Pension Scheme:ದಿನಕ್ಕೆ ಕೇವಲ 2ರೂ. ಹೂಡಿಕೆ ಮಾಡಿದ್ರೆ 36 ಸಾವಿರ ಲಾಭ; ಹೇಗೆ? ಯಾವ ಯೋಜನೆ? ಇಲ್ಲಿದೆ ಮಾಹಿತಿ

By Suvarna News  |  First Published Jun 20, 2022, 8:46 PM IST

ನೀವು 18ನೇ ವಯಸ್ಸಿನಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಯಲ್ಲಿ ದಿನಕ್ಕೆ 2ರೂ. ಉಳಿತಾಯ ಮಾಡಲು ಪ್ರಾರಂಭಿಸಿದರೆ, 60ನೇ ವಯಸ್ಸಿಗೆ ನಿವೃತ್ತಿಯಾಗುವಾಗ ವಾರ್ಷಿಕ 36,000ರೂ. ಪಿಂಚಣಿ ಗಳಿಸುತ್ತೀರಿ. ಈ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು? ಯಾವೆಲ್ಲ ದಾಖಲೆಗಳು ಅಗತ್ಯ? ಇಲ್ಲಿದೆ ಮಾಹಿತಿ. 


ನವದೆಹಲಿ (ಜೂ.20): ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಕೂಡ ಈಗ ವೃದ್ಧಾಪ್ಯದಲ್ಲಿ ಪಿಂಚಣಿ ಸಿಗುವಂತಹ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 18 ವರ್ಷ ವಯಸ್ಸಿನಲ್ಲಿ ದಿನಕ್ಕೆ ಕೇವಲ 2ರೂ. ಹೂಡಿಕೆ ಮಾಡಿದ್ರೆ ಸಾಕು ನಿವೃತ್ತಿಯಾಗುವಾಗ ವಾರ್ಷಿಕ 36,000ರೂ. ಪಿಂಚಣಿ ಗಳಿಸಬಹುದು. ಹೌದು, ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿಗೆ ತಮ್ಮ ನಿವೃತ್ತಿ ಬದುಕಿಗೆ ಯೋಜನೆ ರೂಪಿಸಲು ನೆರವು ನೀಡುತ್ತದೆ. ಹಾಗಾದ್ರೆ ಈ ಯೋಜನೆಯಲ್ಲಿ ಹೂಡಿಕೆ ಮಾಡೋದು ಹೇಗೆ? ಯಾವೆಲ್ಲ ದಾಖಲೆಗಳು ಅಗತ್ಯ? ಇಲ್ಲಿದೆ ಮಾಹಿತಿ.

ಯಾರಿಗೆ ಈ ಯೋಜನೆ?
ಬೀದಿಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಪಿಎಂ ಶ್ರಮ ಯೋಗಿ ಮನ್ ಧನ್ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಯಡಿಯಲ್ಲಿ ಸರ್ಕಾರ ಇವರಿಗೆ ಪಿಂಚಣಿ ನೀಡುತ್ತದೆ. ಸರ್ಕಾರದ ಇತರ ಯಾವುದೇ ಯೋಜನೆ ಫಲಾನುಭವಿಯಲ್ಲದ ಯಾವುದೇ ಅಸಂಘಟಿತ ವಲಯದ 40 ವರ್ಷದೊಳಗಿನ ಕಾರ್ಮಿಕರು ಈ ಯೋಜನೆ ಪ್ರಯೋಜನ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಮಾಸಿಕ 15,000ರೂ.ಗಿಂತ ಕಡಿಮೆ ವೇತನ ಹೊಂದಿರಬೇಕು. 

Tap to resize

Latest Videos

Edible Oil Price:ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ಇಳಿಕೆ; ಲೀಟರ್ ಗೆ 10ರೂ. ತಗ್ಗಿಸಿದ ಅದಾನಿ ವಿಲ್ಮರ್

ತಿಂಗಳಿಗೆ 55ರೂ. ಕಟ್ಟಬೇಕು
ಈ ಯೋಜನೆಯಲ್ಲಿ ನೀವು ತಿಂಗಳಿಗೆ 55ರೂ. ಠೇವಣಿಯಿಡಬೇಕು. ಉದಾಹರಣೆಗೆ ನೀವು 18ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ದಿನಕ್ಕೆ ಸುಮಾರು 2ರೂ. ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿವೃತ್ತಿ ಬಳಿಕ ವಾರ್ಷಿಕ 36,000 ರೂ. ಗಳಿಸಬಹುದು. ಒಂದು ವೇಳೆ ಒಬ್ಬ ವ್ಯಕ್ತಿ 40ನೇ ವಯಸ್ಸಿನಲ್ಲಿ ಈ ಯೋಜನೆ ಪ್ರಾರಂಭಿಸಿದರೆ ಆಗ ಮಾಸಿಕ 200ರೂ. ಠೇವಣಿ ಇಡಬೇಕಾಗುತ್ತದೆ. 60 ವರ್ಷದ ಬಳಿಕ ನೀವು ಪಿಂಚಣಿ ಪಡೆಯಲು ಆರ್ಹತೆ ಗಳಿಸುತ್ತೀರಿ. ತಿಂಗಳಿಗೆ 3000ರೂ. ಅಥವಾ ವಾರ್ಷಿಕ 36,000 ರೂ. ಮಾಸಿಕ ಪಿಂಚಣಿ ಗಳಿಸಬಹುದು.

ಯಾವೆಲ್ಲ ದಾಖಲೆಗಳು ಅಗತ್ಯ?
ಈ ಯೋಜನೆ ಪ್ರಾರಂಭಿಸಲು ನೀವು ಬ್ಯಾಂಕ್ ಉಳಿತಾಯ ಖಾತೆ ಹಾಗೂ ಆಧಾರ್ ಕಾರ್ಡ್ ಹೊಂದಿರೊದು ಕಡ್ಡಾಯ. ಇನ್ನು ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಠ ವಯೋಮತಿ 18 ವರ್ಷ ಹಾಗೂ ಗರಿಷ್ಠ ವಯೋಮತಿ 40 ವರ್ಷ. 

ನೋಂದಣಿ ಮಾಡೋದು ಎಲ್ಲಿ?
ಈ ಯೋಜನೆಯಲ್ಲಿ ನೋಂದಣಿ ಮಾಡಲು ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ತೆರಳಿ ನೋಂದಣಿ ಮಾಡಬಹುದು. ಇನ್ನು ಕಾರ್ಮಿಕರು  ಸಾಮಾನ್ಯ ಸೇವಾ ಕೇಂದ್ರದ ಸೈಟ್ ನಲ್ಲಿ ಖಾತೆ ತರೆಯಬಹುದು. ಈ ಯೋಜನೆಗಾಗಿ ಸರ್ಕಾರ ವೆಬ್ ಪೋರ್ಟಲ್ ಕೂಡ ರಚಿಸಿದೆ. ಈ ಸೌಲಭ್ಯಗಳ ಮೂಲಕ ಕಲೆ ಹಾಕಿದ ಎಲ್ಲ ಮಾಹಿತಿಗಳನ್ನು ಭಾರತ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. 

ಇತಿಹಾಸದ ಅತಿದೊಡ್ಡ ವಿಮಾನ ಒಪ್ಪಂದಕ್ಕೆ ಸಜ್ಜಾಗುತ್ತಿರುವ ಏರ್‌ಇಂಡಿಯಾ!

ಈ ಮಾಹಿತಿ ನೀಡಿ
ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಯಲ್ಲಿ ನೋಂದಣಿ ಮಾಡಿಸಲು ಆಧಾರ್ ಕಾರ್ಡ್, ಉಳಿತಾಯ ಅಥವಾ ಜನ್ ಧನ್ ಬ್ಯಾಂಕ್ ಖಾತೆ ಪಾಸ್ ಪುಸ್ತಕ ಹಾಗೂ ಮೊಬೈಲ್ ಸಂಖ್ಯೆ ಅಗತ್ಯ. ಇದರ ಹೊರತಾಗಿ ಬ್ಯಾಂಕ್ ಖಾತೆ ಹೊಂದಿರುವ ಬಗ್ಗೆ ಆ ಬ್ಯಾಂಕ್ ಶಾಖೆಯಿಂದ ಒಪ್ಪಿಗೆ ಪತ್ರ ಪಡೆದು ನೀಡಬೇಕು. ಬ್ಯಾಂಕ್ ಖಾತೆಯಿಂದ ಸಮಯಕ್ಕೆ ಸರಿಯಾಗಿ ಹಣ ಕಡಿತ ಮಾಡಲು ಈ ಪತ್ರ ಅವಶ್ಯಕ.

ಟೋಲ್ ಫ್ರೀ ಸಂಖ್ಯೆ
ಸರ್ಕಾರ ಕಾರ್ಮಿಕ ಇಲಾಖೆ, ಎಲ್ಐಸಿ ಹಾಗೂ ಇಪಿಎಫ್ಒ ಕಚೇರಿಗಳನ್ನು ಶ್ರಮಿಕ್ ಸೌಲಭ್ಯ ಕೇಂದ್ರಗಳನ್ನಾಗಿ ತೆರೆದಿದೆ. ಕಾರ್ಮಿಕರು ಈ ಯೋಜನೆ ಕುರಿತ ಹೆಚ್ಚಿನ ಮಾಹಿತಿಗಳನ್ನು ಈ ಯೋಜನೆಯ ಟೋಲ್ ಫ್ರೀ ಸಂಖ್ಯೆ 18002676888 ಕರೆ ಮಾಡಿ ಪಡೆಯಬಹುದು. 
 

click me!