ಆಧಾರ್ ಕಾರ್ಡ್ (Aadhaar card) ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಂಡು ನಿಮ್ಮ ಹೆಸರಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಇಲ್ಲವೇ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಲು ಸಾಧ್ಯವಿದೆ. ಹೀಗಾಗಿ ಆಧಾರ್ ಕಾರ್ಡ್ ಮಾಹಿತಿಗಳನ್ನು ಜೋಪಾನ ಮಾಡಲು ಮರೆಯಬೇಡಿ.
ಭಾರತದಲ್ಲಿ ಆಧಾರ್ ಕಾರ್ಡ್ (Aadhaar card) ಇಲ್ಲದೆ ಯಾವುದೇ ಸೌಲಭ್ಯ (Facility) ಪಡೆಯೋದು ಈಗ ಅಸಾಧ್ಯ. ಈ ಒಂದು ದಾಖಲೆ (Document) ಕೇವಲ ನಮ್ಮ ವೈಯಕ್ತಿಕ ಮಾಹಿತಿಗಳನ್ನು (Personal Informations) ಮಾತ್ರವಲ್ಲ, ಬೆರಳಚ್ಚು (Finger print), ಕಣ್ರೆಪ್ಪೆ (Eyelash) ಮೊದಲಾದ ಬಯೋಮೆಟ್ರಿಕ್(Biometric) ವಿವರಗಳನ್ನು (Informations) ಕೂಡ ಒಳಗೊಂಡಿರುತ್ತದೆ. ಹೀಗಾಗಿ ಬೇರೆ ಯಾರೋ ನಮ್ಮ ಆಧಾರ್ ಕಾರ್ಡ್ ದುರ್ಬಳಕೆ (misuse) ಮಾಡಿಕೊಳ್ಳೋದು ಅಥವಾ ವಂಚಿಸೋ (Fraud) ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಕೂಡ ಯೋಚಿಸಬೇಕಾಗುತ್ತದೆ. ಹಾಗಾದ್ರೆ ಆಧಾರ್ ಕಾರ್ಡ್ನಲ್ಲಿರೋ ಮಾಹಿತಿಗಳನ್ನು ಸಂರಕ್ಷಿಸೋದು ಹೇಗೆ?
Bond Markets: ಶ್ರೀಸಾಮಾನ್ಯರಿಗೆ ಬಾಂಡ್ ಮಾರುಕಟ್ಟೆಓಪನ್!
ವೆಬ್ಸೈಟ್ನಲ್ಲಿ ಪರಿಶೀಲಿಸಿ
ಆಧಾರ್ ಕಾರ್ಡ್ ವಿತರಿಸುತ್ತಿರೋ ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (UIDAI) ತನ್ನ ವೆಬ್ಸೈಟ್ನಲ್ಲಿ ಆಧಾರ್ ಕಾರ್ಡ್ ಹೊಂದಿರೋರಿಗೆ ತಮ್ಮ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ಕಲ್ಪಿಸಿದೆ. ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆ ಆಗಿದೆಯೋ ಇಲ್ಲವೋ ಎಂಬುದನ್ನು UIDAI ವೆಬ್ಸೈಟ್ನಲ್ಲಿ ಚೆಕ್ ಮಾಡ್ಬಹುದು.
ಹಂತ 1: UIDAIಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ಹಂತ 2: ಈ ವೆಬ್ಸೈಟ್ನಲ್ಲಿ ಆಧಾರ್ ಸೇವಾ (Service) ವಿಭಾಗ (Section) ಮೇಲೆ ಕ್ಲಿಕಿಸಿ.
ಹಂತ 3: ಆಧಾರ್ ದೃಢೀಕರಣ (authentication) history option ಆಯ್ಕೆ(Select) ಮಾಡಿ.
ಹಂತ 4: ಆಧಾರ್ ಸಂಖ್ಯೆ ಹಾಗೂ ಸುರಕ್ಷತಾ ಕೋಡ್ (Security code) ನಮೂದಿಸಿ.
ಹಂತ 5: ಒಟಿಪಿ (OTP) generate ಆಯ್ಕೆ ಕ್ಲಿಕಿಸಿ.
ಹಂತ 6: ನಿಮ್ಮ ಮೊಬೈಲ್ ಸಂಖ್ಯೆ ದೃಢೀಕರಣಕ್ಕೆ ಒಟಿಪಿ (OTP) ನಮೂದಿಸಿ (Enter).
ಹಂತ 7: ಈಗ ನಿಮಗೆ ಆಧಾರ್ ಕಾರ್ಡ್ ದೃಢೀಕರಣ ಮಾಹಿತಿ (authentication history) ಲಭಿಸುತ್ತದೆ. ಇದನ್ನು ಪರಿಶೀಲಿಸಿ. ಇದ್ರಲ್ಲಿ ಯಾವುದೇ ಮಾಹಿತಿ ತಪ್ಪಿರೋದು ಕಂಡುಬಂದ್ರೆ ತಕ್ಷಣ ಅದನ್ನು ಆಧಾರ್ ಕಾರ್ಡ್ ತಿದ್ದುಪಡಿಗೆ (update) ಬಳಸೋ ಸರಳ ಹಂತಗಳನ್ನು(Stages) ಬಳಸಿ ಸರಿಪಡಿಸಿ.
Cryptocurrency : ಇಸ್ಲಾಂನಲ್ಲಿ Bitcoin ವ್ಯವಹಾರ ನಿಷಿದ್ಧ?
ವಿಶೇಷ ಸೂಚನೆ: ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ಗೆ ಜೋಡಿಸಿದ್ರೆ (Link) ಮಾತ್ರ ಈ ಮೇಲೆ ವಿವರಿಸಿರೋ ವಿಧಾನ ಅನುಸರಿಸಲು ಸಾಧ್ಯ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ಗೆ ನಿಮ್ಮ ಮೊಬೈಲ್ ಸಂಖ್ಯೆ (mobile number) ಲಿಂಕ್ ಆಗಿಲ್ಲವೆಂದ್ರೆ ನೀವು UIDAIಗೆ ಮುಖಾಂತರ ಅಥವಾ 1947 ಸಂಖ್ಯೆಗೆ ಕರೆ ಮಾಡೋ ಮೂಲಕ ದೂರು (Complaint) ಸಲ್ಲಿಸಬಹುದು.
ಆಧಾರ್ ಕಾರ್ಡ್ ಏಕೆ ಅಗತ್ಯ?
ಭಾರತ (India)ದಲ್ಲಿ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್, ಪಾಸ್ಫೋರ್ಟ್ ಆಫೀಸ್, ಆರ್ಟಿಒ ಕಚೇರಿಯಿಂದ ಹಿಡಿದು ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಏನಾದ್ರೂ ಕೆಲಸ ಮಾಡಿಸಿಕೊಳ್ಳೋದಿದ್ರೆ ಆಧಾರ್ ಕಾರ್ಡ್ ಬೇಕೇ ಬೇಕು. ಅಷ್ಟೇ ಅಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಯಾಗಲು ಕೂಡ ಆಧಾರ್ ಕಡ್ಡಾಯ. ಆದಕಾರಣ ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಬೇರೆಯವರು ಪಡೆದುಕೊಳ್ಳೋ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಆಧಾರ್ ಕಾರ್ಡ್ ದುರ್ಬಳಕೆ ಆಗಿದೆಯೋ ಇಲ್ಲವೋ ಎಂಬುದನ್ನು ಆಗಾಗ ಪರಿಶೀಲಿಸೋದು ಅಗತ್ಯ.
ಭಾರತದ ಆರ್ಥಿಕಪ್ರಗತಿಯ ದರ ವಿಶ್ವದಲ್ಲೇ ಅತೀ ವೇಗದ್ದು!
ಆಧಾರ್ ಸೇಫ್ಟಿಗೆ (Safety) ಹೀಗೆ ಮಾಡಿ:
ಇಂಟರ್ನೆಟ್ ಕೆಫೆ (Internet Cafe) ಅಥವಾ ಸೈಬರ್ ಸೆಂಟರ್ನಂತಹ (Cyber Center) ಸಾರ್ವಜನಿಕ ಕಂಪ್ಯೂಟರ್ಗಳಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಇ-ಆಧಾರ್ ಕಾರ್ಡ್ ಡೌನ್ಲೋಡ್ (Download)ಮಾಡಬೇಡಿ.
ಆಧಾರ್ಗೆ ಸಂಬಂಧಿಸಿ ನಿಮ್ಮ ಮೊಬೈಲ್ಗೆ ಬರೋ ಯಾವುದೇ ಒಟಿಪಿ (OTP) ಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆ (Mobile number) ಬದಲಾಗಿದ್ದರೆ ಅಥವಾ ಕಳೆದು ಹೋಗಿದ್ದರೆ ಈಗ ನೀವು ಬಳಸುತ್ತಿರೋ ಸಂಖ್ಯೆಯನ್ನೇ ಆಧಾರ್ ಕಾರ್ಡ್ನಲ್ಲಿ ಅಪ್ಡೇಟ್ ಮಾಡಿ.
-ಕಣ್ರೆಪ್ಪೆ, ಬೆರಳಚ್ಚು ಹಾಗೂ ಫೋಟೋದಂತಹ ಬಯೋಮೆಟ್ರಿಕ್ ಮಾಹಿತಿಗಳು ಕೂಡ ದುರ್ಬಳಕೆಯಾಗೋ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಯುಐಡಿಎಐ ಬಯೋಮೆಟ್ರಿಕ್ ಲಾಕ್ ಸೌಲಭ್ಯ ಕಲ್ಪಿಸಿದೆ. ಈ ವೆಬ್ಸೈಟ್ ಬಳಸಿ ಬಯೋಮೆಟ್ರಿಕ್ ಮಾಹಿತಿಗಳನ್ನು ಲಾಕ್ ಮಾಡಬಹುದು.