ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರ ಏರಿಕೆ| ಚಳಿಗಾಲ ಮುಗಿದ ಬಳಿಕ ಪೆಟ್ರೋಲ್ ದರ ಇಳಿಕೆ: ಕೇಂದ್ರ
ವಾರಾಣಸಿ(ಫೆ.27): ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರ ಏರಿಕೆಯಿಂದ ಜನ ಸಾಮಾನ್ಯರು ಕಂಗೆಟ್ಟಿರುವ ಬೆನ್ನಲ್ಲೇ, ‘ಚಳಿಗಾಲ ಮುಗಿದ ಬಳಿಕ ಇಂಧನ ದರವು ಇಳಿಕೆಯಾಗಲಿದೆ’ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿದ್ದಾರೆ.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನ್ ಅವರು,‘ಅಂತಾರಾಷ್ಟ್ರೀಯ ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ದರ ಏರಿಕೆಯು ಭಾರತದ ಗ್ರಾಹಕರ ಮೇಲೂ ಕೆಟ್ಟಪರಿಣಾಮ ಬೀರಿದೆ. ಇದೊಂದು ಜಾಗತಿಕ ವಿಷಯವಾಗಿದ್ದು, ಚಳಿಗಾಲದಲ್ಲಿ ಏರಿಕೆ ಸಾಮಾನ್ಯ. ಚಳಿಗಾಲ ಮುಕ್ತಾಯದ ಬಳಿಕ ಇಂಧನ ಬೆಲೆಯಲ್ಲಿ ಸ್ವಲ್ಪ ಪ್ರಮಾಣದ ಇಳಿಕೆಯಾಗಲಿದೆ’ ಎಂದರು.
ಆದರೆ ಚಳಿಗಾಲಕ್ಕೂ ಇಂಧನ ಬೆಲೆ ಏರಿಕೆಗೂ ಇರುವ ಸಂಬಂಧದ ಬಗ್ಗೆ ಅವರು ತಿಳಿಸಲಿಲ್ಲ.