ಲಾಕ್‌ಡೌನ್ ಸಂಕಷ್ಟ; ಪೈಂಟರ್ಸ್ ನೆರವಿಗೆ ಧಾವಿಸಿದ ನಿಪ್ಪಾನ್!

By Suvarna NewsFirst Published Apr 4, 2020, 8:21 PM IST
Highlights

ಕೊರೋನಾ ವೈರಸ್ ಇದೀಗ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿವೆ. ಲಾಕ್‌ಡೌನ್‌ನಿಂದ ದಿನಗೂಲಿ ನೌಕರರು, ಬಡವರು, ನಿರ್ಗತಿಕರು ಊಟಕ್ಕೂ ಪರದಾಡುವಂತಾಗಿದೆ. ಪೈಟಿಂಗ್ ಕೆಲಸ ಮಾಡುವ ಪೈಂಟರ್ಸ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಪೈಂಟರ್ಸ್ ನೆರವಿಗೆ ನಿಪ್ಪಾನ್ ಪೈಂಟ್ ಇಂಡಿಯಾ ಧಾವಿಸಿದೆ.

ಬೆಂಗಳೂರು(ಏ.04): ಕೊರೋನಾ ವೈರಸ್‌ ಹೊಡೆತಕ್ಕೆ ಕಾರ್ಮಿಕರು, ದಿನಗೂಲಿ ನೌಕರರು ಹೆಚ್ಚು ನಲುಗಿದ್ದಾರೆ. ಪೈಂಟರ್‌ಗಳ ಜೀವನವೂ ದುಸ್ಥರವಾಗಿದೆ. ಲಾಕ್‌ಡೌನ್‌ನಿಂದ ದಿನದ ಸಂಬಳಕ್ಕೆ ಕತ್ತರಿ ಬಿದ್ದಿದೆ. ಇತ್ತ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಇದೀಗ ಕಷ್ಟದಲ್ಲಿರುವ ಪೈಂಟರ್ಸ್ ನೆರವಿಗೆ ಏಷ್ಯಾದ ಅತೀ ದೊಡ್ಡ ಪೈಂಟ್ ಉತ್ಪಾದಕ ಕಂಪನಿ ನಿಪ್ಪಾನ್ ಪೈಂಟ್ ಇಂಡಿಯಾ(Nippon Paint (India) Private Limited ) ನಿಂತಿದೆ. 

ಗೋಡೆಗಷ್ಟೇ ಅಲ್ಲ, ಬದುಕಿಗೂ ಬಣ್ಣ ತುಂಬುವ ನಿಪ್ಪಾನ್ ಪೈಂಟ್ಸ್.

ಕರ್ನಾಟಕದಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿರುವವರಿಗೆ ನಿಪ್ಪಾನ್ ಪೈಂಟ್ ಸಹಾಯ ಹಸ್ತ ಚಾಚಿದೆ. ಈ ಮೂಲಕ ಪೈಂಟರ್ಸ್ ಕತ್ತಲ ಬದುಕಿಗೆ ಬೆಳಕಾಗಿದೆ. ಕರ್ನಾಟಕದಲ್ಲಿನ ಪೈಂಟಿಂಗ್ ಕೆಲಸಗಾರರಿಗೆ ಸುಲಭವಾಗಿ ಆಹಾರ ವಿತರಿಸಲು ಎರಡು ವಿಂಗಡ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿರುವ ಪೈಂಟರ್ಸ್‌‍ಗೆ ಇ ವೋಚರ್ ಮೂಲಕ ಹಣ ವರ್ಗಾಯಿಸಲಾಗುತ್ತಿದೆ. ಈ ಮೂಲಕ ಪೈಂಟರ್ಸ್ ಸೂಪರ್ ಮಾರ್ಕೆಟ್‌ನಲ್ಲಿ ಆಹಾರ ವಸ್ತುಗಳನ್ನು ಖರೀದಿಸುವ ಅವಕಾಶ ಮಾಡಿಕೊಡಲಾಗಿದೆ.

ನಿಪ್ಪಾನ್ ಪೈಂಟ್ಸ್: ಗೋಡೆಗೆ ಬಣ್ಣ, ಬದುಕಿಗೆ ಅನ್ನ, ಹೀಗಂತಾರೆ ಡೀಲರ್ ರವಿ ಅಣ್ಣ

ಇನ್ನು ಹಳ್ಳಿ ಹಾಗೂ ತಾಲೂಕು ಮಟ್ಟದಲ್ಲಿರುವ ಪೈಂಟಿಂಗ್ ಕೆಲಸಗಾರರಿಗಾಗಿ ಸ್ಥಳೀಯ ದಿನಸಿ ಅಂಗಡಿ ಜೊತೆ ನಿಪ್ಪಾನ್ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಕರ್ನಾಟಕದಲ್ಲಿ ಕಷ್ಟದಲ್ಲಿರುವ ಎಲ್ಲಾ ಪೈಂಟರ್ಸ್‌ಗೆ ನಿಪ್ಪಾನ್ ನೆರವಾಗಿದೆ ನಿಪ್ಪಾನ್ ಪ್ರತಿ ಭಾರಿಯೂ ಪೈಂಟರ್ಸ್‌ಗೆ ಬೆಂಬಲ ನೀಡಿದೆ. ಪೈಂಟರ್ಸ್‌ ನಮ್ಮ ಆಧಾರ ಸ್ಥಂಭ. ಸದ್ಯ ಕೊರೋನಾ ವೈರಸ್‌ನಿಂದಾಗಿ ಇಡೀ ಜಗತ್ತೆ ಸಂಕಷ್ಟದಲ್ಲಿದೆ. ಹೀಗಾಗಿ ನಮ್ಮ ಪೈಂಟರ್‌ಗಳ ಹೊರೆ ಹಾಗೂ ಕಷ್ಟ ಕಡಿಮೆ ಮಾಡಲು ನಾವು ಬದ್ಧರಾಗಿದ್ದೇವೆ. ಬಹುತೇಕ ಪೈಂಟರ್ಸ್ ದಿನಗೂಲಿ ನೌಕರರು. ಸದ್ಯ ನಮ್ಮ ಕಿರು ಸಹಾಯ ಲಾಕ್‌ಡೌನ್ ಸಂದರ್ಭದಲ್ಲಿ ಪೈಂಟರ್ ಕುಟಂಬಕ್ಕೆ ನೆರವಾಗಲಿದೆ ಎಂದು ನಿಪ್ಪಾನ್ ಪೈಂಟ್ ಇಂಡಿಯಾ ಪ್ರವೇಟ್ ಲಿಮಿಟೆಡ್ ಅಧ್ಯಕ್ಷ ಎಸ್.ಮಹೇಶ್ ಆನಂದ್ ಹೇಳಿದ್ದಾರೆ.

"

ಜಪಾನ್‌ನಲ್ಲಿ ಆರಂಭವಾದ ನಿಪ್ಪಾನ್ ಪೈಂಟ್ ಇದೀಗ 140 ವರ್ಷಗಳನ್ನು ಪೂರೈಸಿ ಇದೀಗ ಏಷ್ಯಾದ ನಂ.1 ಹಾಗೂ ವಿಶ್ವಗ ಅತೀ ದೊಡ್ಡ ಪೈಂಟ್ ಉತ್ಪಾದಕ ಕಂಪನಿಯಾಗಿದೆ. ನಿಪ್ಪಾನ್ ಅತ್ಯುತ್ತಮ ಗುಣಮಟ್ಟದ ಪೈಂಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 

click me!