ಬಾಳೆಹಣ್ಣಿಗಲ್ಲ, ಪ್ಲೇಟಿಗೆ ತೆರಿಗೆ: ರಾಹುಲ್ ಬನಾನಾ ಸ್ಟೋರಿಗೆ ಟ್ವಿಸ್ಟ್!

By Web DeskFirst Published Jul 27, 2019, 7:48 PM IST
Highlights

ರಾಹುಲ್ ಬೋಸ್ ಬಾಳೆಹಣ್ಣು ಪ್ರಸಂಗಕ್ಕೆ ಹೊಸ ಟ್ವಿಸ್ಟ್| ತೆರಿಗೆ ವಿಧಿಸಿದ್ದು ಬಾಳೆಹಣ್ಣಿಗಲ್ಲ, ಸರ್ವ್ ಮಾಡಿದ ಬೆಳ್ಳಿ ತಟ್ಟೆಗಂತೆ| ವಿಚಾರಣೆಗಾಗಿ ಪಂಚತಾರಾ ಹೋಟೆಲ್’ಗೆ ತೆರಳಿದ ತೆರಿಗೆ ಅಧಿಕಾರಿಗಳು| ಪಂಚತಾರಾ ಹೋಟೆಲ್’ಗಳಲ್ಲಿ ಸರ್ವ್ ಮಾಡುವ ಬೆಳ್ಳಿ ತಟ್ಟೆಗೆ ತೆರಿಗೆ ವಿಧಿಸುವುದು ಸಾಮಾನ್ಯ| ಹಣ್ಣುಗಳು ಜಿಎಸ್’ಟಿ ತೆರಿಗೆ ವ್ಯಾಪ್ತಿಯಡಿ ಬರುವುದಿಲ್ಲ|

ಚಂಢೀಗಡ್(ಜು.27): ಪಂಚತಾರಾ ಹೋಟೆಲ್’ನಲ್ಲಿ ಎರಡು ಬಾಳೆಹಣ್ಣುಗಳಿಗೆ 442 ರೂ. ಬಿಲ್ ಮಾಡಿದ್ದಾರೆ ಎಂಬ ಬಾಲಿವುಡ್ ನಟ ರಾಹುಲ್ ಬೋಸ್ ಆರೋಪಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ರಾಹುಲ್ ಬೋಸ್ ವಿಡಿಯೋ ಆಧರಿಸಿ ಪಂಚತಾರಾ ಹೋಟೆಲ್’ಗೆ ಜಿಎಸ್’ಟಿ ತೆರಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಣ್ಣುಗಳು ಜಿಎಸ್’ಟಿ ತೆರಿಗೆಯಡಿ ಬರುವದಿಲ್ಲವಾದ್ದರಿಂದ ಹೋಟೆಲ್ ಅದ್ಹೆಗೆ ಎರಡು ಬಾಳೆಹಣ್ಣುಗಳಿಗೆ ಇಷ್ಟೊಂದು ತೆರಿಗೆ ವಿಧಿಸಿದೆ ಎಂಬ ಕುರಿತು ಪರಿಶೀಲನೆ ನಡೆಸಲಾಗಿದೆ.

ತೆರಿಗೆ ಅಧಿಕಾರಿಗಳ ತಂಡ ಈಗಾಗಲೇ ಹೋಟೆಲ್’ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆರಿಗೆ ಬಾಳೆಹಣ್ಣಿಗಲ್ಲ ಬದಲಿಗೆ ಬಾಳೆಹಣ್ಣನ್ನು ಸರ್ವ್ ಮಾಡಿದ ಬೆಳ್ಳಿ ತಟ್ಟೆಗೆ ವಿಧಿಸಲಾಗಿದೆ ಎಂಬ ವಾದ ಕೇಳಿ ಬಂದಿದೆ.

ಅದ್ಯಾಗ್ಯೂ ಹೋಟೆಲ್ ಆಡಳಿತ ಮಂಡಳಿ ಈ ಕುರಿತು ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಪಂಚತಾರಾ ಹೋಟೆಲ್’ಗಳಲ್ಲಿ ತಿಂಡಿ-ತಿನಿಸುಗಳನ್ನು ಸರ್ವ್ ಮಾಡುವ ಬೆಳ್ಳಿ ತಟ್ಟೆಗೆ ತೆರಿಗೆ ವಿಧಿಸುವುದು ಸಾಮಾನ್ಯ ಪ್ರಕ್ರಿಯೆ ಎನ್ನಲಾಗಿದೆ.

click me!