
ವಾಷಿಂಗ್ಟನ್(ಏ.22): ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಈ ಹಿಂದೆ ನೀಡಲಾಗಿದ್ದ ನಿರ್ಬಂಧ ವಿನಾಯ್ತಿಯನ್ನು ಮುಂದುವರೆಸಲು ಅಮೆರಿಕ ಸ್ಪಷ್ಟವಾಗಿ ನಿರಾಕರಿಸಿದೆ.
ಇರಾನ್ ಮೇಲಿನ ನವೆಂಬರ್ 4 ರ ತನ್ನ ನಿರ್ಬಂಧದ ಹೊರತಾಗಿಯೂ ಭಾರತ ತೈಲ ಆಮದು ಮಾಡಿಕೊಳ್ಳಬಹುದು ಎಂದು ಅಮೆರಿಕ ಈ ಹಿಂದೆ ಘೋಷಿಸಿತ್ತು.
ಆದರೆ ಈ ವಿನಾಯ್ತಿಯನ್ನು ಮುಂದುವರೆಸಲು ಅಮೆರಿಕ ನಿರಾಕರಿಸಿದ್ದು, ಭಾರತದ ಮೇಲೆ ಇದರಿಂದ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ, ಅಮೆರಿಕದ ಈ ನಿರ್ಧಾರದಿಂದಾಗಿ ಬೀರಬಹುದಾದ ಪರಿಣಾಮದ ಕುರಿತು ವಿಶ್ಲೇಷಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.
ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರಗಳಾದ ಚೀನಾ, ಜಪಾನ್, ದ.ಕೋರಿಯಾ, ಭಾರತ ಸೇರಿದಂತೆ ಎಲ್ಲಾ ಪ್ರಮುಖ 8 ರಾಷ್ಟ್ರಗಳಿಗೆ ಈ ನಡೆಯಿಂದ ದೊಡ್ಡ ನಿರಾಳತೆ ಸಿಕ್ಕಂತಾಗಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.