ಆನ್​ಲೈನ್​ ಆರ್ಡರ್ ಮಾಡಿದ್ದೀರಾ?: ಕ್ವಿಕ್ ಡಿಲೆವರಿ ಸಿಕ್ಕಲ್ಲ ಬಿಡಿ!

Published : Feb 02, 2019, 06:41 PM IST
ಆನ್​ಲೈನ್​ ಆರ್ಡರ್ ಮಾಡಿದ್ದೀರಾ?: ಕ್ವಿಕ್ ಡಿಲೆವರಿ ಸಿಕ್ಕಲ್ಲ ಬಿಡಿ!

ಸಾರಾಂಶ

ಇ-ಕಾಮರ್ಸ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿ| ಆನ್​ಲೈನ್​ ಶಾಪಿಂಗ್ ಪ್ರೀಯರಿಗೆ ಕೇಂದ್ರ ಸರ್ಕಾರದಿಂದ ಶಾಕ್| ಹೊಸ ನೀತಿಯ ಪರಿಣಾಮವಾಗಿ ರದ್ದಾಗಲಿದೆ ಕ್ವಿಕ್ ಡಿಲೆವರಿ ಸೌಲಭ್ಯ?| ಹೊಸ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಜಾರಿಗೆ| ಸರ್ಕಾರದ ನಿರ್ಧಾರಕ್ಕೆ ಮಧ್ಯಮ ಉದ್ದಿಮೆದಾರರು ಫುಲ್ ಖುಷ್

ನವದೆಹಲಿ(ಫೆ.02): ಆನ್​ಲೈನ್​ ಶಾಪಿಂಗ್ ಪ್ರೀಯರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ.  ಇ-ಕಾಮರ್ಸ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದ್ದು, ಕ್ವಿಕ್ ಡಿಲೆವರಿ ಸೌಲಭ್ಯ ರದ್ದಾಗಲಿದೆ.

ಹೌದು, ಇನ್ನು ಮುಂದೆ ಆನ್​ಲೈನ್‌ನಲ್ಲಿ ಖರೀದಿಸಿದ ವಸ್ತುಗಳು ಗ್ರಾಹಕನಿಗೆ ತಲುಪಲು ಆಗಲು 4-7 ದಿನ ತೆಗೆದುಕೊಳ್ಳಲಿದೆ.

ಇ-ಕಾಮರ್ಸ್​​ನಲ್ಲಿ ಹೊಸ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಜಾರಿಗೆ ಬಂದಿದ್ದು, ಇದರನ್ವಯ ಕ್ವಿಕ್​ ಡೆಲಿವರಿ ಆಯ್ಕೆ ಸಿಗುವುದಿಲ್ಲ. ಇದು ಆನ್​ಲೈನ್​ ವಸ್ತುಗಳ ಮಾರಾಟ ತಾಣಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ.

ಅಷ್ಟೇ ಅಲ್ಲದೇ ಹೊಸ ನೀತಿಯ ಪರಿಣಾಮವಾಗಿ ಇ-ಕಾಮರ್ಸ್ ಸಂಸ್ಥೆಗಳು  ಡೆಲಿವರಿಗೆ ಹೆಚ್ಚಿನ ಶುಲ್ಕ ಪಡೆಯಲು ನಿರ್ಧರಿಸಿದ್ದು, ಇದು ಗ್ರಾಹಕರಿಗೆ ಕಸಿವಿಸಿ ತರಲಿದೆ ಎಂದು ಹೇಳಲಾಗಿದೆ.

ಹೊಸ ನೀತಿಯಿಂದಾಗಿ ಭಾರತದ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸೇರಿದಂತೆ ಹಲವು ಕಂಪನಿಗಳಿಗೆ ಭಾರೀ ಹೊಡೆತ ಬೀಳುವ ಸಂಭವ ಹೆಚ್ಚಿದ್ದು, ಈ ನೀತಿಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ. 

ಇತ್ತ ಕೇಂದ್ರ ಸರ್ಕಾರದ ಹೊಸ ನೀತಿಯಿಂದಾಗಿ ಮಧ್ಯಮ ಗಾತ್ರದ ಉದ್ದಿಮೆದಾರರು ಸಂತಸದಲ್ಲಿದ್ದಾರೆ. ಕಾರಣ ಆನ್‌ಲೈನ್ ವಹಿವಾಟಿನಿಂದ ಇವರಿಗೆ ನಷ್ಟ ಎದುರಾಗಿದ್ದು, ಇದೀಗ ಗ್ರಾಹಕರು ಮರಳಿ ಇವರತ್ತ ಬರಬಹುದು ಎಂಬ ಆಶಾವಾದ ಇದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTubeನಿಂದ ಗೋಲ್ಡನ್ ಪ್ಲೇ ಬಟನ್ ಪಡೆದ ನಂತ್ರ ಯೂಟ್ಯೂಬರ್‌ನ ಆದಾಯ ಎಷ್ಟಾಗುತ್ತೆ ಗೊತ್ತಾ?
ನಿರ್ಮಲಾ ಸೀತಾರಾಮನ್ ಭಾರತದ ನಂ.1 ಪ್ರಭಾವಿ ಮಹಿಳೆ: ವಿಶ್ವದ ಪ್ರಭಾವಿಗಳಲ್ಲಿ ಭಾರತದ ಮೂವರಿಗೆ ಸ್ಥಾನ