Pakistan Economy: USD ವಿರುದ್ಧ 30.5% ರಷ್ಟು ಕುಸಿದ ಪಾಕಿಸ್ತಾನಿ ರೂಪಾಯಿ, ಐತಿಹಾಸಿಕ ಪತನ!

Published : Dec 08, 2021, 09:53 AM ISTUpdated : Dec 08, 2021, 10:12 AM IST
Pakistan Economy: USD ವಿರುದ್ಧ 30.5% ರಷ್ಟು ಕುಸಿದ ಪಾಕಿಸ್ತಾನಿ ರೂಪಾಯಿ, ಐತಿಹಾಸಿಕ ಪತನ!

ಸಾರಾಂಶ

* ಪಾಕಿಸ್ತಾನ ಆರ್ಥಿಕತೆಯಲ್ಲಿ ಮಹಾ ಕುಸಿತ * ಪಾಕಿಸ್ತಾನದ ರೂಪಾಯಿ ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಕೆಳಮಟ್ಟಕ್ಕೆ * ಇಮ್ರಾನ್ ಖಾನ್‌ ನಯಾ ಪಾಕಿಸ್ತಾನಕ್ಕೆ ಹಿನ್ನಡೆ

ಇಸ್ಲಮಾಬಾದ್(ಡಿ.08) ಪಾಕಿಸ್ತಾನದ ಆರ್ಥಿಕತೆಯಲ್ಲಿ (Pakistan Economy) ಐತಿಹಾಸಿಕ ಕುಸಿತ ಕಂಡುಬಂದಿದೆ. ಪಾಕಿಸ್ತಾನದ ರೂಪಾಯಿ (Pakistani Rupees) ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಪಾಕಿಸ್ತಾನದ ಕರೆನ್ಸಿಯು ಆಗಸ್ಟ್ 2018 ರಲ್ಲಿ ಡಾಲರ್‌ಗೆ, 123 ರೂಪಾಯಿಯಿಂದ ಡಿಸೆಂಬರ್ 2021 ರ ವೇಳೆಗೆ ಡಾಲರ್‌ಗೆ 177 ರೂಪಾಯಿಗೆ ಕುಸಿದಿದೆ. ಇದು ದೇಶದ ಇತಿಹಾಸದಲ್ಲಿಯೇ ಅತ್ಯಧಿಕ ಅಪಮೌಲ್ಯೀಕರಣವಾಗಿದೆ (Devaluation). ಇಮ್ರಾನ್ ಖಾನ್ (Pakistan Proime Minister Imran Khan) ಅವರು ಪ್ರಧಾನಿಯಾಗಿದ್ದಾಗ, ಪಾಕಿಸ್ತಾನವು ಅತಿದೊಡ್ಡ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಎಂಬುವುದು ಉಲ್ಲೇಖನೀಯ. ಹೆಚ್ಚುತ್ತಿರುವ ಹಣದುಬ್ಬರ ದರ, ವಿದೇಶಿ ವಿನಿಮಯ ಮೀಸಲು ಖಾಲಿಯಾಗುತ್ತಿರುವುದು, ಚಾಲ್ತಿ ಖಾತೆ ಕೊರತೆಯ ಒತ್ತಡ ಮತ್ತು ಪಾಕಿಸ್ತಾನದ ಕರೆನ್ಸಿ ರೂಪಾಯಿಯ ಕೆಟ್ಟ ಸ್ಥಿತಿಯಿಂದ ಪಾಕಿಸ್ತಾನದ ಆರ್ಥಿಕತೆಯು ದುರ್ಬಲಗೊಂಡಿದೆ.

ಸಹಾಯ ಮಾಡಲು ಮುಂದೆ ಬಂದ IMF

ಅಲ್ ಜಜೀರಾ ವರದಿಯ ಪ್ರಕಾರ, ಹೆಚ್ಚುತ್ತಿರುವ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ದಕ್ಷಿಣ ಏಷ್ಯಾದ (South Asia) ದೇಶಕ್ಕೆ ಸ್ಥಗಿತಗೊಳಿಸಲಾಗಿದ್ದ 6 ಶತಕೋಟಿ ಡಾಲರ್ ಧನಸಹಾಯ ಕಾರ್ಯಕ್ರಮವನ್ನು ಮತ್ತೆ ಆರMಭಿಸಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲು ಒಪ್ಪಿಕೊಂಡಿರುವುದಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ ( (The International Monetary Fund-IMF) ಸೋಮವಾರ ಹೇಳಿದೆ. ಆರನೇ ಪರಿಶೀಲನೆಯನ್ನು ಪೂರ್ಣಗೊಳಿಸಲು ಅಗತ್ಯವಾದ ನೀತಿಗಳು ಮತ್ತು ಸುಧಾರಣೆಗಳ ಕುರಿತು ಪಾಕಿಸ್ತಾನದ ಅಧಿಕಾರಿಗಳು ಮತ್ತು IMF ಸಿಬ್ಬಂದಿ ಒಪ್ಪಂದಕ್ಕೆ ಬಂದಿದ್ದಾರೆ ಎಂದು IMF ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ಯಾಕೇಜ್‌ನ ನಿಯಮಗಳು ಮತ್ತು ಷರತ್ತುಗಳನ್ನು ಸಡಿಲಿಸಲು ಪಾಕಿಸ್ತಾನ ಹಲವಾರು ತಿಂಗಳುಗಳ ಕಾಲ IMF ನೊಂದಿಗೆ ಮಾತುಕತೆ ನಡೆಸುತ್ತಿತ್ತು. ಈ ವರ್ಷದ ಆರಂಭದಿಂದ ಬಾಕಿ ಉಳಿದಿರುವ ಪರಿಶೀಲನೆಯ ಮುಕ್ತಾಯವು ಐಎಂಎಫ್‌ಗೆ ವಿಶೇಷ ಡ್ರಾಯಿಂಗ್ ಹಕ್ಕುಗಳಲ್ಲಿ 750 ಮಿಲಿಯನ್ ಅಥವಾ ಸುಮಾರು 1 ಬಿಲಿಯನ್ ಡಾಲರ್‌ ಒದಗಿಸುತ್ತದೆ, ಇದುವರೆಗಿನ ಒಟ್ಟು ವಿನಿಯೋಗಗಳು ಸುಮಾರು 3 ಶತಕೋಟಿ ಡಾಲರ್ ಆಗಿರುತ್ತದೆ ಎಂದು ಹೇಳಿಕೆ ತಿಳಿಸಿದೆ.

Pakistan's Economy: ದಿವಾಳಿಯಾಗುತ್ತಿದೆ ಪಾಕಿಸ್ತಾನ:-ವಿದೇಶಿ ಸಾಲದ ಸುಳಿಯಲ್ಲಿ ನೆರೆ ರಾಷ್ಟ್ರ!

ಸಾಲ ಕೊಟ್ಟ ಸೌದಿ ಅರೇಬಿಯಾ

ಇದೇ ಶನಿವಾರ ಅಂದರೆ ಡಿಸೆಂಬರ್ 5 ರಂದು ಸೌದಿ ಅರೇಬಿಯಾ (Saudi Arabia) ಪಾಕಿಸ್ತಾನಕ್ಕೆ 3 ಬಿಲಿಯನ್ ಡಾಲರ್ ಸಾಲ ನೀಡಿದೆ. ಈ ಸಾಲವು ಸೌದಿಯಿಂದ ಆರ್ಥಿಕ ಪ್ಯಾಕೇಜ್‌ನ ಭಾಗವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆರ್ಥಿಕ ಸಲಹೆಗಾರ ಶೌಕತ್ ತರೀನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಮ್ರಾನ್ ಖಾನ್ ನಿರಂತರವಾಗಿ ವಿಶ್ವಬ್ಯಾಂಕ್ (World Bank) ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ತೆಗೆದುಕೊಳ್ಳುತ್ತಿದ್ದಾರೆ ಎಂಬುವುದು ಉಲ್ಲೇಖನೀಯ. ಡಿಸೆಂಬರ್ 31, 2020 ರಂತೆ, ಪಾಕಿಸ್ತಾನವು ಒಟ್ಟು 115.756 ಬಿಲಿಯನ್ ಡಾಲರ್ ಸಾಲವನ್ನು ಹೊಂದಿದೆ.

Pakistan Embassy: 3 ತಿಂಗಳಿಂದ ವೇತನ ಸಿಕ್ಕಿಲ್ಲ, ಪಾಕ್ ಪ್ರಧಾನಿ ಇಮ್ರಾನ್‌ಗೆ ರಾಯಭಾರ ಕಚೇರಿಯಿಂದ 'ಪೂಜೆ'!

70 ವರ್ಷಗಳಲ್ಲೇ ಗರಿಷ್ಠ ಹಣದುಬ್ಬರ

ಪಾಕಿಸ್ತಾನವು 70 ವರ್ಷಗಳಲ್ಲಿ ಅತಿ ಹೆಚ್ಚು ಹಣದುಬ್ಬರವನ್ನು ಹೊಂದಿದೆ. ಅಂದರೆ, 1947ರಲ್ಲಿ ಭಾರತದಿಂದ (India) ಬೇರ್ಪಟ್ಟ ನಂತರ ಪಾಕಿಸ್ತಾನದ ಸ್ಥಿತಿ ತೀರಾ ಹದಗೆಟ್ಟಿರುವುದು ಇದೇ ಮೊದಲು. ಕಳೆದ ಮೂರು ವರ್ಷಗಳಲ್ಲಿ ಹಾಲಿನ ದರದಲ್ಲಿ ಶೇ.32ರಷ್ಟು ಏರಿಕೆಯಾಗಿದ್ದು, ಪ್ರತಿ ಲೀಟರ್ ಗೆ 112 ರೂ. ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಇಲ್ಲಿ ತಿನ್ನುವ ಬಹುತೇಕ ಎಲ್ಲವೂ ಣ್ಣೆ, ಹಿಟ್ಟು ಅಥವಾ ಚಿಕನ್ ಇತ್ಯಾದಿ ಸೇರಿದಂತೆ ದುಪ್ಪಟ್ಟು ದುಬಾರಿಯಾಗಿದೆ. ಪಾಕಿಸ್ತಾನದ ಮಾಧ್ಯಮ ಜಿಯೋ ನ್ಯೂಸ್ ಪ್ರಕಾರ, ಪಾಕಿಸ್ತಾನದ ಕರೆನ್ಸಿ ನಿರಂತರವಾಗಿ ಕುಸಿಯುತ್ತಿದೆ. ಪಾಕಿಸ್ತಾನದ ಫೆಡರಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (Pakistan Statistics Bureau) ಪ್ರಕಾರ, ಅಕ್ಟೋಬರ್ 2018 ರಿಂದ ಅಕ್ಟೋಬರ್ 2021 ರವರೆಗೆ ವಿದ್ಯುತ್ ದರಗಳು ಪ್ರತಿ ಯೂನಿಟ್‌ಗೆ ರೂ 4.06 ರಿಂದ ರೂ 6.38 ಕ್ಕೆ 57 ಪ್ರತಿಶತದಷ್ಟು ಹೆಚ್ಚಾಗಿದೆ. ಪಾಕಿಸ್ತಾನದ ಅಂಕಿಅಂಶಗಳ ಬ್ಯೂರೋ ಪ್ರಕಾರ, ದೇಶದ ಹಣದುಬ್ಬರ ದರವು 9.2% ರಿಂದ 11.5% ಕ್ಕೆ ಏರಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಪಾಕಿಸ್ತಾನವು ತನ್ನ ಅತ್ಯಧಿಕ ಹಣದುಬ್ಬರ ದರ 12.4 ಶೇಕಡಾವನ್ನು ದಾಖಲಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!