ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದೆ. ಜನರು ದಂಡು ದಂಡಾಗಿ ಬರ್ತಿದ್ದು ಅವರಿಗೆ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದೆ. ಆದ್ರೆ ಬ್ರಿಟಿಷ್ ಕಾಲದಲ್ಲಿ ಇದು ವ್ಯವಹಾರವಾಗಿತ್ತು. ಭಕ್ತರಿಂದ ತೆರಿಗೆ ವಸೂಲಿ ಮಾಡ್ತಿತ್ತು ಸರ್ಕಾರ. ಆಗ ಒಂದು ರೂಪಾಯಿ ಮೌಲ್ಯ ಎಷ್ಟಿತ್ತು ಗೊತ್ತಾ?
ಒಂದು ರೂಪಾಯಿ (One rupee) ಹಿಡಿದು ಅಂಗಡಿಗೆ ಹೋದ್ರೆ ಜನ ನಗ್ತಾರೆ. ಈ ಒಂದು ರೂಪಾಯಿಯಲ್ಲಿ ಏನ್ ಸಿಗುತ್ತೆ ಅಂತ ಮಕ್ಕಳು ಕೇಳ್ತಾರೆ. ಒಂದೊಂದು ರೂಪಾಯಿ ಕೂಡಿ ಲಕ್ಷವಾದ್ರೂ ಈ ಒಂದು ರೂಪಾಯಿಗೆ ಬೆಲೆ ಇಲ್ಲ ಎನ್ನುವಂತಾಗಿದೆ. ಹಿಂದಿನ ಕಾಲದಲ್ಲಿ ಪೈಸೆಗಳ ಲೆಕ್ಕವಾಗಿತ್ತು. ಒಂದು ಪೈಸೆಯಿಂದ ಹಿಡಿದು, ಹತ್ತು ಪೈಸೆ, 25 ಪೈಸೆ, 50 ಪೈಸೆ ಹೀಗೆ ಈ ಪೈಸೆಗೂ ಆಹಾರ ವಸ್ತುಗಳು ಸಿಗ್ತಾ ಇದ್ವು. ಒಂದು ರೂಪಾಯಿ ಹಿಡಿದು ಮಾರ್ಕೆಟ್ ಗೆ ಹೊರಟ್ರೆ ಆತ ಶ್ರೀಮಂತ. ಬ್ಯಾಗ್ ತುಂಬಾ ವಸ್ತುಗಳು ಬರೋದು ಗ್ಯಾರಂಟಿಯಾಗಿತ್ತು.
1822ರ ಸಮಯದಲ್ಲಿ ನಮ್ಮನ್ನು ಆಳ್ತಾ ಇದ್ದಿದ್ದು ಬ್ರಿಟಿಷರು (British). ಅವರು ನೀಡ್ತಾ ಇದ್ದ ಅತೀ ಹೆಚ್ಚು ಸಂಬಳವೇ 10 ರೂಪಾಯಿ. ಹಾಗಾಗಿ ಆ ದಿನಗಳಲ್ಲಿ ಒಂದು ರೂಪಾಯಿ ದೊಡ್ಡ ಮೊತ್ತವಾಗಿತ್ತು. ಒಬ್ಬ ದರ್ಜಿಗೆ ತಿಂಗಳಿಗೆ ಕೇವಲ 8 ರೂಪಾಯಿ ಸಂಬಳ ಸಿಗ್ತಾ ಇತ್ತು. ಇನ್ನು ಕಸ ಗುಡಿಸುವವನು ತಿಂಗಳಿಗೆ 4 ರೂಪಾಯಿ ಪಡೆಯುತ್ತಿದ್ದ. ಒಂದು ರೂಪಾಯಿ ಅಂದ್ರೆ ಅಷ್ಟೊಂದಾ ಎನ್ನುವ ಜನರೇ ಆಗ ನಮ್ಮಲ್ಲಿ ಹೆಚ್ಚಿದ್ದರು. ಒಂದು ರೂಪಾಯಿ ಕೂಡಿಡಲು ಸಾಕಷ್ಟು ಕಷ್ಟಪಡಬೇಕಿತ್ತು. ಹಾಗಿರುವಾಗ ಇದನ್ನೇ ಬ್ರಿಟಿಷರು ಬಂಡವಾಳ ಮಾಡ್ಕೊಂಡಿದ್ದರು.
ಜೆಡಬ್ಲ್ಯು ಕೆಲ್ಲಿ ಅವರ ಸಹಿ ಇರುವ 1 ರೂಪಾಯಿ ನೋಟು ನಿಮ್ಮಲಿದ್ಯಾ? ಇದ್ದಲ್ಲಿ ಲಕ್ಷಾಧಿಪತಿ ಆಗಬಹುದು..
ಕುಂಭ ಮೇಳ (Kumbh Mela ) ದಲ್ಲಿ ಒಂದು ರೂಪಾಯಿ ತೆರಿಗೆ : ಆ ಸಮಯದಲ್ಲಿ ಬ್ರಿಟಿಷರು ಕುಂಭ ಮೇಳವನ್ನೇ ವ್ಯವಹಾರವಾಗಿ ಬದಲಿಸಿಕೊಂಡರು. ಅವರಿಗೆ ಧಾರ್ಮಿಕ ಪದ್ಧತಿಗಳು ಬೇಕಾಗಿರಲಿಲ್ಲ. ಹಣ ಮಾತ್ರ ಬೇಕಾಗಿತ್ತು. ಭಾರತೀಯರಿಗೆ ಹಿಂಸೆ ನೀಡುವ ಉದ್ದೇಶದಿಂದ ಕುಂಭ ಮೇಳಕ್ಕೆ ಬರುವವರಿಂದ ಒಂದು ರೂಪಾಯಿ ತೆರಿಗೆ ವಸೂಲಿ ಮಾಡಿದ್ದರು. ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು ಅಂದ್ರೆ ಭಕ್ತರು ತೆರಿಗೆ ರೂಪದಲ್ಲಿ ಒಂದು ರೂಪಾಯಿ ನೀಡಬೇಕಾಗಿತ್ತು. ಯುನೈಟೆಡ್ ಕಿಂಗ್‌ಡಂನ ವೇಲ್ಸ್‌ನಲ್ಲಿ ಜನಿಸಿದ್ದ ಫ್ಯಾನಿ ಪಾರ್ಕ್ಸ್, 1806 ರಲ್ಲಿ ಈ ತೆರಿಗೆ ಪದ್ಧತಿ ಜಾರಿಗೆ ತಂದಿದ್ದ. ಕುಂಭಮೇಳಕ್ಕೆ ಬರುವ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಅದರ ಮೇಲೂ ತೆರಿಗೆ ವಿಧಿಸಲು ಈಸ್ಟ್ ಇಂಡಿಯಾ ಕಂಪನಿ ಮುಂದಾಗಿತ್ತು. ಇದು ಸಾಕಷ್ಟು ವಿರೋಧಕ್ಕೂ ಕಾರಣವಾಗಿತ್ತು. ತೆರಿಗೆ ಕಾರಣಕ್ಕೆ ಕುಂಭ ಮೇಳಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಅದನ್ನೇ ನಂಬಿ ಜೀವನ ನಡೆಸುತ್ತಿದ್ದ ಸ್ಥಳೀಯರಿಗೆ ಇದ್ರಿಂದ ತೊಂದರೆಯಾಗಿತ್ತು. ಮುಂದೆ ಸ್ವಾತಂತ್ರ್ಯ ಹೋರಾಟಕ್ಕೆ ಇದೂ ಒಂದು ಕಾರಣವಾಯ್ತು.
Hindu Tradition: ಉಡುಗೊರೆ ಹಣದೊಂದಿಗೆ ಹೆಚ್ಚುವರಿ 1 ರುಪಾಯಿ ನೀಡುವುದೇಕೆ?
ಒಂದು ರೂಪಾಯಿ ನೋಟು ಜಾರಿಗೆ ಬಂದಿದ್ದು ಯಾವಾಗ? : ನಾಣ್ಯಗಳಲ್ಲಿಯೇ ನಡೆಯುತ್ತಿದ್ದ ವ್ಯವಹಾರ 1917ರಲ್ಲಿ ನೋಟಿಗೆ ಪರಿವರ್ತನೆಯಾಯ್ತು. 1917ರಲ್ಲಿ ಒಂದು ರೂಪಾಯಿಯನ್ನು ಮುದ್ರಣ ಮಾಡಲಾಯ್ತು. ಒಂದು ರೂಪಾಯಿ ನೋಟು ಈಗಿನ 390 ರೂಪಾಯಿಗೆ ಸಮನಾಗಿತ್ತು. ಮೊದಲ ಮಹಾಯುದ್ಧದ ಸಮಯ ಮತ್ತು ದೇಶವನ್ನು ಬ್ರಿಟಿಷರು ಆಳುತ್ತಿದ್ದ ಆ ಸಮಯದಲ್ಲಿ ಬೆಳ್ಳಿಯಿಂದ ಮಾಡಲ್ಪಟ್ಟ ಒಂದು ರೂಪಾಯಿ ನಾಣ್ಯ ಇತ್ತು. ಯುದ್ಧದ ಕಾರಣದಿಂದಾಗಿ, ಸರ್ಕಾರಕ್ಕೆ ಬೆಳ್ಳಿ ನಾಣ್ಯ ತಯಾರಿಸಲು ಸಾಧ್ಯವಾಗ್ತಿರಲಿಲ್ಲ. ಹಾಗಾಗಿ 1917 ರಲ್ಲಿ ಮೊದಲ ಬಾರಿಗೆ ಒಂದು ರೂಪಾಯಿ ನೋಟನ್ನು ಮುದ್ರಿಸಲಾಯ್ತು.
ಬಟ್ಟೆ, ಅಕ್ಕಿ, ಗೋದಿ, ಚಪ್ಪಲಿ ಸೇರಿದಂತೆ ಅಗತ್ಯ ವಸ್ತುಗಳೆಲ್ಲ ಆಗ ಒಂದು ರೂಪಾಯಿಗೆ ಸಿಗ್ತಿದ್ದವು. ಸ್ವಂತ ಮನೆ, ಆಸ್ತಿಯನ್ನು ಇದೇ ಹಣಕ್ಕೆ ಖರೀದಿ ಮಾಡಿದವರಿದ್ದಾರೆ. ಆದ್ರೀಗ ಒಂದು ರೂಪಾಯಿಗೆ ಏನ್ ಸಿಗುತ್ತೆ ಎಂಬುದನ್ನು ಹುಡುಕುವ ಸ್ಥಿತಿ ಇದೆ. ಅತಿ ಅಪರೂಪಕ್ಕೆ ಶಾಂಪೂ ಸ್ಯಾಚೆಟ್, ಕ್ಯಾಂಡೀಸ್ ಸೇರಿದಂತೆ ಕೆಲವೇ ಕೆಲವು ವಸ್ತುಗಳು ನಿಮಗೆ ಒಂದು ರೂಪಾಯಿಗೆ ಸಿಗ್ತಿದೆ.