ಸಾವಿರ ಕೋಟಿ ರೂ. ವರ್ಗಾಯಿಸಿದ ಪ್ರಧಾನಿ Modi

ಅಪಘಾತ ವಿಮೆ ಮಾಡಿಸೋದು ಹೇಗೆ?
ಈಗಾಗಲೇ ಐಪಿಪಿಬಿಯಲ್ಲಿ ನೀವು ಖಾತೆ ಹೊಂದಿದ್ರೆ 299ರೂ.ಅಥವಾ 399ರೂ. ಪಾವತಿಸಿ ಅಪಘಾತ ವಿಮೆ ಮಾಡಿಸಬಹುದು. ಒಂದು ವೇಳೆ ನೀವು ಇನ್ನೂ ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರದಿದ್ರೆ 100ರೂ. ಪಾವತಿಸಿ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ಖಾತೆ ತೆರೆಯಿರಿ. ಐಪಿಪಿಬಿಯಲ್ಲಿ ಖಾತೆ ತೆರೆಯಲು ಆಧಾರ್ ಮತ್ತು ಪ್ಯಾನ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು. ಆ ಬಳಿಕ ಖಾತೆಯಲ್ಲಿ ಕನಿಷ್ಠ 500 ರೂ. ಹಣ ಇಡಬೇಕು. ಆ ಬಳಿಕ  299ರೂ.ಅಥವಾ 399ರೂ. ಪಾವತಿಸಿ ಅಪಘಾತ ವಿಮೆ ಮಾಡಿಸಬಹುದು.

399ರೂ. ಪ್ರೀಮಿಯಂ ವಿಮಾ ಯೋಜನೆ
399ರೂ. ಪ್ರೀಮಿಯಂ ಪ್ಲ್ಯಾನ್ ಅಡಿಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ರೆ ಅಥವಾ ಸಂಪೂರ್ಣವಾಗಿ ಅಂಗವೈಕಲ್ಯ ಹೊಂದಿದ್ರೆ, ಪಾರ್ಶ್ವವಾಯುಗೆ ತುತ್ತಾದರೆ 10ಲಕ್ಷ ರೂ. ಅಪಘಾತ ವಿಮೆ ಒದಗಿಸಲಾಗುತ್ತದೆ. ಇನ್ನು ಐಪಿಡಿಯಲ್ಲಿ 60,000ರೂ. ತನಕ ವೈದ್ಯಕೀಯ ವೆಚ್ಚ ಗಳನ್ನು ಕ್ಲೈಮ್ ಮಾಡಬಹುದು. ಹಾಗೆಯೇ ಒಪಿಡಿಯಲ್ಲಿ 30,000ರೂ. ಅಪಘಾತ ವೈದ್ಯಕೀಯ ವೆಚ್ಚಗಳನ್ನು ಕ್ಲೈಮ್ ಮಾಡಬಹುದು. ಒಂದು ವೇಳೆ ಆಸ್ಪತ್ರೆಗೆ ದಾಖಲಾಗಿದ್ರೆ 10 ದಿನಗಳ ಕಾಲ ದಿನಕ್ಕೆ 1000ರೂ. ಪಾವತಿಸಲಾಗುತ್ತದೆ. ಮೃತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಗುವಿಗೆ ರೂ.1 ಲಕ್ಷ ವರೆಗೆ ಸಹಾಯ ಧನ ನೀಡಲಾಗುತ್ತದೆ. ವಾಹನ ಅಪಘಾತಗಳು, ಹಾವು ಕಡಿತ, ವಿದ್ಯುತ್ ಆಘಾತ. ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ರೆ 10ಲಕ್ಷ ರೂ. ವಿಮಾ ಪರಿಹಾರ ಪಡೆಯಲು ಅವಕಾಶವಿದೆ. 

ದೀಪಾವಳಿಗೆ ಚಿನ್ನ ಖರೀದಿಸುತ್ತಿದ್ದೀರಾ? ಹಾಗಾದ್ರೆ ಈ 5 ವಿಷಯಗಳನ್ನು ನೆನಪಿಡಿ

299ರೂ. ಬೇಸಿಕ್ ವಿಮಾ ಯೋಜನೆ
299ರೂ. ಬೇಸಿಕ್ ವಿಮಾ ಯೋಜನೆಯಲ್ಲಿ ಅಪಘಾತದಲ್ಲಿ ಮರಣ ಹೊಂದಿದ್ರೆ ಅಥವಾ ಕಾಯಂ ಅಂಗವೈಕಲ್ಯ, ಕಾಯಂ ಭಾಗಶಃ ಅಂಗವೈಕಲ್ಯ ಹಾಗೂ ಪಾರ್ಶ್ವವಾಯು ಉಂಟಾದ್ರೆ 10ಲಕ್ಷ ರೂ. ವಿಮಾ ಕವರೇಜ್ ಪಡೆಯಬಹುದು. ಆದರೆ, ಈ ಪಾಲಿಸಿಯಲ್ಲಿ  399ರೂ. ಪ್ರೀಮಿಯಂ ಪ್ಲ್ಯಾನ್ ಅಡಿಯಲ್ಲಿ ದೊರಕುವ ಶೈಕ್ಷಣಿಕ ಪ್ರಯೋಜನ, ಆಸ್ಪತ್ರೆ ನಿತ್ಯದ ನಗದು, ಕುಟುಂಬ ಪ್ರಯಾಣ ಪ್ರಯೋಜನಗಳು ಹಾಗೂ ಅಂತಿಮ ವಿಧಿ ವಿಧಾನಗಳ ಪ್ರಯೋಜನಗಳು ಲಭಿಸೋದಿಲ್ಲ. ಆದರೆ, 299ರೂ. ಪ್ಲ್ಯಾನ್ ನಲ್ಲಿ ಐಪಿಡಿಯಲ್ಲಿ 60,000ರೂ. ತನಕ ವೈದ್ಯಕೀಯ ವೆಚ್ಚ ಗಳನ್ನು ಕ್ಲೈಮ್ ಮಾಡಬಹುದು. ಹಾಗೆಯೇ ಒಪಿಡಿಯಲ್ಲಿ 30,000ರೂ. ಅಪಘಾತ ವೈದ್ಯಕೀಯ ವೆಚ್ಚಗಳನ್ನು ಕ್ಲೈಮ್ ಮಾಡಲು ಅವಕಾಶ ನೀಡಲಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌