ಮತ್ತೆ ಪೆಟ್ರೋಲ್ ತುಟ್ಟಿ: ಮೋದಿ ಬಿಚ್ಚುತ್ತಿಲ್ಲ ತುಟಿ!

Published : Aug 28, 2018, 01:03 PM ISTUpdated : Sep 09, 2018, 10:13 PM IST
ಮತ್ತೆ ಪೆಟ್ರೋಲ್ ತುಟ್ಟಿ: ಮೋದಿ ಬಿಚ್ಚುತ್ತಿಲ್ಲ ತುಟಿ!

ಸಾರಾಂಶ

ಮತ್ತೆ ಗಗನಕ್ಕೇರಿದ ಪೆಟ್ರೋಲ್,ಡೀಸೆಲ್ ಬೆಲೆ! ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಪರಿಣಾಮ! ಇಂಧನ ಮೇಲಿನ ಆಮದು ಸುಂಕ ಇಳಿಕೆ ಒತ್ತಾಯ! ತೆರಿಗೆ ಕಡಿತಗೊಳಿಸಲು ಕೇಂದ್ರ ಸರ್ಕಾರ ನಕಾರ  

ನವದೆಹಲಿ(ಆ. 28): ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಆಮದು ವೆಚ್ಚ ಹೆಚ್ಚಳವಾದ ಪರಿಣಾಮ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಗಗನಕ್ಕೇರಿದೆ. 

ಇದರ ನೇರ ಪರಿಣಾಮ ತೈಲ ದರದ ಮೇಲಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಚಿತ ಎನ್ನಲಾಗಿದೆ.  ಡೀಸೆಲ್ ದರ ಲೀಟರ್‌ಗೆ 69 ಮತ್ತು ಪೆಟ್ರೋಲ್ ಬೆಲೆ ಲೀಟರ್‌ಗೆ 78 ರೂ.ಗೆ ತಲುಪಿದೆ. ಡೀಸೆಲ್ ದರ ಸೋಮವಾರ ಲೀಟರ್‌ಗೆ ಏಕಾಏಕಿ 14 ಪೈಸೆ ಮತ್ತು ಪೆಟ್ರೋಲ್‌ಗೆ 13 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ಸತತ ಮೂರನೇ ದಿನವೂ ಬೆಲೆ ಏರಿಕೆಯಾದಂತಾಗಿದೆ. 

ಅಮೆರಿಕದ ಡಾಲರ್ ಎದುರು ರೂಪಾಯಿ ದರವು ಆಗಸ್ಟ್ 16ರಿಂದ ತೀವ್ರ ಕುಸಿತ ಕಂಡಿರುವುದರಿಂದ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ 12 ದಿನಗಳಲ್ಲಿ ಪೆಟ್ರೋಲ್ ದರ ದೆಹಲಿಯಲ್ಲಿ ಲೀಟರ್‌ಗೆ 77 ಪೈಸೆಯಷ್ಟು ದುಬಾರಿಯಾಗಿದೆ. ಡೀಸೆಲ್ ಬೆಲೆ 74 ಪೈಸೆಗಳಷ್ಟು ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 80.98, ಡೀಸೆಲ್ 72.46, ಚೆನ್ನೈನಲ್ಲಿ ಪೆಟ್ರೋಲ್ 81.09, ಡೀಸೆಲ್ 74.45ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 80.49 ರೂ. ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 71.73ರಷ್ಟಿದೆ.

ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಇಂಧನ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲು ಒತ್ತಾಯಿಸಲಾಗಿದೆ. ಆದರೆ ತಕ್ಷಣವೇ ತೆರಿಗೆ ಕಡಿತಗೊಳಿಸಲು ಸರ್ಕಾರ ನಿರಾಕರಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ
YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ