ಮೇ 3ಕ್ಕೆ ಅಕ್ಷಯ ತೃತೀಯ; ನೀವು ಪೇಟಿಎಂ, ಗೂಗಲ್ ಪೇಯಲ್ಲಿ digital gold ಖರೀದಿಸಬಹುದಲ್ವಾ? ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

By Suvarna NewsFirst Published Apr 30, 2022, 12:54 PM IST
Highlights

*ಚಿನ್ನ ಖರೀದಿಗೆ ಅಕ್ಷಯ ತೃತೀಯ ಶುಭದಿನ
*ಆನ್ ಲೈನ್ ನಲ್ಲಿ ಡಿಜಿಟಲ್ ಗೋಲ್ಡ್ ಖರೀದಿಸಬಹುದು
*ಪೇಟಿಎಂ, ಗೂಗಲ್ ಪೇ ಮೂಲಕ ಮೊಬೈಲ್ ನಲ್ಲೇ ಡಿಜಿಟಲ್ ಗೋಲ್ಡ್ ಖರೀದಿಸಬಹುದು

ನವದೆಹಲಿ (ಏ.30): ಹೂಡಿಕೆ, ಹೊಸ ಉದ್ಯಮ, ಚಿನ್ನ, ಬೆಳ್ಳಿ ಹಾಗೂ ಆಸ್ತಿ ಖರೀದಿಗೆ ಶುಭದಿನ, ಶುಭ ಮುಹೂರ್ತ ಹುಡುಕುವುದು ಹಿಂದೂ ಸಂಪ್ರದಾಯದಲ್ಲಿ ಸಾಮಾನ್ಯ. ಆದ್ರೆ ಈ ಎಲ್ಲ ಕೆಲಸಗಳಿಗೂ ವರ್ಷದ ಒಂದು ದಿನ ಅತ್ಯಂತ ಶುಭಕರ ಎಂದು ಪರಿಗಣಿಸಲಾಗುತ್ತದೆ. ಆ ಶುಭ ದಿನವೇ ಅಕ್ಷಯ ತೃತೀಯ. ಈ ವರ್ಷ ಮೇ 3ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನ ನೀವು ಚಿನ್ನ ಖರೀದಿಸಲು ಯೋಚಿಸಿದ್ರೆ ಡಿಜಿಟಲ್ ಗೋಲ್ಡ್ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವುದು ಉತ್ತಮ.

ಹಿಂದೂ ಪುರಾಣದ ಪ್ರಕಾರ 'ಅಕ್ಷಯ ತೃತೀಯ' ಚಿನ್ನದ ಯುಗದ ಪ್ರಾರಂಭದ ಸಂಕೇತ. ಈ ದಿನದಂದು ಶ್ರೀಕೃಷ್ಣ ದ್ರೌಪದಿಗೆ ಒಂದು 'ಪತ್ರ' (ಎಲೆ) ನೀಡಿದ್ದ. ಅದರಿಂದ ಆಕೆ ಅಜ್ಞಾತವಾಸದಲ್ಲಿದ್ದ ಪಾಂಡವರಿಗೆ ದೊಡ್ಡ ಪ್ರಮಾಣದಲ್ಲಿ ಆಹಾರ ಒದಗಿಸಲು ಸಾಧ್ಯವಾಯಿತು ಎಂಬ ನಂಬಿಕೆಯಿದೆ. ಕಳೆದ ಕೆಲವು ದಶಕಗಳಿಂದ  ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಟ್ರೆಂಡ್ ಆಗಿದೆ. ಪರಿಣಾಮ ಈ ದಿನ ಚಿನ್ನ ಖರೀದಿಗೆ ಜ್ಯುವೆಲ್ಲರಿ ಶಾಪ್ ಗಳಿಗೆ ಜನ ಮುಗಿಬೀಳುವುದು ಕಾಮನ್. ಆದ್ರೆ ಕೋವಿಡ್-19 ಕಾರಣದಿಂದ ಕಳೆದೆರಡು ವರ್ಷಗಳಿಂದ ಜ್ಯುವೆಲ್ಲರಿ ಶಾಪ್ ಗಳಿಗೆ ಭೇಟಿ ನೀಡಿ ಚಿನ್ನ ಖರೀದಿಸುವರ ಸಂಖ್ಯೆ ಕಡಿಮೆಯಾಗಿದೆ. ಈ ವರ್ಷ ಕೂಡ ದೇಶದಲ್ಲಿ ಕೊರೋನಾ 4ನೇ ಅಲೆ ಭೀತಿ ಮನೆ ಮಾಡಿದೆ. ಅಲ್ಲದೆ, ಕೆಲವರಿಗೆ ಸಮಯದ ಅಭಾವದಿಂದ ಕೂಡ ಶಾಪ್ ಗೆ ತೆರಳಿ ಚಿನ್ನ ಖರೀದಿಸೋದು ಕಷ್ಟವಾಗಬಹುದು. ಇಂಥವರು ಆನ್ ಲೈನ್ ನಲ್ಲೇ ಡಿಜಿಟಲ್ ಗೋಲ್ಡ್ ಖರೀದಿಸುವ ಬಗ್ಗೆ ಯೋಚಿಸಬಹುದು.

E-Commerce: ಚಿಲ್ಲರೆ ವ್ಯಾಪಾರಕ್ಕೆ ಸರ್ಕಾರಿ ಆ್ಯಪ್‌: ಎಲ್ಲವೂ ಇದರಲ್ಲಿ ಲಭ್ಯ..!

ಏನಿದು ಡಿಜಿಟಲ್ ಗೋಲ್ಡ್?
ಡಿಜಿಟಲ್ ಗೋಲ್ಡ್ ವರ್ಚುವಲ್ ಚಿನ್ನ. ಅಂದ್ರೆ ಈ ಚಿನ್ನ ನಿಮಗೆ ಭೌತಿಕ ರೂಪದಲ್ಲಿ ಸಿಗೋದಿಲ್ಲ. ಆದ್ರೆ ಭೌತಿಕ ಚಿನ್ನದ ಮಾದರಿಯಲ್ಲೇ ನೀವು ಇದನ್ನು ಮಾರಾಟ ಮಾಡಬಹುದು. ಡಿಜಿಟಲ್ ಚಿನ್ನವನ್ನು ಯಾರಾದ್ರೂ ಕದಿಯುವ ಭಯವಿಲ್ಲ. ಹೀಗಾಗಿ ಭೌತಿಕ ಚಿನ್ನದಂತೆ ಅದರ ಸುರಕ್ಷತೆಯ ಬಗ್ಗೆ ಯೋಚಿಸಬೇಕಾದ ಅಗತ್ಯವಿಲ್ಲ. ಇನ್ನು ಪರಿಶುದ್ಧತೆಯ ವಿಷಯಕ್ಕೆ ಬಂದ್ರೆ ಡಿಜಿಟಲ್ ಗೋಲ್ಡ್ 24 ಕ್ಯಾರಟ್ ಅಥವಾ 99.5 ಶುದ್ಧ ಚಿನ್ನವಾಗಿದೆ. 

ಖರೀದಿಸೋದು ಹೇಗೆ?
ಎಚ್ ಡಿಎಫ್ ಸಿ ಸೆಕ್ಯುರಿಟೀಸ್ (HDFC Securities),ಜಿ-ಪೇ (G-Pay),ಮೋತಿಲಾಲ್ ಒಸ್ವಾಲ್ (Motilal Oswal)ಮುಂತಾದ ಸೈಟ್ ಗಳ ಮೂಲಕ ಡಿಜಿಟಲ್ ಗೋಲ್ಡ್ ಖರೀದಿಸಬಹುದು. ಅಲ್ಲದೆ, ಪೇಟಿಎಂ (PayTM ) ಹಾಗೂ ಗೂಗಲ್ ಅಪ್ಲಿಕೇಷನ್ (Google apps) ಮೂಲಕ ಮೊಬೈಲ್ ನಲ್ಲೇ ಖರೀದಿ ಮಾಡಲು ಸಾಧ್ಯವಿದೆ.

ಪೇಟಿಎಂನಲ್ಲಿ ಹೇಗೆ?
*ನಿಮ್ಮ ಮೊಬೈಲ್ ನಲ್ಲಿ ಪೇಟಿಎಂ ಅಪ್ಲಿಕೇಷನ್ ತೆರೆಯಿರಿ.
*ಆಲ್ ಸರ್ವೀಸ್ ಸೆಕ್ಷನ್ ಗೆ ಹೋಗಿ
*ಸರ್ಚ್ ಬಾರ್ ಗೆ ಹೋಗಿ ಟರ್ಮ್ ಗೋಲ್ಡ್ ಎಂದು ಹುಡುಕಿ
*ಈಗ ಗೋಲ್ಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
*Buy in Amount or Buy in Grams ಆಯ್ಕೆಗಳಲ್ಲಿ ಒಂದನ್ನು ಆರಿಸಿ.
*ನೀವು ಎಷ್ಟು ಮೊತ್ತದ ಚಿನ್ನ ಖರೀದಿಸಲು ಬಯಸುತ್ತೀರಿ ಎಂಬುದನ್ನು ನಮೂದಿಸಿ.  Proceed ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ಡಿಜಿಟಲ್ ಗೋಲ್ಡ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿ. ಪೇಟಿಎಂ ವ್ಯಾಲೆಟ್, ಯುಪಿಐ, ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ.

LIC IPO ದಿನಾಂಕ ಘೋಷಣೆ ಆಗುತ್ತಿದ್ದಂತೆ GMP ಭರ್ಜರಿ ಏರಿಕೆ!

ಗೂಗಲ್ ಪೇ ಮೂಲಕ ಖರೀದಿ ಹೇಗೆ?
*ಗೂಗಲ್ ಪೇ ಮೇಲೆ ಕ್ಲಿಕ್ ಮಾಡಿ.
*ನ್ಯೂ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಸರ್ಚ್ ಬಾರ್ ನಲ್ಲಿ 'Gold Locker'ನಮೂದಿಸಿ ಸರ್ಚ್ ಕೊಡಿ.
*ಈಗ Gold Locker ಮೇಲೆ ಕ್ಲಿಕ್ ಮಾಡಿ.
*Buy ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ಈಗ ಚಿನ್ನದ ಪ್ರಸಕ್ತ ಮಾರುಕಟ್ಟೆ ಖರೀದಿ ಬೆಲೆ ಕಾಣಿಸುತ್ತದೆ.
*ಈ ಬೆಲೆ 5 ನಿಮಿಷಗಳ ಕಾಲ ಲಾಕ್ ಆಗಿರುತ್ತದೆ. ಖರೀದಿ ಬೆಲೆ ದಿನವಿಡೀ ಬದಲಾಗಬಹುದು.
*Check mark Tick mark ಮೇಲೆ ಕ್ಲಿಕ್ ಮಾಡಿ.
*ನೀವು ಬಯಸೋ ಪಾವತಿ ವಿಧಾನ ಆಯ್ಕೆ ಮಾಡಿ.
*Proceed to pay ಮೇಲೆ ಕ್ಲಿಕ್ ಮಾಡಿ.

click me!