
ನವದೆಹಲಿ(ಫೆ.27): ಸೂಪರ್ಮ್ಯಾನ್ ಸೇರಿದಂತೆ ಜನಪ್ರಿಯ ನಾಯಕರನ್ನು ಹೋಲುವ ಗೊಂಬೆಗಳು ಮತ್ತು ಆಟಿಕೆಯ ಗನ್ಗಳನ್ನು ನಿರ್ಮಾಣ ಮಾಡುವ ಫಾಕ್ಸ್‌ಕಾನ್ ಎಂಬ ಕಂಪನಿ ಕರ್ನಾಟಕದ ಕೊಪ್ಪಳದಲ್ಲಿ ಸ್ಥಾಪನೆಯಾಗಲಿದೆ.
ತನ್ಮೂಲಕ ದೇಶದಲ್ಲಿ ಆರಂಭವಾಗುವ ಮೊದಲ ಫಾಕ್ಸ್‌ಕಾನ್ ಗೊಂಬೆಗಳ ಉತ್ಪಾದನೆ ಕ್ಲಸ್ಟರ್ ಆಗಿ ಹೊರಹೊಮ್ಮಲಿದೆ. ಗೊಂಬೆಗಳ ಉದ್ಯಮವು ಜಾಗತಿಕ 6.6 ಲಕ್ಷ ಕೋಟಿ ರು. ಮೌಲ್ಯದ ಮಾರುಕಟ್ಟೆಯಾಗಿದ್ದು, ಇದರಲ್ಲಿ ಭಾರತದ ಪಾಲು 12 ಸಾವಿರ ಕೋಟಿ ರು.ನಷ್ಟಿದೆ.
ಕೊಪ್ಪಳದಲ್ಲಿ ದೇಶದ ಮೊದಲ ಆಟಿಕೆ ಕ್ಲಸ್ಟರ್: ಹೂಡಿಕೆಗೆ ರಾಜ್ಯ ಸರ್ಕಾರ ಮುಕ್ತ ಆಹ್ವಾನ
ಈ ಪೈಕಿ ಭಾರತವು ಬಹುತೇಕ ಚೀನಾ ಸೇರಿದಂತೆ ಒಟ್ಟಾರೆ 8800 ಕೋಟಿ ರು. ಮೌಲ್ಯದ ಗೊಂಬೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕೊಪ್ಪಳದಲ್ಲಿ 400 ಎಕರೆ ಪ್ರದೇಶದಲ್ಲಿ ಆಕ್ವಸ್ ಪ್ರೈ.ಲಿ. ಗೊಂಬೆಗಳ ಉತ್ಪಾದಕ ಕ್ಲಸ್ಟರ್ ಅನ್ನು ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.