Billionaires Wealth: ಕೊರೋನಾ ಪಿಡುಗಿದ್ದರೂ ಧನಿಕರ ಸಂಪತ್ತು ದಾಖಲೆ ಏರಿಕೆ!

By Kannadaprabha News  |  First Published Dec 8, 2021, 3:17 AM IST

* ಕೊರೋನಾ ಪಿಡುಗಿನ ವೇಳೆಯೂ ಧನಿಕರ ಸಂಪತ್ತು ದಾಖಲೆ ಏರಿಕೆ

* ಕೋವಿಡ್‌ ಪಿಡುಗಿನ ವೇಳೆಯೂ ಧನಿಕರ ಸಂಪತ್ತು ದಾಖಲೆ ಏರಿಕೆ

-*ವಿಶ್ವದ 3.5% ಸಂಪತ್ತು ಕೇವಲ 2750 ಬಿಲಿಯನೇರ್‌ಗಳ ಬಳಿ


ವಾಷಿಂಗ್ಟನ್‌ (ಡಿ. 08)  ಕೊರೋನಾ (Coronavirus) ಪಿಡುಗಿನಿಂದಾಗಿ ಅಸಂಖ್ಯಾತ ಜನರ ಜೀವನವೇ ಹಳಿ ತಪ್ಪಿದ್ದರೆ, ಶ್ರೀಮಂತರ ಆಸ್ತಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಫ್ರಾನ್ಸ್‌ನ ಆರ್ಥಿಕ ತಜ್ಞ ಥಾಮಸ್‌ ಪಿಕೆಟ್ಟಿ ( Thomas Piketty) ಅವರು ಸ್ಥಾಪಿಸಿರುವ ಸಂಸ್ಥೆಯೊಂದು ಹೇಳಿದೆ. ವಿಶ್ವದ ಒಟ್ಟಾರೆ ಸಂಪತ್ತಿನ ಪೈಕಿ ಶೇ.3.5ರಷ್ಟುಕೇವಲ 2750 ಬಿಲಿಯನೇರ್‌ಗಳ (100 ಶತಕೋಟಿ ಡಾಲರ್‌ ಒಡೆಯರು) ಬಳಿ ಇದೆ. 1995ರಲ್ಲಿ ಕೇವಲ ಶೇ.1ರಷ್ಟುಆಸ್ತಿ ಮಾತ್ರ ಬಿಲಿಯನೇರ್‌ಗಳ ಬಳಿ ಇತ್ತು. ಕೊರೋನಾ ಸಾಂಕ್ರಾಮಿಕ ಆರಂಭವಾದ ಬಳಿಕ ಬಿಲಿಯನೇರ್‌ಗಳ (Billionaires)ಸಂಪತ್ತು ಭಾರಿ ಏರಿಕೆಯಾಗಿದೆ ಎಂದು ಗ್ಲೋಬಲ್‌ ಇನ್‌ಈಕ್ವಾಲಿಟಿ ಲ್ಯಾಬ್‌ ತಿಳಿಸಿದೆ. ಈ ಮೂಲಕ ಜಾಗತಿಕ ಆರ್ಥಿಕ ಬಿಕ್ಕಟ್ಟು ಅಭಿವೃದ್ಧಿಶೀಲ ದೇಶಗಳಲ್ಲಿ ಯಾವ ರೀತಿ ಅಸಮಾನತೆಗೆ ಕಾರಣವಾಗಿದೆ ಎಂಬ ಚರ್ಚೆ ಮತ್ತಷ್ಟುಕಾವೇರುವಂತೆ ಮಾಡಿದೆ.

ಕೊರೋನಾ ಸಂದರ್ಭದಲ್ಲಿ ಜಗತ್ತಿನ  ಅನೇಕ ದೇಶಗಳು ಅನಿವಾರ್ಯವಾಗಿ ತಿಂಗಳುಗಳ ಕಾಲ ಲಾಕ್ ಡೌನ್ ಮಾಡಿದ್ದವು. ಭಾರತ ಸಹ ಲಾಖ್ ಡೌನ್ ಘೋಷಣೆ ಮಾಡಿತ್ತು. ಲಾಕ್ ಡೌನ್ ಪರಿಣಾಮ ಸಹಜವಾಗಿಯೇ ಆರ್ಥಿಕ ಸ್ಥಿತಿ ಗತಿಗಳ ಮೇಲೆ ಪರಿಣಾಮ ಬೀರಿತ್ತು. ಆದರೆ ಅರಿವಿಗೆ ಬಾರದಂತೆ ಐಟಿ ಮತ್ತು ಮೆಡಿಕಲ್ ಉದ್ಯಮಗಳು ಬೆಳವಣಿಗೆ ಸಾಧಿಸಿಕೊಂಡವು. ವರ್ಕ್ ಫ್ರಾಂ ಹೋಂ ಪರಿಣಾಮ ಕಂಪನಿಗಳು ಲಾಭವನ್ನೇ ಕಂಡವು. ಇದೇ ಕಾರಣಕ್ಕೆ ಈಗಲೂ ಮುಂದುವರಿಕೆ ಮಾಡಿಕೊಂಡೇ  ಬಂದಿವೆ. ಕೊರೋನಾ ಸಂದರ್ಭದಲ್ಲಿಯೂ ಹಣ ಹೂಡಿಕೆ ಮಾಡಿದವರು ಲಾಭವನ್ನೇ ಗಳಿಸಿಕೊಂಡರು. 

Latest Videos

undefined

1000 ಕೋಟಿ ವ್ಯವಹಾರ ಮುಚ್ಚಿಟ್ಟದ್ದ ರೀಟೇಲ್‌ ಕಂಪನಿಗೆ ಐಟಿ ಬಿಸಿ:  ತೆರಿಗೆ ತಪ್ಪಿಸಲು 1000 ಕೋಟಿ ರು. ವ್ಯವಹಾರ ಮುಚ್ಚಿಟ್ಟಿದ್ದ ತಮಿಳುನಾಡಿನ ದೊಡ್ಡ ರೀಟೇಲ್‌ ಕಂಪನಿ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿ ನಡೆಸಿದೆ.

ಲೆಕ್ಕ ನೀಡಲಾಗದ 150 ಕೋಟಿ ರು.ಗೂ ಅಧಿಕ ಮೌಲ್ಯದ ಹಣದಲ್ಲಿ ಖರೀದಿ ನಡೆಸಿರುವುದು ಬೆಳಕಿಗೆ ಬಂದಿದೆ. ಆಭರಣ, ಜವಳಿ ಮತ್ತು ಗೃಹೋಪಯೋಗಿ ವಸ್ತುಗಳ ಚಿಲ್ಲರೆ ಮಾರಾಟ ಮಾಡುವ ಗುಂಪು ಇದಾಗಿದೆ.

Woman beats Corona : 158 ದಿನಗಳ ನಂತರ ಕೊರೋನಾ ಗೆದ್ದ ಕೊಪ್ಪಳದ ಮಹಿಳೆ

ಶರವಣ ಸ್ಟೋ​ರ್ಸ್ ಹೆಸರಿನ ಈ ಗುಂಪಿಗೆ ಸೇರಿದ 37 ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿದೆ. ಇವುಗಳಿಂದ ಕೆಲವು ದಾಖಲೆ ಪತ್ರಗಳು ಮತ್ತು ಅಕ್ರಮಕ್ಕೆ ಕಾರಣವಾಗಿರುವ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಗುಂಪು ಸುಮಾರು 1 ಸಾವಿರ ಕೋಟಿ ರು. ಅವ್ಯವಹಾರ ನಡೆಸಿವೆ. ಸುಮಾರು 150 ಕೋಟಿಗೂ ಅಧಿಕ ಲೆಕ್ಕಕ್ಕೆ ನೀಡಲಾಗದ ಹಣದಿಂದ ಆಭರಣಗಳನ್ನು ಕಳೆದ ಕೆಲವು ವರ್ಷಗಳಿಂದ ಖರೀದಿಸುತ್ತಿತ್ತು ಎಂದು ಐಟಿ ಇಲಾಖೆ ಹೇಳಿದೆ.

ಗನ್‌ ಹಿಡಿದು ಫೋಟೋಗೆ ಪೋಸ್‌ ನೀಡಿದ ಟಿಎಂಸಿ ನಾಯಕಿ:   ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಯಕಿಯೊಬ್ಬರು ಮಾಲ್ಡಾ ಜಿಲ್ಲೆಯ ತಮ್ಮ ಸರ್ಕಾರಿ ಕಚೇರಿಯಲ್ಲಿ ಕೈಯಲ್ಲಿ ಬಂದೂಕು ಹಿಡಿದು ಫೋಟೋಗೆ ಪೋಸ್‌ ನೀಡುವ ಮೂಲಕ ವಿವಾದಕ್ಕೀಡಾಗಿದ್ದಾರೆ.

ಓಲ್ಡ್‌ ಮಾಲ್ಡಾ ಪಂಚಾಯತ್‌ ಸಮಿತಿ ಹಾಗೂ ಮಾಲ್ಡಾದ ಜಿಲ್ಲಾ ಟಿಎಂಸಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮೃಣಾಲಿನಿ ಮೊಂಡಲ್‌ ಗನ್‌ ಹಿಡಿದು ಕಚೇರಿಯ ಚೇರ್‌ನಲ್ಲಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಇದು ಟಿಎಂಸಿ ಸಂಸ್ಕೃತಿ. ಈ ಬಗ್ಗೆ ಪರಿಶೀಲನೆ ನಡೆಸಿದರೆ ಆಕೆಯ ಬಳಿ ಪೊಲೀಸರಿಗೆ ರೈಫಲ್‌ ಮತ್ತು ಬಾಂಬ್‌ಗಳು ಸಿಗಬಹುದು ಎಂದು ಹೇಳಿದೆ.

click me!