ಪಾತಾಳಕ್ಕೆ ಕುಸಿದು ಮತ್ತೆ ಸಾಮ್ರಾಜ್ಯ ಕಟ್ಟಿದ ಅದಾನಿ, ಅಂಬಾನಿ ಹಿಂದಿಕ್ಕಿ ಏಷ್ಯಾದ ಶ್ರೀಮಂತ ಕಿರೀಟ!

By Chethan Kumar  |  First Published Jun 2, 2024, 6:30 PM IST

ಹಿಂಡನ್‌ಬರ್ಗ್ ವರದಿ ಬಳಿಕ ಗೌತಮ್ ಅದಾನಿ ಷೇರುಗಳು ಪಾತಾಳಕ್ಕೆ ಕುಸಿದಿತ್ತು. ರಾಜಕೀಯವಾಗಿಯೂ ಕೋಲಾಹಲ ಸೃಷ್ಟಿಯಾಗಿತ್ತು. ಆದರೆ ಅಷ್ಟೇ ವೇಗದಲ್ಲಿ ಮತ್ತೆ ಸಾಮ್ರಾಜ್ಯ ಕಟ್ಟಿದ ಗೌತಮ್ ಅದಾನಿ ಇದೀಗ ಮುಕೇಶ್ ಅಂಬಾನಿ ಹಿಂದಿಕ್ಕಿದ ಅದಾನಿ ಏಷ್ಯಾದ ಶ್ರೀಮಂತ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 


ನವದೆಹಲಿ(ಜೂನ್ 02) ಉದ್ಯಮಿ ಗೌತಮ್ ಅದಾನಿ ಕಳೆದೊಂದು ವರ್ಷದಲ್ಲಿ ಭಾರಿ ಟೀಕೆ, ಆರೋಪ, ನಷ್ಟ ಅನುಭವಿಸಿದ್ದರು. ಹಿಂಡನ್‌ಬರ್ಗ್ ವರದಿ ಪ್ರಕಟಗೊಂಡ ಬಳಿಕ ಭಾರತದಲ್ಲಿ ಕೋಲಾಹಲ ಎದ್ದಿತ್ತು. ಅದಾನಿ ಷೇರುಗಳು ಪಾತಾಳಕ್ಕೆ ಕುಸಿದಿತ್ತು. ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದರು. ಆದರೆ ಸದ್ದಿಲ್ಲದ ಮತ್ತೆ ಸಾಮ್ರಾಜ್ಯ ಕಟ್ಟಿದ ಗೌತಮ್ ಅದಾನಿ ಇದೀಗ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿರುವ ನಂಬರ್ 1 ಭಾರತೀಯ ಅನ್ನೋ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹಿಂದಿಕ್ಕಿರುವ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.

ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿರುವ ಏಷ್ಯಾದ ಶ್ರೀಮಂತರ ವರದಿಯಲ್ಲಿ ಗೌತಮ್ ಅದಾನಿ ಮೊದಲ ಸ್ಥಾನಕ್ಕೇರಿದ್ದರೆ, ಮುಕೇಶ್ ಅಂಬಾನಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.  ಅದಾನಿ ನೆಟ್‌ ವರ್ತ್ ಒಟ್ಟು 111 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವಾಗಿದ್ದರೆ, ಅಂಬಾನಿ ಒಟ್ಟು ಆಸ್ತಿ 109 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಬ್ಲೂಮ್‌ಬರ್ಗ್ ಇಂಡೆಕ್ಸ್ ವರದಿ ಹೇಳಿದೆ.

Tap to resize

Latest Videos

ನಷ್ಟದಲ್ಲಿರುವ ಪೇಟಿಎಂ ಅದಾನಿ ತೆಕ್ಕೆಗೆ? ವರದಿ ಬೆನ್ನಲ್ಲೇ ಷೇರು ಮೌಲ್ಯ ಶೇ.5ಕ್ಕೆ ಜಿಗಿತ!

ಗೌತಮ್ ಅದಾನಿ ಈಗಾಗಲೇ ತಮ್ಮ ಉದ್ಯಮ ಸಾಮ್ರಾಜ್ಯ ವಿಸ್ತರಣೆ ಭಾರಿ ಮೊತ್ತ ಹೂಡಿಕೆ ಮಾಡಿದ್ದಾರೆ. ಇದರ ಲಾಭ ಹಾಗೂ ಪ್ರಯೋಜನ ಕೆಲವೇ ವರ್ಷಗಳಲ್ಲಿ ಅದಾನಿ ಗ್ರೂಪ್ ಆಫ್ ಕಂಪನಿ ಕೈ ಸೇರಲಿದೆ ಎಂದು ತಜ್ಞರು ವಿಶ್ಲೇಶಿಸಿದ್ದಾರೆ. ಕಾರಣ ಕೆಲವೇ ಅವಧಿಯಲ್ಲಿ ಅದಾನಿ ಕಂಪನಿಗಳು ಬರೋಬ್ಬರಿ 90 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡಿದೆ.

2023ರಲ್ಲಿ ಅದಾನಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಹಿಂಡನ್‌ಬರ್ಗ್ ವರದಿಯಿಂದ ಅದಾನಿ ಉದ್ಯಮ ಸಾಮ್ರಾಜ್ಯಕ್ಕೆ ಭಾರಿ ಹಿನ್ನಡೆಯಾಗಿತ್ತು. 2023ರಲ್ಲಿ ಸುಪ್ರೀಂ ಕೋರ್ಟ್ ಹಿಂಡನ್‌ಬರ್ಗ್ ವರದಿ ಕುರಿತು ತನಿಖೆಗೆ ಆದೇಶಿಸಿತ್ತು. ಹಿಂಡನ್‌ಬರ್ಗ್ ವರದಿಗೂ ಮುನ್ನ ಅದಾನಿ ವಿಶ್ವದ 3ನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈ ವರದಿ ಬಳಿಕ ಅದಾನಿ ಷೇರುಗಳು ಪಾತಾಳಕ್ಕೆ ಕುಸಿದಿತ್ತು. ಲಕ್ಷ ಕೋಟಿ ರೂಪಾಯಿಗಳ ನಷ್ಟ ಸಂಭವಿಸಿತ್ತು. ಹೀಗಾಗಿ ಶ್ರೀಮಂತರ ಪಟ್ಟಿಯಿಂದ ಅದಾನಿ ಹೊರಬಿದ್ದಿದ್ದರು. 

ಅದಾನಿ ಷೇರುಪೇಟೆ ಹಾಗೂ ಉದ್ಯಮದಲ್ಲಿ ಮೋಸದ ಮಾರ್ಗದಲ್ಲಿ ಆದಾಯಗಳಿಸುತ್ತಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆ ಆರೋಪಿಸಿತ್ತು. ಈ ಬಗ್ಗೆ ಷೇರುಪೇಟೆ ನಿಯಂತ್ರಣ ಪ್ರಾಧಿಕಾರವಾದ ‘ಸೆಬಿ’ ತನಿಖೆ ನಡೆಸಿತ್ತು.  ಸುಪ್ರೀಂ ಕೋರ್ಟ್ ಸೂಚನೆಯಿಂತ ತನಿಖೆ ನಡೆಸಿದ ಸೆಬಿ  ಹಿಂಡನ್‌ಬರ್ಗ್‌ ಸಮೂಹ ಮಾಡಿದ್ದ ಆರೋಪ ಸಾಬೀತುಪಡಿಸುವ ಯಾವುದೇ ಅಂಶಗಳೂ ಕಂಡುಬಂದಿಲ್ಲ ಎಂದು ಹೇಳಿತ್ತು.

ಅಧಿಕಾರಕ್ಕೆ ಬಂದ 1 ತಿಂಗಳಲ್ಲೇ ಅದಾನಿ ಹಗರಣ ತನಿಖೆ: ಕಾಂಗ್ರೆಸ್‌
 

click me!