Bank Scams ಬಿಜೆಪಿ ನಾಯಕ ಸ್ವಾಮಿ ಅರ್ಜಿಗೆ ಕಂಗಾಲಾದ ಕೇಂದ್ರ ಸರ್ಕಾರ, ಸುಪ್ರೀಂ ನೋಟಿಸ್!

By Suvarna NewsFirst Published Oct 17, 2022, 4:00 PM IST
Highlights

ಬಿಜೆಪಿ ನಾಯಕ, ಖ್ಯಾತ ವಕೀಲ ಸುಬ್ರಮಣಿಯನ್ ಸ್ವಾಮಿ ಹಲವು ಬಾರಿ ಪ್ರಧಾನಿ ಮೋದಿ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದ್ದಾರೆ. ಇದೀಗ ಸುಪ್ರೀಂ ಕೋರ್ಟ್‌ಗೆ ಸ್ವಾಮಿ ಸಲ್ಲಿಸಿದ ಅರ್ಜಿಯಿಂದ ಕೇಂದ್ರ ಸರ್ಕಾರ ಕಂಗಾಲಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಸಿಬಿಐ ಹಾಗೂ ರಿಸರ್ವ್ ಬ್ಯಾಂಕ್‌ಗೆ ನೋಟಿಸ್ ಜಾರಿ ಮಾಡಿದೆ.

ನವದೆಹಲಿ(ಅ.17): ಖ್ಯಾತ ವಕೀಲ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ನೇರ ನುಡಿಗಳಿಂದಲೇ ಜನಪ್ರಿಯ. ಹಲವು ಬಾರಿ ಸುಬ್ರಮಣಿಯನ್ ಸ್ವಾಮಿ ಮಾತುಗಳು, ನಡೆಗಳು ವಿಪಕ್ಷಗಳಿಗಿಂತ ಹೆಚ್ಚು ಬಿಜೆಪಿಯನ್ನೇ ಕಂಗೆಡಿಸಿದೆ. ಇದೀಗ ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಿಂದ ಕೇಂದ್ರ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸಾಲು ಸಾಲು ಹಗರಣ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗ  ಪಾತ್ರದ ಕುರಿತು ತನಿಖೆ ನಡೆಸುವಂತೆ ಕೋರಿ ಸುಬ್ರಮಣಿ ಸ್ವಾಮಿ ಹಾಗೂ ವಕೀಲ ಸಬರ್ವಾಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದೀಗ ಕೇಂದ್ರ ತನಿಖಾ ದಳ(ಸಿಬಿಐ) ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ನೋಟೀಸ್ ಜಾರಿ ಮಾಡಿದೆ. ಬ್ಯಾಂಕಿಂಗ್ ಹಗರಣಗಳ ಕುರಿತು ಪ್ರತಿಕ್ರಿಯೆ ಕೇಳಿದೆ.

ಜಸ್ಟೀಸ್ ಬಿಆರ್ ಗವಾಯಿ ಹಾಗೂ ಜಸ್ಟೀಸ್ ಬಿವಿ ನಾಗರತ್ನ ಒಳಗೊಂಡ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು. ಸ್ವಾಮಿ ಹಾಗೂ ಸಬರ್ವಾಲ್ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಈ ಕುರಿತು ಸಿಬಿಐ ಹಾಗೂ ಆರ್‌ಬಿಐಗೆ ನೋಟಿಸ್ ಜಾರಿ ಮಾಡಿದೆ. ಅರ್ಜಿಯ ಗಂಭೀರತೆ ಅರಿತ ಸುಪ್ರೀಂ ಕೋರ್ಟ್ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ.

Swamy meets Didi: ಮಮತಾ ಭೇಟಿಯಾಗಿ ಮೋದಿ ಸರಕಾರವನ್ನು ತೆಗಳಿದ ಬಿಜೆಪಿ ನಾಯಕ

ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಗರಣಗಳ ಸಂಖ್ಯೆ ಹಾಗೂ ಮೊತ್ತವೂ ಹೆಚ್ಚಾಗುತ್ತಿದೆ. ಆರ್‌ಬಿಐ ಹಾಗೂ ಅದಕ್ಕೆ ಸಂಬಂಧ ಪಟ್ಟ ಎಜೆನ್ಸಿಗಳಿಂದ ಪತ್ತೆಯಾದ ಪ್ರತಿ ಹಗರಣಗಳು ಸಾವಿರ ಸಾವಿರ ಕೋಟಿಯಾಗಿದೆ. ಇದರಿಂದ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಸಾರ್ವಜನಿಕ ವಲಯದ ನಂಬಿಕೆ ದೂರವಾಗುತ್ತಿದೆ.  ಹೂಡಿಕೆದಾರರು, ಠೇವಣಿದಾರರು, ಷೇರುದಾರರ ಆಸಕ್ತಿ, ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳಲು ಆರ್‌ಬಿಐ ಹಾಗೂ ಬ್ಯಾಂಕ್ ವಿಫಲವಾಗುತ್ತಿದೆ ಎಂದು ಸ್ವಾಮಿ ಅರ್ಜಿಯಲ್ಲಿ ಹೇಳಿದ್ದಾರೆ. 

ಇಷ್ಟು ಮೊತ್ತವನ್ನು ಹೇಗೆ ಸಾಲ ನೀಡಲಾಗಿದೆ. ಯಾವುದೇ ಲೋನ್ ಪಾವತಿ ಇಲ್ಲದೆಯೂ ಅದರ ಮೇಲೆ ಮತ್ತೊಂದು ಸಾಲವನ್ನು ನೀಡಲಾಗಿದೆ. ಹೀಗಾಗಿ ಈ ಎಲ್ಲಾ ಬೆಳವಣಿಗೆಯಲ್ಲಿ ಅಧಿಕಾರಿಗಳ ಪಾತ್ರದ ಮೇಲೆ ಅನುಮಾನ ಮೂಡಿದೆ. ಈ ಕುರಿತು ಸಮಗ್ರ ತನಿಖೆಯ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯಲ್ಲಿ ಸಂಬಂಧಪಟ್ಟ ಹಲವು ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ವಿಜಯ್ ಮಲ್ಯ ಅವರ ಕಿಂಗ್‌ಫಿಶನ್ ಹಗರಣ, ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ, ಬ್ಯಾಂಕ್ ಆಫ್ ಮಹಾರಾಷ್ಟ್ರ ಹಗರಣ, ಯುಪಿ ಸಕ್ಕರೆ ಸಂಸ್ಥೆ ಹಗರಣ, ಲಕ್ಷ್ಮಿ ವಿಲಾಸ್ ಬ್ಯಾಂಕ್ ಹಗರಣ ಸೇರಿದಂತೆ ಹಲವು ಹಗರಣಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅಧಿಕಾರಕ್ಕಾಗಿ ಯಾರ ಬೂಟು ನೆಕ್ಕುವ ಕೆಲಸ ಮಾಡಲಿಲ್ಲ... ಬೊಮ್ಮಾಯಿಗೆ ಸ್ವಾಮಿ ಠಕ್ಕರ್!

ಕೇಂದ್ರ ಸರ್ಕಾರದ ಕೆಲವು ನೀತಿಗಳಿಗೆ ವಿರೋಧ
ಕೇಂದ್ರ ಸರ್ಕಾರದ ಕೆಲವು ನೀತಿಗಳ ಬಗ್ಗೆ ಮಾತ್ರ ನನ್ನ ವಿರೋಧವಿದೆ. ಪ್ರಧಾನಿ ಮೋದಿಯವರು ತಮ್ಮ ನೀತಿ ಸರಿಪಡಿಸಿಕೊಂಡರೆ ನನಗೆ ಯಾವುದೇ ಆಕ್ಷೇಪ ಇರುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣಿಯನ್‌ ಸ್ವಾಮಿ ಇತ್ತೀಚೆಗೆ ಹೇಳಿದ್ದರು. ಬಿಜೆಪಿಯನ್ನು ಪ್ರಜಾಪ್ರಭುತ್ವದ ಆಶಯದಂತೆ ಬಹಿರಂಗವಾಗಿ ಟೀಕಿಸುತ್ತೇನೆ ಎಂದಿದ್ದರು.

click me!