ಸ್ಯಾಲರಿ, EMI ಪಾವತಿ, ಪೆನ್ಶನ್ ಪಡೆಯಲು ಆಗಸ್ಟ್ 1 ರಿಂದ RBI ಹೊಸ ನೀತಿ!

By Suvarna NewsFirst Published Jul 23, 2021, 3:50 PM IST
Highlights
  • ವೇತನ, ಪಿಂಚಣಿ, ಕಂತು ಪಾವತಿ ನಿಯಮ ಬದಲಿಸಿದ  RBI 
  • ಆಗಸ್ಟ್ 1 ರಿಂದ ಹೊಸ ನೀತಿ ಜಾರಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್
  • NACH ನೀತಿಯಲ್ಲಿ ಮಹತ್ತರ ಬದಲಾವಣೆ 

ನವದೆಹಲಿ(ಜು.23):  ವೇತನ ಪಡೆಯಲು, ಪಿಂಚಣಿ ಖಾತೆಗೆ ಜಮೆ ಆಗಲು, ಸಾಲದದ ಕಂತು ಪಾವತಿಸಲು ಇದ್ದ ಹಳೇ ನಿಯಮವನ್ನು ಭಾರತೀಯ ರಿಸರ್ವ್ ಬ್ಯಾಂಕ್(RBI)ಬದಲಿಸಿದೆ. ಆಗಸ್ಟ್ 1 ರಿಂದ ನೂತನ ನಿಯಮ ಜಾರಿಯಾಗುತ್ತಿದೆ. ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (NACH) ನೀತಿಯಲ್ಲಿ RBI ಬದಲಾವಣೆ ತಂದಿದೆ. ಪರಿಣಾಮ ಈ ಹಿಂದಿದ್ದ ತೊಡಕುಗಳು ನಿವಾರಣೆಯಾಗಿದೆ.

ರಿಯಲ್‌ ಎಸ್ಟೇಟ್‌ನಲ್ಲಿ ಹಣ ತೊಡಗಿಸೋ ಮುನ್ನ ಇವಿಷ್ಟು ವಿಚಾರ ಗಮನಿಸಿ

ಇಲ್ಲೀವರೆಗೆ ಸ್ಯಾಲರಿ ಪಡೆಯಲು, ಪೆನ್ಶನ್ ಪಡೆಯಲು, ಕಂತು ಪಾವತಿಸಲು ಬ್ಯಾಂಕ್ ಕೆಲಸದ ದಿನ(Bank Working day) ಮಾತ್ರ ಸಾಧ್ಯವಾಗುತ್ತಿತ್ತು. ಬ್ಯಾಂಕ್ ರಜಾ ದಿನವಾದರೆ ಸ್ಯಾಲರಿ ದಿನಾಂಕ ಬದಲಾಗಲಿದೆ, ಪಿಂಚಣಿ ಕೈಸೇರುವುದಿಲ್ಲ. ಸಾಲದ ಕಂತು ಪಾವತಿಯಾಗುವುದಿಲ್ಲ ಇದರಿಂದ ಫೈನ್ ಅಥವಾ ಪೆನಾಲ್ಟಿ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಆಗಸ್ಟ್ 1 ರಿಂದ ಬ್ಯಾಂಕ್ ರಜಾದಿನವಾದರೂ ಸ್ಯಾಲರಿ ಖಾತೆಗೆ ಜಮೆ ಆಗಲಿದೆ. ಪಿಂಚಣಿ, ಸಾಲದ ಕಂತು ಯಾವುದೇ ಅಡೆ ತಡೆ ಇಲ್ಲದೆ ಪಾವತಿಯಾಗಲಿದೆ.

National Automated Clearing House (NACH) ಸೇವೆಗಳು ಸದ್ಯ ಇತರ ರಜಾದಿನ ಹೊರತುಪಡಿಸಿ ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಲಭ್ಯವಿದೆ. RBI ನಿರ್ಧಾರದಿಂದ ಇದೀಗ ವಾರದ ಏಳು ದಿನಗಳಲ್ಲಿ NACH ಸೇವೆ ಲಭ್ಯವಾಗಲಿದೆ. ಇದರಿಂದ ನಿಮ್ಮ ಸ್ಯಾಲರಿ ದಿನಾಂಕ ಭಾನುವಾರ ಇದೆ ಎಂದು ಆತಂಕ, ನಿರಾಸೆ ಪಡಬೇಕಿಲ್ಲ. ಆಗಸ್ಟ್ 1 ರಿಂದ ಭಾನುವಾರವೂ ಸ್ಯಾಲರಿ ಕ್ರೆಡಿಟ್ ಆಗಲಿದೆ.

ಮ್ಯೂಚುವಲ್‌ ಫಂಡ್‌ ಮೇಲೆ ಸಾಲ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

ಗ್ರಾಹಕರ ಕ್ರೆಡಿಟ್ ನೀತಿ ಪರಿಶೀಲನೆಯ ಸಂದರ್ಭದಲ್ಲಿ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಗ್ರಾಹಕರ ಅನುಕೂಲವನ್ನು ಇನ್ನಷ್ಟು ಹೆಚ್ಚಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಹಕರಿಗೆ 24x7 ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್(RTGS) ವಾರದ ಎಲ್ಲಾ ದಿನ ಕಾರ್ಯನಿರ್ವಹಿಸಲಿದೆ.

NACH ಭಾರತದ ಪಾವತಿ ನಿಗಮ(NPCI) ನಿರ್ವಹಿಸುವ ಬೃಹತ್ ಪಾವತಿ ವ್ಯವಸ್ಥೆಯಾಗಿದೆ. ಈ ಪಾವತಿ ವ್ಯವಸ್ಥೆಯೂ ಲಾಭಾಂಶ, ಬಡ್ಡಿ, ಸಂಬಳ ಮತ್ತು ಪಿಂಚಣಿಯಂತಹ ವಿವಿಧ ರೀತಿಯ ಸಾಲ ವರ್ಗಾವಣೆಗಳನ್ನು ನಿರ್ವಹಿಸುತ್ತದೆ. ಇದರ ಜೊತೆಗೆ ವಿದ್ಯುತ್ ಬಿಲ್, ಗ್ಯಾಸ್, ಟೆಲಿಫೋನ್, ನೀರು, ಸಾಲದ ಕಂತು ಮ್ಯೂಚುವಲ್ ಫಂಡ್ ಹೂಡಿಕೆ ಮತ್ತು ವಿಮಾ ಪ್ರೀಮಿಯಂ ಪಾವತಿ ಸೌಲಭ್ಯವನ್ನು ನಿರ್ವಹಿಸುತ್ತದೆ. ಇಷ್ಟು ಈ ಸೌಲಭ್ಯಗಳು ಸೋಮವಾರದಿಂದ ಶುಕ್ರವಾರದ ವರೆದೆ ಬ್ಯಾಂಕ್ ದಿನ ಮಾತ್ರ ಲಭ್ಯವಿತ್ತು. ಇನ್ನು ಮುಂದೆ ಎಲ್ಲಾ ದಿನ ಈ ಸೌಲಭ್ಯಗಳು ಲಭ್ಯವಿದೆ.

click me!