PAN Aadhaar Link:ಕೇವಲ 3 ದಿನಗಳಷ್ಟೇ ಬಾಕಿ,ಆಧಾರ್-ಪ್ಯಾನ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

Published : Mar 28, 2023, 10:58 AM IST
PAN Aadhaar Link:ಕೇವಲ 3 ದಿನಗಳಷ್ಟೇ ಬಾಕಿ,ಆಧಾರ್-ಪ್ಯಾನ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ಸಾರಾಂಶ

ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆಗೆ ಮಾ.31 ಅಂತಿಮ ಗಡುವು. ಅಂದರೆ ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿವೆ. ಒಂದು ವೇಳೆ ನೀವು ಇನ್ನೂ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆ ಮಾಡದಿದ್ರೆ ತಕ್ಷಣ ಈ ಕೆಲಸವನ್ನು ಮಾಡಿ ಮುಗಿಸಿ. ಆದರೆ, ಹೇಗೆ ಎಂದು ತಿಳಿಯುತ್ತಿಲ್ವಾ? ಪ್ಯಾನ್-ಆಧಾರ್ ಜೋಡಣೆ ಹೇಗೆ ಎಂಬ ಹಂತ ಹಂತವಾದ ವಿವರಣೆಯನ್ನು ಇಲ್ಲಿ ನೀಡಲಾಗಿದೆ.   

Business Desk:ಪ್ಯಾನ್  ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇವಲ ಮೂರು ದಿನ ಬಾಕಿ ಉಳಿದಿದೆ. ಒಂದು ವೇಳೆ ಈ ಅವಧಿಯೊಳಗೆ ಆಧಾರ್ ಕಾರ್ಡ್ ನೊಂದಿಗೆ ಜೋಡಣೆಯಾಗದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಒಮ್ಮೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ.ಅಲ್ಲದೆ, ಬ್ಯಾಂಕ್ ಖಾತೆ ತೆರೆಯಲು, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಸಾಧ್ಯವಾಗೋದಿಲ್ಲ. ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಕೂಡ ತೊಂದರೆ ಎದುರಾಗಲಿದೆ. . ದಂಡವಿಲ್ಲದೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಸಿಬಿಡಿಟಿ 2022ರ ಮಾರ್ಚ್ 31ರ ತನಕ ಸಮಯಾವಕಾಶ ನೀಡಿತ್ತು. ಆ ಬಳಿಕ ಅಂದ್ರೆ 2022ರ ಏಪ್ರಿಲ್  1ರ ಬಳಿಕ  ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್  ಮಾಡಲು 500ರೂ.  ಹಾಗೂ  2022ರ  ಜುಲೈ 1ರ ಬಳಿಕ 1000ರೂ. ದಂಡವನ್ನು ಸಿಬಿಡಿಟಿ ನಿಗದಿಪಡಿಸಿತ್ತು. ಈಗಾಗಲೇ ಕೇಂದ್ರ ಸರ್ಕಾರ ಪ್ಯಾನ್ -ಆಧಾರ್ ಜೋಡಣೆ ಅಂತಿಮ ಗಡುವನ್ನುಅನೇಕ ಬಾರಿ ವಿಸ್ತರಿಸಿದೆ ಕೂಡ. ಆಧಾರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆಯಿಂದ ಜಮ್ಮು ಕಾಶ್ಮೀರ, ಅಸ್ಸಾಂ, ಮೇಘಾಲಯದ ಜನರಿಗೆ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ 1961 ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಅನಿವಾಸಿ ಭಾರತೀಯರಿಗೆ, ಭಾರತೀಯ ಪ್ರಜೆಗಳಲ್ಲದವರಿಗೆ ವಿನಾಯಿತಿ ನೀಡಲಾಗಿದೆ. ಜೊತೆಗೆ 80 ವರ್ಷ ಮೀರಿದವರಿಗೂ ಇದರಿಂದ ವಿನಾಯ್ತಿ ನೀಡಲಾಗಿದೆ. ಹಾಗಾದ್ರೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.

ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಹೇಗೆ?
ಎಸ್ ಎಂಎಸ್ ಮೂಲಕ
ಹಂತ 1: 'UIDPAN'ಎಂದು ಟೈಪ್ ಮಾಡಿ 12 ಅಂಕೆಗಳ ಆಧಾರ್ ಸಂಖ್ಯೆ ಹಾಗೂ 10 ಅಂಕೆಗಳ ಪ್ಯಾನ್ ಸಂಖ್ಯೆ ಟೈಪ್ ಮಾಡಿ.
ಹಂತ 2: ನೋಂದಾಯಿತ ಮೊಬೈಲ್ ಸಂಖ್ಯೆಯಿಂದ  56161  ಅಥವಾ 567678 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಿ.

ಇ ಕಾಮರ್ಸ್ ದೈತ್ಯರ ಸ್ವಾಮ್ಯಕ್ಕೆ ಲಗ್ಗೆ ಇಡಲಿದೆ ಭಾರತದ ಒಎನ್‌ಡಿಸಿ

ಆದಾಯ ತೆರಿಗೆ ಇಲಾಖೆ ಪೋರ್ಟಲ್ ಮೂಲಕ
*ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ https://www.incometax.gov.in/iec/foportal/ ಲಾಗಿನ್ ಆಗಿ. 
* ಹೋಮ್ ಪೇಜ್ ನಲ್ಲಿ' Quick Links'ಅಡಿಯಲ್ಲಿ 'Link Aadhaar'ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ಪ್ಯಾನ್‌ ನಂಬರ್, ಆಧಾರ್ ಸಂಖ್ಯೆ ಮತ್ತು ಪೂರ್ಣ ಹೆಸರನ್ನು ನಮೂದಿಸಿ (ಆಧಾರ್ ಕಾರ್ಡ್‌ನಲ್ಲಿ ನೀಡಿರುವಂತೆ).
* ಪುಟದಲ್ಲಿ ಕಾಣಿಸುವ ಕ್ಯಾಪ್ಚಾ ಕೋಡ್ ನಮೂದಿಸಿ
* ಸಂಬಂಧಿತ ಆಯ್ಕೆಯನ್ನು ಆರಿಸಿ ಮತ್ತು ವೆಬ್‌ಪುಟದ ಕೆಳಭಾಗದಲ್ಲಿರುವ 'ಲಿಂಕ್ ಆಧಾರ್' ಬಟನ್ ಅನ್ನು ಕ್ಲಿಕ್ ಮಾಡಿ.

Social Media Influencers :ಭಾರತದ ಕಂಪನಿಗಳಿಗೆ ಮೂನ್ ಲೈಟ್ ಬಳಿಕ ಹೊಸ ಸವಾಲು?

ದಂಡ ಪಾವತಿಸೋದು ಹೇಗೆ?
ಆಧಾರ್ -ಪ್ಯಾನ್ ಲಿಂಕ್ ಮಾಡುವ ಮನವಿ ಸಲ್ಲಿಕೆಯಾಗುವ ಮುನ್ನ ದಂಡ ಕಟ್ಟಬೇಕು. ನೀವು ಈಗ ಆಧಾರ್ -ಪ್ಯಾನ್ ಲಿಂಕ್ ಮಾಡೋದಾದ್ರೆ 1000 ರೂ. ವಿಳಂಬ ಶುಲ್ಕ ಪಾವತಿಸಬೇಕು.
ಹಂತ 1:ಆಧಾರ್-ಪ್ಯಾನ್ ಲಿಂಕ್ ಮನವಿ ಸಲ್ಲಿಕೆ ಪ್ರಕ್ರಿಯೆ  ಮುಂದುವರಿಸಲು https://onlineservices.tin.egov-nsdl.com/etaxnew/tdsnontds.jsp ಭೇಟಿ ನೀಡಿ.
ಹಂತ 2: ಆಧಾರ್-ಪ್ಯಾನ್ ಲಿಂಕ್ ಮನವಿ ಸಲ್ಲಿಕೆಗೆ ಚಲನ್ ಸಂಖ್ಯೆ/ಐಟಿಎನ್ ಎಸ್ 280 ಅಡಿಯಲ್ಲಿಪ್ರಕ್ರಿಯೆ ಮುಂದುವರಿಕೆ (Proceed under CHALLAN NO./ITNS 280) ಮೇಲೆ ಕ್ಲಿಕ್ ಮಾಡಿ.
ಹಂತ3: ಈಗ  tax applicable ಆಯ್ಕೆ ಮಾಡಿ.
ಹಂತ 4: ಒಂದೇ ಚಲನ್ ನಲ್ಲಿ ಶುಲ್ಕ ಪಾವತಿಯನ್ನು ಮೈನರ್ ಹೆಡ್ 500 (ಶುಲ್ಕ) ಹಾಗೂ ಮೇಜರ್ ಹೆಡ್ 0021 (ಕಂಪನಿಗಳನ್ನು ಹೊರತುಪಡಿಸಿದ ಆದಾಯ ತೆರಿಗೆ ) ಅಡಿಯಲ್ಲಿ ಮಾಡಿರೋದನ್ನು ಖಚಿತಪಡಿಸಿ.
ಹಂತ 5: ಈಗ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್  ನಲ್ಲಿ ಯಾವುದು ನಿಮ್ಮ ಪಾವತಿ ವಿಧಾನ ಎಂಬುದನ್ನು ಆಯ್ಕೆ ಮಾಡಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!