ಗೂಗಲ್ ಸೇರಿ ಭಾರತದ ಟಾಪ್ ಕಂಪನಿ ಎಂಜಿನೀಯರ್ಸ್‌ಗೆ ಕೊಡುತ್ತಿರುವ ಸ್ಯಾಲರಿ ಎಷ್ಟು?

Published : Jun 02, 2024, 07:08 PM IST
ಗೂಗಲ್ ಸೇರಿ ಭಾರತದ ಟಾಪ್ ಕಂಪನಿ ಎಂಜಿನೀಯರ್ಸ್‌ಗೆ ಕೊಡುತ್ತಿರುವ ಸ್ಯಾಲರಿ ಎಷ್ಟು?

ಸಾರಾಂಶ

ಭಾರತದಲ್ಲಿ ಗೂಗಲ್, ಅಮೆಜಾನ್ ಸೇರಿ ಹಲವು ಮಲ್ಟಿನ್ಯಾಷನಲ್ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಟಾಪ್ ಮೋಸ್ಟ್ ಕಂಪನಿಗಳು ಎಂಜಿನೀಯರ್ಸ್‌ಗೆ ಕೊಡುತ್ತಿರುವ ವೇತನವೆಷ್ಟು?   

ನವದೆಹಲಿ(ಜೂ.02) ಭಾರತದಲ್ಲಿ ಪ್ರತಿಷ್ಠಿತ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗರಿಷ್ಠ ವೇತನ ನೀಡುತ್ತಿದೆ. ಅದರಲ್ಲೂ ಸಾಫ್ಟ್‌ವೇರ್ ಕಂಪನಿಗಳು ಲಕ್ಷ ಲಕ್ಷ ರೂಪಾಯಿಯಲ್ಲಿ ಸ್ಯಾಲರಿ ನೀಡುತ್ತಿದೆ. ಈ ಪೈಕಿ ಭಾರತಲ್ಲಿ ಪ್ರಮುಖ ಕಂಪನಿಯಾಗಿ ಗುರುತಿಸಿಕೊಂಡಿರುವ ಕಂಪನಿಗಳು ಭಾರತೀಯ ಎಂಜಿನಿಯರ್ಸ್‌ಗೆ ನೀಡುತ್ತಿರುವ ಸ್ಯಾಲರಿ ಮಾಹಿತಿ ಬಹಿರಂಗವಾಗಿದೆ. ಅತೀ ಕಡಿಮೆ ವೇತನ ನೀಡುವ ಕೆಲ ಕಂಪನಿಗಳೂ ಭಾರತದಲ್ಲಿದೆ. ಆದರೆ ಭಾರತದಲ್ಲಿ ಪ್ರತಿಷ್ಠಿತ ಕಂಪನಿಗಳು ಎಂಜಿನೀಯರ್ಸ್‌ಗೆ ಕೊಡುತ್ತಿರುವ ವಾರ್ಷಿಕ ಸರಾಸರಿ ಸ್ಯಾಲರಿ ಬರೋಬ್ಬರಿ 50 ರಿಂದ 55 ಲಕ್ಷ ರೂಪಾಯಿ.

ಭಾರತದಲ್ಲಿ ಗೂಗಲ್ ತನ್ನ ಎಂಜಿನೀಯರ್ಸ್‌ಗೆ ವಾರ್ಷಿಕ ಕನಿಷ್ಠ 66 ಲಕ್ಷ ರೂಪಾಯಿ ವೇತನ ನೀಡುತ್ತಿದೆ. ಇನ್ನು ಗರಿಷ್ಠ ಕೋಟಿ ರೂಪಾಯಿಯಲ್ಲಿದೆ. ಗೂಗಲ್ ಗರಿಷ್ಟ ವೇತನವನ್ನು ನೀಡುವ ಮೂಲಕ ನಂಬರ್ 1 ಕಂಪನಿಯಾಗಿ ಹೊರಹೊಮ್ಮಿದೆ. ಗೂಗಲ್ ಎಂಜಿನೀಯರ್ಸ್‌ಗೆ ಮಾತ್ರವಲ್ಲ, ಇತರ ಉದ್ಯೋಗಿಗಳಿಗೂ ಅತೀ ಹೆಚ್ಚು ವೇತನ ನೀಡುತ್ತಿದೆ.

ಪಾತಾಳಕ್ಕೆ ಕುಸಿದು ಮತ್ತೆ ಸಾಮ್ರಾಜ್ಯ ಕಟ್ಟಿದ ಅದಾನಿ, ಅಂಬಾನಿ ಹಿಂದಿಕ್ಕಿ ಏಷ್ಯಾದ ಶ್ರೀಮಂತ ಕಿರೀಟ!

ಭಾರತದಲ್ಲಿ ಮತ್ತೊಂದು ಪ್ರತಿಷ್ಠಿತ ತಂಪನಿ ಎಟ್ ಗೊಜೆಕ್(At Gojek) ಕಂಪನಿ ತನ್ನ ಎಂಜಿನೀಯರ್ಸ್‌ಗೆ ವಾರ್ಷಿಕ ಸ್ಯಾಲರಿ 59.7 ಲಕ್ಷ ರೂಪಾಯಿ ನೀಡುತ್ತಿದೆ. ಮೈಕ್ರೋಸಾಫ್ಟ್ ಕಂಪನಿಯ ಎಂಜಿನೀಯರ್ಸ್‌ಗೆ ವಾರ್ಷಿಕ 58.5 ಲಕ್ಷ ರೂಪಾಯಿ ವೇತನ ನೀಡುತ್ತಿದೆ. ಇನ್ನು ಝೆಟಾ ವಾರ್ಷಿಕ ಸ್ಯಾಲರಿ 58 ಲಕ್ಷ ರೂಪಾಯಿ ವೇತನ ನೀಡುತ್ತಿದೆ.ಅಡೋಬ್ ಕಂಪನಿ ಒಬ್ಬ ಎಂಜಿನೀಯರ್‌ಗೆ ವಾರ್ಷಿಕವಾಗಿ 56.3 ಲಕ್ಷ ರೂಪಾಯಿ ವೇತನ ನೀಡುತ್ತಿದೆ. ಸೇಲ್ಸ್ ಫೋರ್ಸ್ ಕಂಪನಿ ಒಬ್ಬ ಎಂಜಿನೀಯರ್‌ಗೆ 56.1 ಲಕ್ಷ ರೂಪಾಯಿ ವೇತನ ನೀಡುತ್ತಿದೆ.

ಗೋಲ್ಡಮಾನ್ ಕಂಪನಿ ಒಬ್ಬ ಎಂಜಿನೀಯರ್‌ಗೆ ವಾರ್ಷಿಕವಾಗಿ 51.4 ಲಕ್ಷ ರೂಪಾಯಿ ವೇತನ ನೀಡುತ್ತಿದೆ. ಇನ್ನು ಅಮೇಜಾನ್ ಎಂಜಿನಿಯರ್ ವಾರ್ಷಿಕ 44.2 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಪ್ರತಿಷ್ಠಿತ ಕಂಪನಿಗಳ ಪೈಕಿ ಅಮೆಜಾನ್ ಸ್ಯಾಲರಿ 50 ಲಕ್ಷಕ್ಕಿಂತ ಕೆಳಗಿದೆ. ಇನ್ನುಳಿದ ಎಲ್ಲಾ ಪ್ರತಿಷ್ಠಿತ ಕಂಪನಿಗಳ ವಾರ್ಷಿಕ ವೇತನ 50 ಲಕ್ಷ ರೂಪಾಯಿಗಿಂತ ಮೇಲಿದೆ.

ಜೂನ್ 4 ರಿಂದ ಹಲವು ದೇಶದಲ್ಲಿ ಗೂಗಲ್ ಪೇ ಸ್ಥಗಿತ, ಭಾರತದಲ್ಲಿ ಮುಂದುವರಿಯುತ್ತಾ?

ಭಾರತದಲ್ಲಿ ಹಲವು ನಗರಗಳು ಐಟಿ ಸಿಟಿಯಾಗಿ ಹೊರಹೊಮ್ಮಿದೆ. ಆದರೆ ಬೆಂಗಳೂರು ವೇತನ ವಿಚಾರದಲ್ಲಿ ಇತರ ನಗರಗಳಿಗಿಂತ ಗರಿಷ್ಠ ವೇತನ ನೀಡುವ ನಗರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಲಿಕಾನ್ ಸಿಟಿ, ಐಟಿ ಸಿಟಿ ಎಂದೇ ಪ್ರಖ್ಯಾತಿಗೊಂಡಿರುವ ಬೆಂಗಳೂರು ವಿಶ್ವದ ಪ್ರಮುಖ ನಗರಳ ಪೈಕಿ ಒಂದಾಗಿದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ