ಚೀನಾದ ಸ್ಮಾರ್ಟ್‌ಫೋನ್ ಸಂಸ್ಥೆಗೆ ಇಡಿ ಶಾಕ್‌: ಶಿಯೋಮಿಗೆ ಸೇರಿದ 5,551.27 ರೂ.ಜಪ್ತಿ

By Anusha KbFirst Published Apr 30, 2022, 3:50 PM IST
Highlights
  • ದೇಶದಿಂದ ಹೊರಕ್ಕೆ ಅಕ್ರಮ ಹಣ ವರ್ಗಾವಣೆ ಆರೋಪ
  • ಚೀನಾದ  ಸ್ಮಾರ್ಟ್‌ಫೋನ್  ಸಂಸ್ಥೆಗೆ ಇಡಿ ಶಾಕ್‌
  • ಶಿಯೋಮಿಗೆ ಸೇರಿದ 5,551.27 ಜಪ್ತಿ

ನವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ದೈತ್ಯ ಸಂಸ್ಥೆಗೆ ಭಾರತದ ಜಾರಿ ನಿರ್ದೇಶನಾಲಯವು ಶಾಕ್‌ ನೀಡಿದೆ. ಶಿಯೋಮಿಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿ ಹಣವಿದ್ದು ಅಕ್ರಮವಾಗಿ ಅದನ್ನು ಹೊರಕ್ಕೆ ಕಳುಹಿಸಿದ್ದಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

1999ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ₹ 5,551.27 ಕೋಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ. ಈ ಹಣವು ಚೀನಾದ ಸ್ಮಾರ್ಟ್‌ಫೋನ್ ಸಂಸ್ಥೆಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿದೆ ಎಂದು ತನಿಖಾ ಸಂಸ್ಥೆ ಹೇಳಿದೆ. ಅಕ್ರಮ ಹಣ ಹೊರಕ್ಕೆ ರವಾನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶಿಯೋಮಿಯ ಬ್ಯಾಂಕ್‌ ಖಾತೆಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. 

ED has seized Rs.5551.27 Crore of M/s Xiaomi Technology India Private Limited lying in the bank accounts under the provisions of Foreign Exchange Management Act, 1999 in connection with the illegal outward remittances made by the company.

— ED (@dir_ed)

ಕಂಪನಿಯ ವ್ಯವಹಾರ ಪ್ರಕ್ರಿಯೆಗಳು ಭಾರತೀಯ ವಿದೇಶಿ ವಿನಿಮಯ ಕಾನೂನುಗಳಿಗೆ ಅನುಗುಣವಾಗಿವೆಯೇ ಎಂದು ನಿರ್ಧರಿಸಲು ತನಿಖೆಯ ಭಾಗವಾಗಿ Xiaomi ಕಾರ್ಪ್‌ನ ಮಾಜಿ ಭಾರತೀಯ ಮುಖ್ಯಸ್ಥರನ್ನು ಸಂಸ್ಥೆಯು ಈ ತಿಂಗಳ ಆರಂಭದಲ್ಲಿ ವಿಚಾರಣೆಗೆ ಕರೆದಿತ್ತು ಎಂದು ಮೂಲಗಳು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ. ಇಡಿ ಎರಡು ತಿಂಗಳಿನಿಂದ ಕಂಪನಿಯ ಮೇಲೆ ತನಿಖೆ ನಡೆಸುತ್ತಿದೆ. ಭಾರತದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಅದು ಕೇಳಿತ್ತು. ಈ ವಿಚಾರದ ಬಗ್ಗೆ ಕೇಳಿದಾಗ ಉತ್ತರಿಸಲು ಮನು ಕುಮಾರ್ ಜೈನ್ ನಿರಾಕರಿಸಿದ್ದಾರೆ.

ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ಹೇಳಿರುವಂತೆ Xiaomi ಕಂಪನಿಯು ಎಲ್ಲಾ ಭಾರತೀಯ ಕಾನೂನುಗಳಿಗೆ ಬದ್ಧವಾಗಿದೆ ಮತ್ತು ಎಲ್ಲಾ ನಿಯಮಗಳನ್ನು ಸಂಪೂರ್ಣವಾಗಿ ಪೂರೈಸಿದೆ ಎಂದು ಹೇಳಿದೆ. ಅವರು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಹೊಂದಿದ್ದಾರೆಂದು ಖಚಿತಪಡಿಸಿಕೊಳ್ಳಲು ನಾವು ಅವರು ನಡೆಸುತ್ತಿರುವ ತನಿಖೆಗೆ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ.

ಪ್ರೀಮಿಯಂ Xiaomi 12 Pro 5G ಭಾರತದಲ್ಲಿ ಲಾಂಚ್: ಬೆಲೆ, ಫೀಚರ್ಸ್ ತಿಳಿಯಿರಿ

ರಾಯಿಟರ್ಸ್ ವರದಿಯ ಪ್ರಕಾರ Xiaomi ಇಂಡಿಯಾ, ಗುತ್ತಿಗೆ ತಯಾರಕರು ಮತ್ತು ಚೀನಾದಲ್ಲಿ ಮೂಲ ಘಟಕದ ನಡುವೆ ಅಸ್ತಿತ್ವದಲ್ಲಿರುವ ವ್ಯವಹಾರ ರಚನೆಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ರಾಯಲ್ಟಿ ಪಾವತಿಗಳನ್ನು ಒಳಗೊಂಡಂತೆ Xiaomi ಇಂಡಿಯಾ ಮತ್ತು ಅದರ ಮೂಲ ಘಟಕದ ನಡುವಿನ  ನಿಧಿಯ ಹರಿವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ರಾಯಿಟರ್ಸ್‌ಗೆ ಮೂಲವೊಂದು ತಿಳಿಸಿದೆ. Xiaomiಯೂ 2021 ರಲ್ಲಿ 24% ಮಾರುಕಟ್ಟೆ ಪಾಲನ್ನು ಹೊಂದಿರುವ ಭಾರತದ ಅಗ್ರ ಸ್ಮಾರ್ಟ್‌ಫೋನ್ ಮಾರಾಟಗಾರ ಸಂಸ್ಥೆಯಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ; ಜಾಕ್ವೆಲಿನ್ ಫರ್ನಾಂಡಿಸ್ ಅವರ 7 ಕೋಟಿ ಮೌಲ್ಯದ ಆಸ್ತಿ ಜಪ್ತಿ

click me!