
ನವದೆಹಲಿ (ಜೂ.20): ಬ್ಯಾಂಕಿಂಗ್ (Banking) ಹಾಗೂ ಹಣಕಾಸು ಸೇವಗಳನ್ನು (Financial services) ಒದಗಿಸಲು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಹಾಗೂ ಪ್ರಮುಖ ಮೆಸೇಜಿಂಗ್ ಪ್ಲ್ಯಾಟ್ ಫಾರ್ಮ್ ವಾಟ್ಸಾ ಪ್ (WhatsApp) ನಡುವೆ ಒಪ್ಪಂದ ಏರ್ಪಡಿಸಲು ಕೇಂದ್ರ ಸರ್ಕಾರ (Central Government) ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಡಿಜಿಟಲೀಕರಣದ (Digitalization) ಹಾದಿಯಲ್ಲಿ ಮುಂದೆ ಸಾಗಲು ಭವಿಷ್ಯದಲ್ಲಿ ಭಾರತೀಯ ಅಂಚೆ (Indian Post) ಹಾಗೂ ವಾಟ್ಸಾ ಪ್ ( ಜೊತೆಗೆ ಕೂಡ ಸರ್ಕಾರ ಒಪ್ಪಂದ ಏರ್ಪಡಿಸಲು ಸರ್ಕಾರ ಎದುರು ನೋಡುತ್ತಿದೆ ಎನ್ನಲಾಗಿದೆ. ಪ್ರತಿಯೊಬ್ಬರಿಗೂ ಉತ್ತಮ ಸೇವೆ ಲಭಿಸಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಕಲ್ಪಿಸುವ ಗುರಿಯೊಂದಿಗೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ವರದಿಗಳ ಪ್ರಕಾರ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಹಾಗೂ ವಾಟ್ಸಾ ಪ್ ನಡುವಿನ ಆರಂಭಿಕ ಒಪ್ಪಂದದಲ್ಲಿ ಗ್ರಾಹಕರಿಗೆ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡೋದು ಹಾಗೂ ಹೊಸ ಬ್ಯಾಂಕ್ ಖಾತೆ ತೆರೆಯುವ ಮನವಿ ಕಳುಹಿಸುವ ಆಯ್ಕೆಗಳನ್ನು ಒದಗಿಸಲಾಗುತ್ತದೆ. 2018ರಲ್ಲಿ ಪ್ರಾರಂಭವಾದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸಾರ್ವಜನಿಕ ವಲಯದ ಕಂಪನಿಯಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ ಶೇ.100ರಷ್ಟು ಷೇರುಗಳನ್ನು ಹೊಂದಿದೆ. ಅಂಚೆ ಇಲಾಖೆ ಅಡಿಯಲ್ಲಿ ಈ ಬ್ಯಾಂಕ್ ಕಾರ್ಯನಿರ್ವಹಿಸುತ್ತದೆ.
Edible Oil Price:ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ಇಳಿಕೆ; ಲೀಟರ್ ಗೆ 10ರೂ. ತಗ್ಗಿಸಿದ ಅದಾನಿ ವಿಲ್ಮರ್
ಈ ಪೈಲೆಟ್ ಯೋಜನೆಯಲ್ಲಿ ಮುಂದಿನ 60 ದಿನಗಳ ಕಾಲ ಐಪಿಪಿಬಿ ಸೇವೆಗಳಾದ ಬ್ಯಾಲೆನ್ಸ್ ಚೆಕ್, ಹೊಸ ಖಾತೆ ತೆರೆಯಲು ಮನವಿ, ಪಿನ್ ಹಾಗೂ ಪಾಸ್ ವರ್ಡ್ಸ್ ಬದಲಾವಣೆ ಸೇವೆಗಳನ್ನು ಒದಗಿಸಲಾಗುತ್ತದೆ. ಇನ್ನು ಆಯ್ದ ಕೆಲವು ಗ್ರಾಹಕರಿಗೆ ನಗದು ವಿತ್ ಡ್ರಾ ಹಾಗೂ ಠೇವಣಿ ಮನವಿ, ಆಧಾರ್ ನಿಂದ ಆಧಾರ್ ಗೆ ವರ್ಗಾವಣೆ, ಕಾಯಂ ಖಾತಾ ಸಂಖ್ಯೆ (PAN) ಹಾಗೂ ಆಧಾರ್ ಸಂಖ್ಯೆ ನವೀಕರಣ ಮತ್ತು ಫಲಾನುಭವಿಗಳ ಖಾತೆ ನಿರ್ವಹಣೆ ಸೇವೆಗಳನ್ನು ಒದಗಿಸಲಾಗುತ್ತದೆ.
ಈ ಸೇವೆಗಳನ್ನು ಒದಗಿಸುವಾಗ ಗ್ರಾಮೀಣ ಭಾಗದಲ್ಲಿ ಯಾವುದೇ ಸವಾಲುಗಳು ಎದುರಾಗಬಾರದು. ಅಲ್ಲದೆ, ವಿತ್ ಡ್ರಾನಲ್ಲಿ ವಂಚನೆ ತಡೆಯಲು ಇಂಥ ವ್ಯವಸ್ಥೆ ಅಗತ್ಯ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರು ಐಪಿಪಿಬಿ ವೆಬ್ ಸೈಟ್ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಆನ್ ಲೈನ್ ಸೇವೆಗಳನ್ನು ಪಡೆಯುತ್ತಿದ್ದಾರೆ.
ಓಡಾಟಕ್ಕೆ ಪ್ರೈವೇಟ್ ಜೆಟ್, ಮೋಜು-ಮಸ್ತಿಗೆ ಆಪ್ಸರೆಯರು! ಜೂಜಾಟದಿಂದಲೇ ಹಣದ ಹೊಳೆ ಹರಿಸಿದವನ ಕಥೆ ಇದು!
ವಾಟ್ಸಾಪ್ ಮೂಲಕ ಅಂಚೆ ಸೇವೆಗಳು
ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಅಂಚೆ ಸೇವೆಗಳನ್ನು ಒದಗಿಸಲು ಸರ್ಕಾರವು ವಾಟ್ಸಾಪ್ ಜೊತೆ ಕೈಜೋಡಿಸುವ ಸಾಧ್ಯತೆಯಿದೆ. ಒಂದು ವೇಳೆ ಇದನ್ನು ಅನುಷ್ಠಾನಗೊಳಿಸಿದ್ರೆ ಕೊರಿಯರ್ ಪ್ಯಾಕೇಜ್ ಗಳನ್ನು ಬುಕ್ ಮಾಡಲು, ವೇತನ, ಉಳಿತಾಯ ಹಾಗೂ ಚಾಲ್ತಿ ಖಾತೆಗಳನ್ನು ತೆರೆಯಲು ಅನುಕೂಲವಾಗಲಿದೆ. ಈ ಮೆಸೇಜಿಂಗ್ ಪ್ಲ್ಯಾಟ್ ಫಾರ್ಮ್ ಮೂಲಕ ಮುಂದಿನ ದಿನಗಳಲ್ಲಿ ವೇತನಗಳನ್ನು ಮನೆ ಬಾಗಿಲಿಗೆ ತಲುಪಿಸಲು ಕೂಡ ಸಾಧ್ಯವಾಗಲಿದೆ.
ಈ ಪೈಲೆಟ್ ಯೋಜನೆಗೆ ಗ್ರಾಹಕರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಗಮನಿಸಿ ಸರ್ಕಾರ ಮುಂದಿನ ದಿನಗಳಲ್ಲಿ ವಾಟ್ಸಾಪ್ ಮೂಲಕ ಪಿಪಿಎಫ್ ಪಾವತಿಗಳು, ಆರ್ ಡಿ ಮೇಲೆ ಸಾಲ ತೆಗೆಯೋದು ಹಾಗೂ ವಿಮೆ ಖರೀದಿಸಲು ನೆರವು ನೀಡಲಿದೆ.
ವಲಸೆ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು, ಕಡಿಮೆ ಆದಾಯದ ಕುಟುಂಬಗಳು, ಇತರೆ ಅಸಂಘಟಿತ ವಲಯದವರಿಗೆ ಸಣ್ಣ ಉಳಿತಾಯ ಖಾತೆ, ಹಣ ಪಾವತಿ ಮತ್ತು ವರ್ಗಾವಣೆ ಸೌಲಭ್ಯವನ್ನು ಸುಲಭವಾಗಿ ಒದಗಿಸುವುದೇ ಅಂಚೆ ಪೇಮೆಂಟ್ ಬ್ಯಾಂಕ್‌ನ ಧ್ಯೇಯವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.