ನೀತಾ ಅಂಬಾನಿ ಬಳಸುವ ದುಬಾರಿ ಬೆಲೆಯ ವಸ್ತುಗಳು ಆಗಾಗ ಸುದ್ದಿಯಾಗುತ್ತಲಿರುತ್ತವೆ. ಈಗ ಅವರ ವಾಟರ್ ಬಾಟಲ್ ಸರದಿ. ನೀತಾ ಬಳಸುತ್ತಾರೆ ಎನ್ನಲಾದ ವಿಶೇಷ ವಿನ್ಯಾಸದ ಚಿನ್ನದ ವಾಟರ್ ಬಾಲ್ ಹಾಗೂ ಅದರಲ್ಲಿನ ಗೋಲ್ಡ್ ವಾಟರ್ ಈಗ ಎಲ್ಲರ ಗಮನ ಸೆಳೆದಿದೆ.
ಅಂಬಾನಿ ಕುಟುಂಬ ಎಂದ ಮೇಲೆ ಅಲ್ಲಿ ಅದ್ದೂರಿತನಕ್ಕೆ ಕಡಿಮೆಯೇನಿಲ್ಲ. ಅದರಲ್ಲೂ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಅವರಂತೂ ಐಷಾರಾಮಿ ಜೀವನಶೈಲಿಯ ಕಾರಣದಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ನೀತಾ ಅಂಬಾನಿ ಪ್ರತಿದಿನ ಬಳಸೋ ಪ್ರತಿ ವಸ್ತುಗಳಲ್ಲೂ ಅದ್ದೂರಿತನ ಎದ್ದು ತೋರುತ್ತದೆ. ಇದೀಗ ನೀತಾ ಅಂಬಾನಿ ಕುಡಿಯುವ ನೀರಿನ ಬಗ್ಗೆ ಕೂಡ ಚರ್ಚೆಯಾಗುತ್ತಿದೆ. ಅಂದಹಾಗೇ ಇತ್ತೀಚೆಗೆ ನೀತಾ ಅಂಬಾನಿ ಸುಂದರವಾದ ವಿಶೇಷ ವಿನ್ಯಾಸದ ವಾಟರ್ ಬಾಟಲಿಯಲ್ಲಿ ನೀರು ಕುಡಿಯುತ್ತಿರುವ ಫೋಟೋ ವೈರಲ್ ಆಗಿತ್ತು. ಈ ವಾಟರ್ ಬಾಟಲ್ ಬಗ್ಗೆ, ಅದರೊಳಗಿನ ನೀರಿನ ಬೆಲೆಯ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಅಂದಹಾಗೇ ಈ ವಾಟರ್ ಬಾಟಲ್ 24 ಕ್ಯಾರಟ್ ಚಿನ್ನದಿಂದ ಮಾಡಲ್ಪಟ್ಟಿದ್ದು, ಅದರ ಬೆಲೆ ಕೇಳಿದ್ರೆ ಅಚ್ಚರಿಯಾಗೋದು ಖಂಡಿತಾ. ಏಕೆ ಗೊತ್ತಾ? ಆ ವಾಟರ್ ಬಾಟಲ್ ಬೆಲೆ ಬರೋಬ್ಬರಿ 49 ಲಕ್ಷ ರೂ. ಹಾಗಾದ್ರೆ ಈ ವಾಟರ್ ಬಾಟಲ್ ನಲ್ಲಿ ಅಂಥದ್ದೇನಿದೆ? ಅದರಲ್ಲಿರೋ ನೀರಿನ ವಿಶೇಷತೆಯೇನು? ಇಲ್ಲಿದೆ ಮಾಹಿತಿ.
ಈ ನೀರು ಎಲ್ಲಿಯದು?
ನೀತಾ ಅಂಬಾನಿ ಕುಡಿಯುವ ನೀರನ್ನು 'ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ' ಎಂದು ಕರೆಯಲಾಗುತ್ತದೆ. ಈ ನೀರನ್ನು ಗ್ರಾಹಕರು ಬಯಸಿದ ವಿನ್ಯಾಸದಲ್ಲಿ ಖ್ಯಾತ ಡಿಸೈನರ್ ಫೆರ್ನಾನ್ಡೋ ಅಲ್ಟಮಿರಾನೋ ವಿನ್ಯಾಸಗೊಳಿಸಿದ ಬಾಟಲ್ ನಲ್ಲಿ ನೀಡಲಾಗುತ್ತದೆ. ಈ ಬಾಟಲ್ 24 ಕ್ಯಾರಟ್ ಚಿನ್ನದ ಕವರ್ ಹೊಂದಿದ್ದು, ಫ್ರಾನ್ಸ್ ಮತ್ತು ಫಿಜಿಯ ನೈಸರ್ಗಿಕ ಬುಗ್ಗೆ ನೀರು ಹಾಗೂ ಐಸ್ ಲ್ಯಾಂಡ್ ನ ಹಿಮನದಿಯ ನೀರಿನ ಮಿಶ್ರಣವಾಗಿದೆ. ಇನ್ನು ಈ ಪ್ರತಿ ಬಾಟಲ್ ಬೆಲೆ ಎಷ್ಟು ಗೊತ್ತಾ? ಸಾಮಾನ್ಯ ಜನರು ಊಹಿಸಲು ಕೂಡ ಸಾಧ್ಯವಿಲ್ಲ. ಬರೋಬ್ಬರಿ 49 ಲಕ್ಷ ರೂ.!
ಇಲ್ಲಿದೆ ನೋಡಿ ನೀತಾ ಅಂಬಾನಿ ಸೌಂದರ್ಯದ ಗುಟ್ಟು!
ಈ ನೀರಿನ ವಿಶೇಷತೆಯೇನು?
ವರದಿಗಳ ಪ್ರಕಾರ ಈ ವಾಟರ್ ಬಾಟಲ್ 750 ಮೀ.ಲೀಟರ್ ನೀರನ್ನು ಹೊಂದಿರುತ್ತದೆ. ಇನ್ನು ಈ ಬಾಟಲ್ ಅನ್ನು 24 ಕ್ಯಾರೆಟ್ ಚಿನ್ನದಿಂದ ಸಿದ್ಧಪಡಿಸಲಾಗಿರುತ್ತದೆ. ಹಾಗೆಯೇ ಈ ಬಾಟಲ್ ಒಳಗಿನ ನೀರಿಗೆ ಕೂಡ 5ಗ್ರಾಂ ಚಿನ್ನವನ್ನು ಸೇರಿಸಲಾಗುತ್ತದೆ. ಈ ಬ್ರ್ಯಾಂಡ್ ನೀರು ವಿಶ್ವದಲ್ಲೇ ಅತ್ಯಂತ ದುಬಾರಿ ಎಂದು ಹೇಳಲಾಗಿದೆ. ತ್ವಚೆಯನ್ನು ಯೌವನದಂತೆ ಕಾಂತಿಯುತವಾಗಿಡಲು ಈ ಚಿನ್ನದ ಕಣಗಳು ನೆರವು ನೀಡುತ್ತವೆ ಎಂದು ಹೇಳಲಾಗಿದೆ. ಹೀಗಾಗಿ ಯೌವನದ ಕಾಂತಿಯುತ ತ್ವಚೆ ಹಾಗೂ ಹೆಚ್ಚು ಕ್ರಿಯಾಶೀಲತೆಯಿಂದ ಇರಲು ನೀತಾ ಅಂಬಾನಿ ಈ ಚಿನ್ನದ ನೀರನ್ನು ಕುಡಿಯುತ್ತಾರೆ ಎಂದು ಹೇಳಲಾಗಿದೆ.
ನೀತಾ ಅಂಬಾನಿಯ 500 ಕೋಟಿ ಮೌಲ್ಯದ ಅಭರಣದ ನಕಲು 178 ರೂ.ಗೆ ಮಾರಾಟ! ವೈರಲ್ ಆಯ್ತು ವಿಡಿಯೋ
ವೈರಲ್ ಫೋಟೋ ನಿಜವಲ್ಲ
ಅಂದಹಾಗೇ ವೈರಲ್ ಆಗಿರುವ ನೀತಾ ಅಂಬಾನಿ ಚಿನ್ನದ ಬಾಟಲಿಯಲ್ಲಿ ನೀರು ಕುಡಿಯುತ್ತಿರುವ ಫೋಟೋ ನೈಜ್ಯವಾಗಿರೋದಲ್ಲ. ಈ ಫೋಟೋವನ್ನು ಮಾರ್ಫ್ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಮಾರ್ಫ್ ಮಾಡಿರುವ ಫೋಟೋವನ್ನು ಆಧಾರವಾಗಿಟ್ಟುಕೊಂಡು ಆಂಗ್ಲ ಮಾಧ್ಯಮ ಈ ಸುದ್ದಿಯನ್ನು ಪ್ರಕಟಿಸಿದೆ. 2015ರ ಐಪಿಎಲ್ ಪಂದ್ಯದ ಸಂದರ್ಭದಲ್ಲಿ ನೀತಾ ಅಂಬಾನಿ ಸಾಮಾನ್ಯ ನೀರಿನ ಬಾಟಲಿಯಲ್ಲಿ ನೀರು ಕುಡಿಯುತ್ತಿರುವ ಫೋಟೋ ಇದೆ. ಈ ಫೋಟೋದಲ್ಲಿನ ಬಾಟಲ್ ಅನ್ನು ಚಿನ್ನದ ಬಾಟಲ್ ಆಗಿ ರೂಪಾಂತರಿಸಲಾಗಿದೆ. ಹೀಗಾಗಿ ನೀತಾ ಅಂಬಾನಿ ನಿಜವಾಗಿಯೂ ವಿಶ್ವದ ಅತ್ಯಂತ ದುಬಾರಿ ನೀರನ್ನು ಕುಡಿಯುತ್ತಾರಾ? ಎಂಬುದು ಖಚಿತವಾಗಿಲ್ಲ.
ನೀತಾ ಅಂಬಾನಿ ಅವರ ಬಳಿ ದುಬಾರಿ ಬೆಲೆಯ ಟೀ ಸೆಟ್ ಇದೆ. ಇದರಲ್ಲೇ ಅವರು ಪ್ರತಿದಿನ ಟೀ ಕುಡಿಯುತ್ತಾರೆ. ಇದನ್ನು ಜಪಾನ್ ಮೂಲದ ಕಂಪನಿ ಸಿದ್ಧಪಡಿಸಿದ್ದು, ಅದರ ಬೆಲೆ ಸುಮಾರು 1.5 ಕೋಟಿ ರೂ.!