
ನವದೆಹಲಿ[ಆ.26] ಕರೆನ್ಸಿ ಮತ್ತು ಕ್ಯಾಪಿಟಲ್ ಬದಲಾವಣೆಯಲ್ಲಿ ಸರಳತೆ ತರಲು, ಏಕರೂಪತೆ ತರಲು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮುಂದಾಗಿದ್ದು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 70 ಕ್ಕೂ ಅಧಿಕ ಶಾಖೆಗಳನ್ನು ಬಂದ್ ಮಾಡಲು ಮುಂದಾಗಿವೆ.
ಒಂದೇ ನಗರದಲ್ಲಿ ಇರುವ ಒಂದೇ ಬ್ಯಾಂಕ್ ನ ಹಲವು ಶಾಖೆಗಳನ್ನು ಒಂದೇ ಶಾಖೆಯನ್ನಾಗಿ ಮಾಡಲಾಗುತ್ತದೆ. ಈ ಹಣಕಾಸು ವರ್ಷದಲ್ಲಿಯೇ 70 ಕ್ಕೂ ಅಧಿಕ ಶಾಖೆಗಳು ಬಾಗಿಲು ಹಾಕಿಕೊಳ್ಳಲಿವೆ.
ಕಳೆದ ವರ್ಷ ಇದೇ ಬಗೆಯಲ್ಲಿ 35 ಶಾಖೆ ಗಳನ್ನು ಬಂದ್ ಮಾಡಲಾಗಿತ್ತು. ವಿದೇಶಗಳಲ್ಲಿ ಭಾರತದ 159 ಶಾಖೆಗಳು ಕೆಲಸ ಮಾಡುತ್ತಿದ್ದು 2016-17 ರಲ್ಲಿ 41 ಶಾಖೆಗಳನ್ನು ಬಂದ್ ಮಾಡಲಾಗಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಸೆರಿದಂತೆ ವಿವಿಧ ಬ್ಯಾಂಕ್ ಗಳ ಶಾಖೆಗಳಿವೆ. ಯುಕೆಯಲ್ಲಿ 32, ಹಾಂಗ್ ಕಾಂಗ್ ನಲ್ಲಿ 13. ಸಿಂಗಪುರ್ ನಲ್ಲಿ 12 ಶಾಖೆಗಳಿವೆ. ಪ್ರದೇಶಕ್ಕೆ ಅನುಗುಣವಾಗಿ ಒಂದು ಶಾಖೆ ಸಾಕು ಎಂಬ ನಿಯಮಕ್ಕೆ ಬ್ಯಾಂಕ್ ಗಳು ಬಂದಂತೆ ಕಾಣುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.