Karnataka Business Awards; ಏಷ್ಯಾನೆಟ್ ಸುವರ್ಣನ್ಯೂಸ್, ಕನ್ನಡಪ್ರಭದಿಂದ ಉದ್ಯಮ ಸಾಧಕರಿಗೆ ಪುರಸ್ಕಾರ!

By Suvarna NewsFirst Published Nov 14, 2021, 8:08 PM IST
Highlights
  • ಏಷ್ಯಾನೆಟ್ ಹಾಗೂ ಕನ್ನಡಪ್ರಭದಿಂದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್
  • ಎಲ್ಲಾ ವಲಯದ ಸಾಧಕರನ್ನು ಗುರುತಿಸಿ ಕರ್ನಾಟಕ ಉದ್ಯಮ ಪ್ರಶಸ್ತಿ
  • ಪ್ರಶಸ್ತಿ ವಿತರಿಸಿದ ಸಚಿವ ಮರುಗೇಶ್ ನಿರಾಣಿ, ಸಂಪಾದಕ ರವಿ ಹೆಗಡೆ
     

ಬೆಂಗಳೂರು(ನ.14):  ಏಷ್ಯಾನೆಟ್ ಸುವರ್ಣನ್ಯೂಸ್(Aisanet Suvarnanews) ಹಾಗೂ ಕನ್ನಡಪ್ರಭ(Kannada Prabha) ಪ್ರತಿ ವರ್ಷ ಸಮಾಜದ ಎಲ್ಲಾ ವಲಯದ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿದೆ. ಈ ಮೂಲಕ ಸಾಧಕರಿಗೆ ಬೆಂಬಲ, ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಬಾಯಾರ್ಸ್ ಕಾಫಿ, ಸುಕೋ ಬ್ಯಾಂಕ್, ವಾಸವಿ ಹೆಲ್ತ್ ಕೇರ್ ಪ್ರಾಡಕ್ಟ್ ಸೇರಿದಂತೆ ಹಲವು ಉದ್ಯಮ ಸಾಧಕರುಗ ಪ್ರಸಕ್ತ ವರ್ಷದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ಪ್ರಶಸ್ತಿ (Karnataka Business Award) ಪಡೆದು ಸಂತಸ ಹಂಚಿಕೊಂಡರು. ಬೃಹತ್ ಮತ್ತು ಮದ್ಯಮ ಕೈಗಾರಿಕ ಸಚಿವ ಮುರುಗೇಶ್ ಪ್ರಶಸ್ತಿ ವಿತರಿಸಿದರು.

"

ಬಾಯಾರ್ಸ್ ಕಾಫಿ, ಸುಕೋ ಬ್ಯಾಂಕ್, ಅಮೃತ ಆರ್ಗಾನಿಕ್ ಫರ್ಟಿಲೈಸರ್, ವಾಸವಿ ಹೆಲ್ತ್ ಕೇರ್ ಪ್ರಾಡಕ್ಟ್, ಸಂತೃಪ್ತಿ ಆಯಿಲ್, ಮಧುಶ್ರೀ ಪ್ರಾಡಕ್ಟ್, ಅಕ್ವಾ ಸಬ್ ಎಂಜಿನಿಯರಿಂಗ್, ಎಸ್‌ಜೆಎಸ್ ಫುಡ್ ಪ್ರಾಡಕ್ಟ್, ಸರೋಜ್ ಆ್ಯಗ್ರೋ ಇಂಡಸ್ಟ್ರಿ, ಮೆಡ್ ಮೆನಾರ್ ಆರ್ಗಾನಿಕ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಪ್ರತಿಷ್ಠಿತ ಕರ್ನಾಟಕ ಬ್ಯುಸಿನೆಸ್ ಪ್ರಶಸ್ತಿ ಪಡೆದುಕೊಂಡಿತು. ಪ್ರಶಸ್ತಿ ಪಡೆದು, ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭಕ್ಕೆ ಧನ್ಯವಾದ ಹೇಳಿದ್ದಾರೆ.

"

ಜೆಎಸ್ ಮಸಾಲಾ ಕಂಪನಿ, ದಿ ಕ್ಯಾಂಪ್ಕೋ ಲಿಮಿಟೆಡ್ ಅಪೋಲ್ ಪೈಂಟ್ಸ್, ಐಯ್ಯಂಗಾರ್ ಹೋಮ್ ಪ್ರಾಡಕ್ಟ್, ಕಮಲ್ ಆ್ಕಂಡ್ರ ಕರಣ್ ಅಪರೆಲ್ಸ್, ಹೈ ಕೋಟ್ ಮುಳ್ಳುತಂತಿ, ನಿರ್ಮಲಾ ಇಂಡಸ್ಟ್ರಿ, ಸಾಯಿ ಸತ್ಯ ಸಿರಿ ಎಕ್ಸಿಮ್ ಆಯಿಲ್, ಅಶೋಕಾ ಫಾರಂ ಏಡ್ಸ್, ತಕ್ಷಣ ಆಯುರ್ವೇದಾ ಆಸ್ಪತ್ರೆ, ಕಿಶೋರ್ ಎಂಟರ್‌ಪ್ರೈಸಸ್, ಎಸ್‌ಸಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸುಪ್ರೀಂ ಸೋಲಾರ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್. ಸುದರ್ಶನ್ ಸಿಲ್ಕ್ಸ್, ಸಾವಿತ್ರಿ ಗ್ರೂಪ್ ಆಫ್ ಕಂಪನೀಸ್, ವಿ ಸ್ಟಾರ್‌ಪ್ಲಸ್ ಲೈಫ್ ‌ಸ್ಟೈಲ್ ಪ್ರೈವೇಟ್ ಲಿಮಿಟೆಡ್, ಎಸ್‌ಡಿಬಿ ಇಂಡಸ್ಟ್ರಿಸ್, ಬಯೋ ವಿಟಮಿನ್ಸ್ ಪ್ರೈವೇಟ್ ಲಿಮಿಟೆಡ್, ಚಿರು ಫೆನೆಸ್ಟ್ರೇಶನ್ ಪ್ರೈವೇಟ್ ಲಿಮಿಟೆಡ್ ಹಾಗೂ ಎ ಅಂಡ್ ಜೆ ಹೆಲ್ತ್ ಕೇರ್ ಕಂಪನಿಗಳು  ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ಪ್ರಶಸ್ತಿ ಪಡೆಯಿತು.

"

ಸುವರ್ಣ ನ್ಯೂಸ್-ಕನ್ನಡಪ್ರಭ ಎಜುಕೇಷನ್ ಎಕ್ಸ್‌ಪೋಗೆ ಗಣೇಶ್ ಚಾಲನೆ

ಪ್ರಶಸ್ತಿ ವಿತರಿಸಿ ಮಾತನಾಡಿದ ಬೃಹತ್ ಮತ್ತು ಮದ್ಯಮ ಕೈಗಾರಿಕ ಸಚಿವ ಮುರುಗೇಶ್ ನಿರಾಣಿ, ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ಕಾರ್ಯವನ್ನು ಶ್ಲಾಘಿಸಿದರು. ಕರ್ನಾಕದಲ್ಲಿನ ಹಲವು ಉದ್ಯಮಿಗಳು ಹಾಗೂ ಉದ್ಯಮ ಈ ಪ್ರಶಸ್ತಿಗೆ ಅರ್ಹವಾಗಿದೆ. ಆದರೆ 30 ಮಂದಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಶಸ್ತಿ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿ, ಎಂದು ನಿರಾಣಿ ಆಶಿಸಿದರು. ರೈತರ ಪ್ರೋತ್ಸಾಹಿಸಲು ರೈತ ರತ್ನ ಪ್ರಶಸ್ತಿ, ಶೌರ್ಯ ಪ್ರಶಸ್ತಿ, ಮಹಿಳಾ ಸಾಧಕಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ನೀಡುತ್ತಿದೆ. ಉದ್ಯಮ, ಕೈಗಾರಿಕೆಗಳಿಗೆ ಪೂರಕ ವಾತಾವರಣವಿರುವ ಕರ್ನಾಟಕ ಉದ್ಯಮಿಗಳಿಗೆ ಅಚ್ಚು ಮೆಚ್ಚು. ಪೂರಕ ವಾತಾವರಣವಿರುವ ಕಾರಣ ಕರ್ನಾಟಕ ದೇಶದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ. ಎಲೆಮರೆ ಕಾಯಿಯಂತೆ ಕೆಲಸ ಮಾಡಿ, ಸಮಾಜದಲ್ಲಿ ಹಲವರ ಪ್ರೀತಿ ಪಾತ್ರರಾಗಿರುವ ಉದ್ಯಮಿಗಳನ್ನು ಗುರುತಿಸಿದ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಕಾರ್ಯಕ್ಕೆ ನಿರಾಣಿ ಮೆಚ್ಚುಗೆ ವ್ಯಕ್ತಪಡಿಸಿದರು.

click me!