ಅಕ್ರಮ ಹಣ ವರ್ಗಾವಣೆ: ಲಕ್ಮೀ ಮಿತ್ತಲ್ ಸಹೋದರ ಬಂಧನ!

By Web DeskFirst Published Jul 24, 2019, 7:00 PM IST
Highlights

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪ್ರಮೋದ್ ಮಿತ್ತಲ್ ಬಂಧನ| ಬೋಸ್ನಿಯಾದಲ್ಲಿ ಬಂಧಿಸಲ್ಪಟ್ಟ  ಲಕ್ಷ್ಮಿ ಮಿತ್ತಲ್ ಸಹೋದರ ಪ್ರಮೋದ್ ಮಿತ್ತಲ್| ಪ್ರಮೋಧ್ ಮಿತ್ತಲ್ ಜೊತೆಗೆ ಮತ್ತಿಬ್ಬರು ಅಧಿಕಾರಿಗಳ ಬಂಧನ| ಪ್ರಮೋದ್ ಮಿತ್ತಲ್’ಗೆ ಕನಿಷ್ಟ 45 ವರ್ಷಗಳ ಜೈಲುಶಿಕ್ಷೆ ಸಂಭವ?|

ಸರ್ಜೆವೋ(ಜು.23): ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ವಿಶ್ವ ಪ್ರಸಿದ್ಧ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಸಹೋದರ ಪ್ರಮೋದ್ ಮಿತ್ತಲ್ ಅವರನ್ನು ಬೋಸ್ನಿಯಾದಲ್ಲಿ ಬಂಧಿಸಲಾಗಿದೆ.

ಗ್ಲೋಬಲ್ ಇಸ್ಪಾಟ್ ಚಾರ್ಕೋಲ್ ಇಂಡಸ್ಟ್ರಿ ಲುಕಾವಾಕ್ ಮೂಲಕ ಹಣ ವರ್ಗಾವಣೆಯ ಆರೋಪದಡಿ ಮಿತ್ತಲ್ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಮಿತ್ತಲ್ ಜೊತೆಗೆ ಜನರಲ್ ಮ್ಯಾನೇಜರ್ ಪರಮೇಶ್ ಭಟ್ಟಾಚಾರ್ಯ ಸೇರಿದಂತೆ ಮತ್ತಿಬ್ಬರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮೋದ್ ಮಿತ್ತಲ್ ಬೋಸ್ನಿಯಾದ ಲುಕವ್ಯಾಕ್‍ನಲ್ಲಿ ಗೋಕಿಲ್ ಎಂಬ ಕೋಕ್ ಘಟಕವನ್ನು 2003ರಲ್ಲಿ ಸ್ಥಾಪಿಸಿದ್ದರು. 

ಇದೀಗ ಆದರೆ ಮಿತ್ತಲ್ ವಿರುದ್ಧ ಸಂಘಟಿತ ಅಪರಾಧದ ಆರೋಪ ಕೇಳಿ ಬಂದಿದ್ದು, ಮಿತ್ತಲ್  ಕನಿಷ್ಟ 45 ವರ್ಷಗಳ ಕಾಲ ಜೈಲುಶಿಕ್ಷೆಗೆ ಗುರಿಯಾಗಬಹುದು ಎಂದು ಅಂದಾಜಿಸಲಾಗಿದೆ.

click me!