
ನವದೆಹಲಿ[ಆ.26] ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವರದಿ ಪ್ರಕಟಿಸಿದ ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ವಿರುದ್ಧ 5,000 ಕೋಟಿ ರು. ಮೊಕದ್ದಮೆಯನ್ನು ಹೂಡಿರುವುದಾಗಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಕಮ್ಯುನಿಕೇಷನ್ ಸಂಸ್ಥೆ ತಿಳಿಸಿದೆ.
ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ನ ಪತ್ರಿಕೆಯ ವರದಿಯೊಂದು ಈ ಪ್ರಕರಣ ಮೂಲ ಧಾತು. ಪಬ್ಲಿಷರ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್, ಸಂಪಾದಕ ಝಾಫರ್ ಆಗಾ, ಲೇಖನ ಬರೆದ ವಿಶ್ವದೀಪಕ್ ವಿರುದ್ಧವೂ ಮೊಕದ್ದಮೆ ಹೂಡಲಾಗಿದೆ. ಕಾಂಗ್ರೆಸ್ ವಕ್ತಾರ ಶಕ್ತಿಸಿನ್ಹಾ ಗೋಹಿಲ್ ಅವರು ರಫೆಲ್ ಫೈಟರ್ ಜೆಟ್ ಮತ್ತು ಅನಿಲ್ ಅಂಬಾನಿ ವಿರುದ್ಧ ನಿರಂತರ ಆರೋಪ ಮಾಡಿದ್ದರು. ಇದು ಪತ್ರಿಕೆಯಲ್ಲಿ ಸುದ್ದಿಯೂ ಆಗಿತ್ತು.
ಅಣ್ಣ ಹೆಲ್ಪ್ ಮಾಡು: ಅನಿಲ್ ಕೂಗಿಗೆ ಮುಖೇಶ್ ದೌಡು!
ಸೆಪ್ಟೆಂಬರ್ 07ರೊಳಗೆ ಈ ಕುರಿತಂತೆ ಪ್ರತಿಕ್ರಿಯಿಸಿ, ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ಜಡ್ಜ್ ಪಿಜೆ ತಮಕುವಾಲಾ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಇದ್ದ ಸಮರಕ್ಕೆ ಇದೀಗ ಉದ್ಯಮಿಗಳ ಪ್ರವೇಶದಿಂದ ಮತ್ತಷ್ಟು ಜಟಿಲವಾಗುತ್ತಿರುವುದರಕ್ಕು ಅನುಮಾನ ಇಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.