6 ವರ್ಷ ಬಳಿಕ ಕಾಳುಮೆಣಸು ದರ ಭಾರೀ ಏರಿಕೆ : ರೈತರ ಹರ್ಷ

By Kannadaprabha NewsFirst Published Nov 15, 2021, 6:54 AM IST
Highlights
  • ಕಪ್ಪು ಬಂಗಾರ, ಆಪದ್ಭಾಂದವ ಬೆಳೆ ಎಂದೇ ಕರೆಸಿಕೊಳ್ಳುವ ಕಾಳುಮೆಣಸಿನ ದರ ಮತ್ತೆ ಏರಲಾರಂಭಿಸಿದೆ
  • ಆರು ವರ್ಷಗಳ ಹಿಂದೆ ದಾಖಲೆಯ ಬೆಲೆ ಕಂಡು ಬಳಿಕ ಕುಸಿತದ ಹಾದಿಯಲ್ಲಿದ್ದ ಕಾಳು ಮೆಣಸಿನ ದರ ಇದೀಗ ಏರಿಕೆಯ ಹಾದಿಯಲ್ಲಿ

 ಶಿರಸಿ (ನ.15):  ಕಪ್ಪು ಬಂಗಾರ (Black gold), ಆಪದ್ಭಾಂದವ ಬೆಳೆ ಎಂದೇ ಕರೆಸಿಕೊಳ್ಳುವ ಕಾಳು ಮೆಣಸಿನ (Pepper) ದರ (Price) ಮತ್ತೆ ಏರಲಾರಂಭಿಸಿದೆ. ಆರು ವರ್ಷಗಳ ಹಿಂದೆ ದಾಖಲೆಯ (record) ಬೆಲೆ ಕಂಡು ಬಳಿಕ ಕುಸಿತದ ಹಾದಿಯಲ್ಲಿದ್ದ ಕಾಳು ಮೆಣಸಿನ ದರ ಇದೀಗ ಏರಿಕೆಯ ಹಾದಿ ಹಿಡಿದಿದ್ದು, ಕ್ವಿಂಟಲ್‌ (quintal) ಕಾಳುಮೆಣಸಿನ ದರ ಅರ್ಧ ಲಕ್ಷ ದಾಟಿದೆ. ಜನವರಿಯಲ್ಲಿ (January) ಈ ದರ ಮತ್ತೆ ಏರಿಕೆಯಾಗುವ ನಿರೀಕ್ಷೆ ಇದೆ.

ಆರು ವರ್ಷದ ಹಿಂದೆ ಪ್ರತಿ ಕ್ವಿಂಟಲ್‌ ಕಾಳುಮೆಣಸಿಗೆ ದಾಖಲೆಯ 70 ಸಾವಿರ ದರ ಸಿಕ್ಕಿತ್ತು. ಇದರಿಂದಾಗಿ ವಿಯೆಟ್ನಾಂ, ಶ್ರೀಲಂಕಾದಿಂದ (Shrilanka) ಒಂದಿಷ್ಟು ಸಕ್ರಮವಾಗಿ, ಅಗಾಧ ಪ್ರಮಾಣದಲ್ಲಿ ಅಕ್ರಮವಾಗಿ ಕಾಳುಮೆಣಸು ಭಾರತ (India) ಪ್ರವೇಶಿಸಿದ ಹಿನ್ನೆಲೆಯಲ್ಲಿ ನಂತರ ಬೆಲೆ ಭಾರೀ ಇಳಿಕೆ ಕಂಡಿತ್ತು. ಕಳಪೆ ಗುಣಮಟ್ಟದ ವಿಯೆಟ್ನಾಂ ಕಾಳು ಮೆಣಸನ್ನು ಕೆಲವರು ‘ಭಾರತದ ಕಾಳು ಮೆಣಸು’ ಎಂದು ಯುರೋಪ್‌ (Urop) ದೇಶಗಳಿಗೆ ಕಳುಹಿಸಿ ಮಾರುಕಟ್ಟೆ ಕಳೆದುಕೊಂಡಿದ್ದೂ ಆಗಿತ್ತು. ಆ ಬಳಿಕ ಕೇಳುವವರೇ ಇಲ್ಲದಂತಾದ ನಮ್ಮ ಕಾಳು ಮೆಣಸಿನ ದರ ಪ್ರತಿ ಕ್ವಿಂಟಲ್‌ಗೆ 30-35 ಸಾವಿರ ತಲುಪಿತ್ತು 40 ಸಾವಿರ ತಲುಪಿದರೆ ಅದೇ ಜಾಸ್ತಿ ಎನ್ನುವಂತಿತ್ತು.

ಆದರೆ ಅಕ್ಟೋಬರ್‌ ತಿಂಗಳಿಂದ ಕಾಳು ಮೆಣಸಿನ ಮಾರುಕಟ್ಟೆನಿಧಾನವಾಗಿ ಚೇತರಿಕೆ ಕಂಡುಕೊಳ್ಳುತ್ತಿದ್ದು, ನಗರದ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಕಾಳುಮೆಣಸು ಸರಾಸರಿ 46 ಸಾವಿರದಿಂದ 48 ಸಾವಿರಕ್ಕೆ ಖರೀದಿಯಾಗುತ್ತಿದೆ. ಗರಿಷ್ಠ ಬೆಲೆ ಪ್ರತಿ ಕ್ವಿಂಟಲ್‌ಗೆ 50 ಸಾವಿರ ದಾಟಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಹೋಲಿಸಿದರೆ ಪ್ರತಿ ಕ್ವಿಂಟಲ್‌ಗೆ 10 ಸಾವಿರಕ್ಕೂ ಹೆಚ್ಚು ದರ ಈ ಬಾರಿ ಲಭಿಸುತ್ತಿದೆ.

ದಿನಾಂಕ;ಗರಿಷ್ಠ ದರ (ಪ್ರತಿ ಕ್ವಿಂಟಲ್‌ಗೆ)

ಅ. 25; . 50170

ಅ. 27; . 51869

ಅ. 28; . 51399

ಅ. 29; . 51499

ಅ. 30; . 51099

ನ. 2; . 50475

ನ. 8; .49689

ನ. 10; . 50699

ನ. 13: . 50399

ಕಾಳು ಮೆಣಸಿನಿಂದ ಲಾಭ ಜಾಸ್ತಿ :  ಸಾಂಬಾರು ಬೆಳೆಗಳಲ್ಲಿ ಪ್ರಮುಖ ಬೆಳೆಯಾಗಿರುವ ಕಾಳುಮೆಣಸು ಉತ್ತಮ ಲಾಭದಾಯಕ ಬೆಳೆಯಾಗಿದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಡಾ.ಗಿರೀಶ್‌ ಹೇಳಿದರು.

ತಾಲೂಕಿನ ನೆಮ್ಮಾರು ಪಂಚಾಯಿತಿ ಮಲ್ನಾಡ್‌ ಗ್ರಾಮದ ನಾಯಿನಾಡುವಿನಲ್ಲಿ ತಾಲೂಕು ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾಳುಮೆಣಸು ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಕಾಳುಮೆಣಸು ಬೆಳೆ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಕಾಳು ಮೆಣಸು ಬೆಳೆಗೆ ನೂರಾರು ವರ್ಷಗಳ ಹಿನ್ನೆಲೆಯಿದೆ. ಇದು ಯೂರೋಪಿಯನ್ನರ ಕಾಲದಿಂದಲೂ ಪ್ರಚಲಿತವಾಗಿದೆ. 15ನೇ ಶತಮಾನದಲ್ಲಿ ಭಾರತ ಸಾಂಬಾರು ಪದಾರ್ಥಗಳನ್ನು ವಿದೇಶಕ್ಕೆ ಯೂರೋಪಿಯನ್ನರು ಕೊಂಡೊಯ್ಯುತ್ತಿದ್ದರು. ಅವುಗಳಲ್ಲಿ ಕಾಳು ಮೆಣಸು ಇತ್ತು ಎಂದರು.

ಟೊಮೆಟೋಗೆ ಈಗ ಭಾರೀ ಬಂಪರ್ : ರೈತನಿಗೆ ಫುಲ್ ಖುಷ್ ...

ಕಾಳುಮೆಣಸು ಬೆಳೆಗೆ ಕೇವಲ ಭಾರತದ ಮಾರುಕಟ್ಟೆಯಲ್ಲ, ವಿದೇಶಿ ಮಾರುಕಟ್ಟೆಗಳಲ್ಲಿ ಕೂಡ ಉತ್ತಮ ಬೇಡಿಕೆ ಇದೆ. ಇದು ಬಹುಪಯೋಗಿ ವಸ್ತುವಾಗಿದ್ದು, ಕೇವಲ ಸಾಂಬಾರು ಅಲ್ಲದೇ ಔಷಧಿ ಗುಣವುಳ್ಳ ಪದಾರ್ಥವಾಗಿದೆ. ಕಡಿಮೆ ಬಂಡವಾಳ, ವೆಚ್ಚದಲ್ಲಿ ಹೆಚ್ಚಿನ ಲಾಭ, ಆದಾಯವನ್ನು ತಂದುಕೊಂಡುತ್ತದೆ. ಆರ್ಥಿಕವಾಗಿ ರೈತರಿಗೆ ಲಾಭ ನೀಡುವ ಬೆಳೆಯಾಗಿದೆ. ಮಲೆನಾಡು ಪ್ರದೇಶದ ವಾತಾವರಣಕ್ಕೆ ಕಾಳುಮೆಣಸು ಸೂಕ್ತ ಬೆಳೆಯಾಗಿದೆ. ಹವಾಮಾನಕ್ಕೆ ತಕ್ಕಂತೆ ಕಾಳುಮೆಣಸು ಬಳ್ಳಿಯ ನಾಟಿ, ಅಭಿವೃದ್ಧಿ, ಕಟಾವು ಮಾಡಬೇಕು. ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಕೀಟಬಾಧೆ, ರೋಗದಿಂದ ತಡೆಗಟ್ಟಲು ಔಷಧಿ ಸಿಂಪಡಣೆ ಮಾಡಬೇಕು. ಕೀಟ ಹಾಗೂ ರೋಗಗಳ ಕುರಿತು ಅಗತ್ಯ ಮಾಹಿತಿಯೊಂದಿಗೆ ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಸಹಕಾರಿ ಬ್ಯಾಂಕ್‌ ಉಪಾಧ್ಯಕ್ಷ ಎಚ್‌.ಕೆ. ದಿನೇಶ್‌ ಹೆಗ್ಡೆ ಮಾತನಾಡಿ, ರೈತರು ಕಾಳುಮೆಣಸು ಬೆಳೆಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು. ಈ ಭಾಗದಲ್ಲಿ ಅಡಕೆ ಹಳದಿ ಎಲೆರೋಗ ವ್ಯಾಪಿಸಿದೆ. ಇದರಿಂದ ಅಡಕೆ ಫಸಲು ನಾಶವಾಗುತ್ತಿದೆ. ರೈತರು ಪರ್ಯಾಯ ಬೆಳೆಯಾಗಿ ಕಾಳುಮೆಣಸು ಕೃಷಿಗೆ ಆದ್ಯತೆ ನೀಡಬೇಕು. ಕಾಳುಮೆಣಸು ಕೃಷಿಯಿಂದ ಹೆಚ್ಚಿನ ಲಾಭಗಳಿಸಬಹುದಾಗಿದೆ. ಹಾಗೇಯೇ ಉತ್ತಮ ಕೃಷಿ, ನಿರ್ವಹಣೆ ಮಾಡಬೇಕು. ಒಳನಾಡು ಪ್ರದೇಶವಾದ ನಾಯಿನಾಡು ಸೇರಿದಂತೆ ಹಲವು ಗ್ರಾಮಗಳ ಕೃಷಿಕರಿಗೆ ಸೂಕ್ತ ತರಬೇತಿ ನೀಡಬೇಕು ಎಂದರು.

ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ಶ್ರೀಕೃಷ್ಣ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಎಲ್ಲ ಸೌಲಭ್ಯ, ಮಾಹಿತಿಗಳನ್ನು ನೀಡಲಾಗುತ್ತಿದೆ. ತೆಂಗಿನಸಸಿ, ಗೊಬ್ಬರ, ತರಕಾರಿ ಬೀಜ ಸೇರಿದಂತೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲಾಗುತ್ತಿದೆ. ಹಾಗೆಯೇ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

click me!